Karnataka news paper

ಕೆಂಪು ಕೋಟೆ ನನ್ನ ಅಜ್ಜನದು; ನಮಗೆ ನೀಡಿ, ಇಲ್ಲವೇ ಹಣ ಕೊಡಿ: ಹೈಕೋರ್ಟ್‌ನಲ್ಲಿ ಮಹಿಳೆಯಿಂದ ಅರ್ಜಿ


ಹೈಲೈಟ್ಸ್‌:

  • ಐತಿಹಾಸಿಕ ಕೆಂಪು ಕೋಟೆ ನಮ್ಮದು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಮಹಿಳೆ
  • 1857ರಲ್ಲಿ ಕೆಂಪು ಕೋಟೆಯನ್ನು ಬ್ರಿಟೀಷರು ಅಕ್ರಮವಾಗಿ ವಶ ಪಡಿಸಿಕೊಂಡಿದ್ದರು
  • ಹೀಗಾಗಿ ಅದನ್ನು ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಸಿದ ಸುಲ್ತಾನಾ ಬೇಗಂ

ಹೊಸ ದಿಲ್ಲಿ: ಐತಿಹಾಸಿಕ ಕೆಂಪು ಕೋಟೆ (Red Fort) ತನ್ನ ವಂಶ ಪಾರಂಪರ್ಯ ಸೊತ್ತು. ಹೀಗಾಗಿ ಅದನ್ನು ತನಗೆ ವಹಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ದಾವೆಯನ್ನು ದೆಹಲಿ ಉಚ್ಛ ನ್ಯಾಯಾಲಯ (Delhi High Court) ತಳ್ಳಿ ಹಾಕಿದೆ.

ಸುಲ್ತಾನಾ ಬೇಗಂ ಎಂಬವರೇ ಕೆಂಪು ಕೋಟೆ ನಮ್ಮ ಪಾರಂಪರಿಕ ಸೊತ್ತು ಎಂದು ಅರ್ಜಿ ಸಲ್ಲಿಸಿದ ಮಹಿಳೆ. ಸುಲ್ತಾನಾ ಅವರ ಪತಿ ಮಿರ್ಜಾ ಮಹಮ್ಮದ್‌ ಬೆದರ್‌ ಭಕ್ತ್‌ ಎಂಬವರು ಮೊಘಲ್ ದೊರೆ ಎರಡನೇ ಬಹದೂರ್‌ ಶಾ ಜಾಫರ್‌ (Bahadur Shah Zafar ||) ಅವರ ಮೊಮ್ಮಗ. ಅವರು 1980 ರ ಮೇ 22 ರಂದು ಮೃತ ಪಟ್ಟಿದ್ದಾರೆ. ಹೀಗಾಗಿ ಕೆಂಪು ಕೋಟೆ ತನಗೆ ಸೇರಿದ್ದು. ಅದನ್ನು ತನಗೆ ಹಸ್ತಾಂತರಿಸಬೇಕು ಎಂದು ಅವರು ನ್ಯಾಯಾಲದಲ್ಲಿ ವಾದ ಮಂಡಿಸಿದ್ದರು.

ವಿಚಾರಣೆ ವೇಳೆಯೇ ನ್ಯಾಯಾಧೀಶರಿಗೆ ಗನ್ ತೋರಿಸಿ ಹಲ್ಲೆ ನಡೆಸಿದ ಪೊಲೀಸರು!
ಕೆಂಪುಕೋಟೆ ಮೇಲೆ ರಾರಾಜಿಸಿದ ಕೇಸರಿ ಬಾವುಟ ಯಾವುದು?: ನಿಶಾನ್ ಸಾಹಿಬ್ ಬಗ್ಗೆ ನಿಮಗೆಷ್ಟು ಗೊತ್ತು?

ಅಲ್ಲದೇ ಇದು ನಮ್ಮ ಕುಟುಂಬದ ಸೊತ್ತಾಗಿತ್ತು. ಇದನ್ನು 1857 ರಲ್ಲಿ ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪನಿ (British East India Company) ಅಕ್ರಮವಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಹೀಗಾಗಿ ಕೆಂಪು ಕೋಟೆಯನ್ನು ಕೇಂದ್ರ ಸರ್ಕಾರ ತಮಗೆ ಹಸ್ತಾಂತರಿಸಬೇಕು. ಇಲ್ಲವೇ 1857 ರಿಂದ ಇಲ್ಲಿಯ ವರೆಗೆ ಭಾರತ ಸರ್ಕಾರವು ಕೆಂಪು ಕೋಟೆಯನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಕ್ಕೆ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

ಕೋರ್ಟ್‌ಗೆ ಬರಲು ಇಷ್ಟು ತಡ ಮಾಡಿದ್ದೇಕೆ..?

ಕೆಂಪು ಕೋಟೆ ತನ್ನ ಪಾರಂಪರಿಕ ಸೊತ್ತು ಎಂದು ಹಕ್ಕು ಮಂಡಿಸಿದ ಸುಲ್ತಾನಾ ಬೇಗಂ ಅವರ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ರೇಖಾ ಪಿಳ್ಳೈ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ಬಂದಿತ್ತು. ಅರ್ಜಿಯ ವಿಚಾರಣೆ ನಡೆಸಿ ಕೋರ್ಟ್‌, ಈ ಸಂಬಂಧ ನ್ಯಾಯಾಲಯಕ್ಕೆ ಬರಲು ಇಷ್ಟು ತಡಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿ ಅರ್ಜಿಯನ್ನು ತಳ್ಳಿ ಹಾಕಿದೆ.

‘ನನ್ನ ಇತಿಹಾಸದ ಜ್ಞಾನ ಕಡಿಮೆ ಇದೆ. ನಿಮ್ಮ ವಾದದ ಪ್ರಕಾರ 1857 ರಲ್ಲಿ ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪನಿ ನಿಮಗೆ ಅನ್ಯಾಯ ಮಾಡಿದೆ. ಆದರೆ 150 ವರ್ಷದ ಬಳಿಕ ಯಾಕೆ ನ್ಯಾಯಾಲವನ್ನು ಸಮೀಪಿಸಿದ್ದೀರಿ? ಇಷ್ಟು ವರ್ಷ ಏನು ಮಾಡುತ್ತಿದ್ದೀರಿ?’ ಎಂದು ನ್ಯಾಯಮೂರ್ತಿ ಪ್ರಶ್ನೆ ಮಾಡಿದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: ವಿವಾದಾತ್ಮಕ ತೀರ್ಪು ನೀಡಿದ್ದ ಮಹಿಳಾ ಜಡ್ಜ್‌ಗೆ ಹಿಂಬಡ್ತಿ
ದೆಹಲಿಯ ಕೆಂಪು ಕೋಟೆ ನಿರ್ಮಿಸಿದ್ದು ದೇಶದ್ರೋಹಿಗಳೇ: ಅಸಾದುದ್ದೀನ್‌ ಓವೈಸಿ ಪ್ರಶ್ನೆ

‘ಎಲ್ಲರಿಗೂ ಈ ವಿಷಯ ಗೊತ್ತಿದೆ. ಪ್ರತಿಯೊಬ್ಬರೂ ಇತಿಹಾಸ ಓದಿಕೊಂಡಿದ್ದಾರೆ. ಅದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಅರ್ಜಿ ಸಲ್ಲಿಸಲು ಇಷ್ಟು ತಡಮಾಡಿದ್ದೇಕೆ? ಅರ್ಜಿದಾರರ ಪೂರ್ವಜರೇ ಈ ಬಗ್ಗೆ ಯಾವುದೇ ತಕರಾರು ಎತ್ತಿಲ್ಲ. ಈಗ ಏಕೆ ಇವರು ಅರ್ಜಿ ಸಲ್ಲಿದ್ದಾರೆ?’ ಎಂದು ಪ್ರಶ್ನಿಸಿ ಅರ್ಜಿಯನ್ನು ತಳ್ಳಿ ಹಾಕಿತು.



Read more