Karnataka news paper

ರಾಜ್ಯಸಭಾ ಸದಸ್ಯರ ಅಮಾನತು: ಸಮಸ್ಯೆ ಬಗೆಹರಿಸಲು ಮೋದಿ ಸರ್ಕಾರ ನೀಡಿದ ಆಹ್ವಾನ ತಿರಸ್ಕರಿಸಿದ ಪ್ರತಿಪಕ್ಷಗಳು


Source : The New Indian Express

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಅಂತಿಮ ವಾರಕ್ಕೆ ಕಾಲಿಡುತ್ತಿದ್ದು, 12 ರಾಜ್ಯಸಭಾ ಸಂಸದರ ಅಮಾನತು ವಿರೋಧಿಸಿ ಪ್ರತಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ  ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ನೀಡಿದ ಆಹ್ವಾನವನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ.

ಕೇಂದ್ರ ಸರ್ಕಾರ ಐದು ಪ್ರತಿಪಕ್ಷಗಳ ನಾಯಕರ ಸಭೆ ಕರೆದಿದೆ. ಆದರೆ ಪ್ರತಿ ಪಕ್ಷಗಳು ಈ ಸಭೆಗೆ ಹಾಜರಾಗುವ ಸಾಧ್ಯತೆಯಿಲ್ಲ ಮತ್ತು ಎಲ್ಲಾ ಪ್ರತಿ ಪ್ರತಿಪಕ್ಷಗಳೊಂದಿಗೆ ಈ ವಿಷಯ ಚರ್ಚಿಸಬೇಕೆಂದು ಬಯಸುತ್ತಿವೆ.

ಇದನ್ನು ಓದಿ: ವಿಪಕ್ಷಗಳ ಸಂಸದರು ಕ್ಷಮೆ ಕೋರಿದಲ್ಲಿ ಅಮಾನತು ಆದೇಶ ವಾಪಸ್: ಪ್ರಹ್ಲಾದ್ ಜೋಶಿ​

ವಿರೋಧ ಪಕ್ಷಗಳ ನಾಯಕರು ಸೋಮವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ಸೇರಿ ಮುಂದಿನ ನಡೆ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ.

ಇದನ್ನು ಓದಿ: 12 ಸಂಸದರ ಅಮಾನತು ರದ್ಧತಿಗೆ ಪ್ರತಿಪಕ್ಷಗಳ ಬಿಗಿಪಟ್ಟು: ರಾಜ್ಯಸಭೆ ಕಲಾಪ ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಿಕೆ

12 ಸಂಸದರ ಅಮಾನತು ವಿರುದ್ಧದ ಹೋರಾಟದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿವೆ. ವಿಪಕ್ಷಗಳಲ್ಲಿ ಒಡಕು ಮೂಡಿಸಲು ಅಧಿವೇಶನದ ಅಂತ್ಯದಲ್ಲಿ ಐದು ಪಕ್ಷಗಳನ್ನು ಮಾತ್ರ ಚರ್ಚೆಗೆ ಕರೆಯಲಾಗಿದೆ ಎಂದು ಅಮಾನತುಗೊಂಡ 12 ಸಂಸದರ ಪೈಕಿ ಒಬ್ಬರಾದ ಸಿಪಿಐ ಸಂಸದ ಬಿನೋಯ್ ವಿಶ್ವಂ ಅವರು ಹೇಳಿದ್ದಾರೆ.



Read more