Source : The New Indian Express
ಬರ್ಲಿನ್: ಜರ್ಮನಿಯ ಮೊದಲ ಮಹಿಳಾ ಚಾನ್ಸೆಲರ್ ಎನ್ನುವ ಹೆಸರಿಗೆ ಪಾತ್ರರಾಗಿದ್ದ ಆಂಜೆಲಾ ಮರ್ಕೆಲ್ ಆಡಳಿತ ಅವಧಿ ಇಂದು ಮುಕ್ತಾಯಗೊಂಡಿದೆ. ಅವರು 2005ರಲ್ಲಿ ಸರ್ಕಾರದ ಮುಖ್ಯಸ್ಥ ಹುದ್ದೆಯಾದ ಚಾನ್ಸೆಲರ್ ಆಗಿ ಅಧಿಕಾರ ಸ್ವೀಕರಿಸಿದ್ದರು.
ಇದನ್ನೂ ಓದಿ: ಫೋರ್ಬ್ಸ್ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸೇರಿ ಇಬ್ಬರು ಭಾರತೀಯರಿಗೆ ಸ್ಥಾನ
ಜರ್ಮನಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವಲ್ಲಿ angela merkel ನೆರವಾಗಿದ್ದರು. 67 ವರ್ಷದ ಮರ್ಕೆಲ್ ಅವರು ನಿರ್ವಹಿಸಿದ ಕಾರ್ಯಕ್ಕೆ ಅವರಿಗೆ ಅಂತಾರಾಷ್ಟ್ರೀಯ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಜರ್ಮನಿಯಲ್ಲಿ ಕೊರೋನಾ ಪ್ರಕರಣಗಳ ಏರಿಕೆ: ವೈರಸ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಜಾರಿಗೆ ಸರ್ಕಾರ ನಿರ್ಧಾರ
ಕಳೆದ 16 ವರ್ಷಗಳಲ್ಲಿ ಮರ್ಕೆಲ್ ಅವರು 4 ಅಮೆರಿಕನ್ ಅಧ್ಯಕ್ಷರು, 4 ಫ್ರೆಂಚ್ ಅಧ್ಯಕ್ಷರು ಹಾಗೂ 5 ಬ್ರಿಟಿಷ್ ಪ್ರಧಾನಮಂತ್ರಿಗಳೊಡನೆ ಕಾರ್ಯ ನಿರ್ವಹಿಸಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟು, ಯುರೋಪಿನ ಸಾಲದ ಬಿಕ್ಕಟ್ಟು, ವಲಸೆ ಸಮಸ್ಯೆ ಹಾಗೂ ಕೊರೊನಾ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು. ಜರ್ಮನಿಯ ನೂತನ ಚಾನ್ಸೆಲರ್ ಆಗಿ ಒಲಾಫ್ ಶೊಲೊಜ್ ಅಧಿಕಾರ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಹಿಟ್ಲರನ ನಾಜಿ ಕಮಾಂಡರ್ ಪಿಎ ಆಗಿದ್ದ 96 ವರ್ಷದ ಮಹಿಳೆ ವಿಚಾರಣೆ: ಆರೋಪ ದಾಖಲಾದಾಗ ಆಕೆಗೆ 21