Karnataka news paper

ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಶಾಪಿಂಗ್ ಮಾಡುವುದಕ್ಕೆ ಹೀಗೆ ಮಾಡಿರಿ?


ಇ-ಕಾಮರ್ಸ್‌

ಹೌದು, ಹಬ್ಬ ಹರಿದಿನಗಳಲ್ಲಿ ಇ-ಕಾಮರ್ಸ್‌ ಸೈಟ್‌ಗಳು ವಿಶೇಷ ರಿಯಾಯಿತಿ ಸೇಲ್‌ಗಳನ್ನು ನಡೆಸುತ್ತಿವೆ. ಆನ್‌ಲೈನ್‌ ಶಾಪಿಂಗ್‌ ಪ್ರಿಯರು ಕೂಡ ಇ-ಕಾಮರ್ಸ್‌ ಸೈಟ್‌ಗಳಲ್ಲಿ ರಿಯಾಯಿತಿ ಸೇಲ್‌ಗಳಲ್ಲಿ ಮುಗಿಬಿದ್ದು ಶಾಪಿಂಗ್‌ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಆನ್‌ಲೈನ್ ವಂಚಕರು ಕೂಡ ಜಾಗೃತರಾಗಿದ್ದಾರೆ. ಆನ್‌ಲೈನ್‌ ಶಾಪಿಂಗ್‌ ಮಾಡುವವರಿಗೆ ವಿವಿಧ ಉಡುಗೊರೆಗಳ ಆಮಿಷ ತೋರಿಸಿ ವಂಚನೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇಂತಹ ಸಮಯದಲ್ಲಿ ಆನ್‌ಲೈನ್‌ ಶಾಪಿಂಗ್‌ ಫ್ರಾಡ್‌ಗಳ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಪಾಸ್‌ವರ್ಡ್‌ಗಳನ್ನು ಡಿಲೀಟ್‌ ಮಾಡುವುದನ್ನು ಖಚಿತಪಡಿಸಿಕೊಳ್ಳಿ

ನಿಮ್ಮ ಪಾಸ್‌ವರ್ಡ್‌ಗಳನ್ನು ಡಿಲೀಟ್‌ ಮಾಡುವುದನ್ನು ಖಚಿತಪಡಿಸಿಕೊಳ್ಳಿ

ಆನ್‌ಲೈನ್‌ ಶಾಪಿಂಗ್‌ ಸಮಯದಲ್ಲಿ ಹೆಚ್ಚಿನ ಜನರು ಹ್ಯಾಕರ್‌ ದಾಳಿಗೆ ಸುಲಭವಾಗಿ ತುತ್ತಾಗಲು ಮುಖ್ಯ ಕಾರಣ ದುರ್ಬಲ ಪಾಸ್‌ವರ್ಡ್‌ಗಳಾಗಿವೆ. ಅದರಲ್ಲೂ ಪ್ರತಿ ಸೆಕೆಂಡಿಗೆ 579 ಪಾಸ್‌ವರ್ಡ್ ದಾಳಿಗಳು ನಡೆಯುತ್ತಿವೆ ಅನ್ನೊ ವರದಿಯಾಗಿದೆ. ಆದರಿಂದ ನೀವು ಆನ್‌ಲೈನ್‌ ಶಾಪಿಂಗ್‌ ಮಾಡಿದ ನಂತರ ನಿಮ್ಮ ಪಾಸ್‌ವರ್ಡ್‌ಗಳನ್ನು ಡಿಲೀಟ್‌ ಮಾಡುವುದು ಉತ್ತಮ. ಇಲ್ಲವೇ ನಿಮ್ಮ ಪಾಸ್‌ವರ್ಡ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿ. ಅದನ್ನು ಹೆಚ್ಚು ಸುರಕ್ಷಿತವಾದ ದೃಢೀಕರಣ ವಿಧಾನದೊಂದಿಗೆ ಬದಲಾಯಿಸಿ.

ಮಲ್ಟಿ ಫ್ಯಾಕ್ಟರ್‌ ದೃಢೀಕರಣವನ್ನು ಆನ್ ಮಾಡಿ

ಮಲ್ಟಿ ಫ್ಯಾಕ್ಟರ್‌ ದೃಢೀಕರಣವನ್ನು ಆನ್ ಮಾಡಿ

ಆನ್‌ಲೈನ್‌ ಸಾಪಿಂಗ್‌ ಮಾಡಲು ನಿವು ತೆರೆಯುವ ಅಕೌಂಟ್‌ಗೆ ಬಹು ಅಂಶದ ದೃಢೀಕರಣವನ್ನು ಆನ್ ಮಾಡಿ. ಇದರಿಂದ ನಿಮ್ಮ ಖಾತೆಗೆ ಬೇರೊಬ್ಬರು ಲಾಗ್ ಇನ್ ಮಾಡಲು ಪ್ರಯತ್ನಿಸಿದರೆ, ನಿಮಗೆ ಇಮೇಲ್ ಆಲರ್ಟ್‌ ಬರಲಿದೆ. ಇದರಿಂದ ನೀವು ತಕ್ಷಣವೇ ಬೇರೆಯವರ ಪ್ರವೇಶವನ್ನು ತಡೆಯಲು ಸಾಧ್ಯವಾಗಲಿದೆ. 99% ಪ್ರಕರಣಗಳಲ್ಲಿ ಬಹು ಅಂಶದ ದೃಢೀಕರಣದಿಂದ ಪಾಸ್‌ವರ್ಡ್ ಮೇಲಿನ ದಾಳಿಗಳನ್ನು ತಡೆಯಬಹುದಾಗಿದೆ.

ವಿಶ್ವಾಸಾರ್ಹ ಸೈಟ್‌ಗಳಿಗೆ ಬೇಟಿ ನೀಡಿ

ವಿಶ್ವಾಸಾರ್ಹ ಸೈಟ್‌ಗಳಿಗೆ ಬೇಟಿ ನೀಡಿ

ಇದಲ್ಲದೆ ಆನ್‌ಲೈನ್‌ ಶಾಪಿಂಗ್‌ ಪ್ರಿಯರು ಸಿಕ್ಕಸಿಕ್ಕ ವೆಬ್‌ಸೈಟ್‌ ಲಿಂಕ್‌ಗಳನ್ನು ಟ್ಯಾಪ್‌ ಮಾಡುವ ಗೋಜಿಗೆ ಹೋಗಬಾರದು. ವಾಟ್ಸಾಪ್‌ನಲ್ಲಿ ಹರಿದು ಬರುವ ಪಾರ್ವರ್ಡ್‌ ಮೆಸೇಜ್‌ಗಳ ಸತ್ಯಾಸತ್ಯತೆ ತಿಳಿದ ನಂತರ ಆನ್‌ಲೈನ್‌ ಶಾಪಿಂಗ್‌ ಮಾಡೊದು ಒಳಿತು. ಇಲ್ಲದೆ ಹೋದರೆ ನಕಲಿ ವೆಬ್‌ಸೈಟ್‌ಗಳ ಬಲೆಗೆ ನೀವು ಬಿಳಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ನೀವು ಸರ್ಚ್‌ ಮಾಡುವಾಗ ಜಾಗೂರಕತೆ ವಹಿಸುದು ಉತ್ತಮ.

ಆನ್‌ಲೈನ್ ಶಾಪಿಂಗ್ ಮಾಡುವಾಗ ಎಚ್ಚರಿಕೆ ವಹಿಸೋದು ಹೇಗೆ?

ಆನ್‌ಲೈನ್ ಶಾಪಿಂಗ್ ಮಾಡುವಾಗ ಎಚ್ಚರಿಕೆ ವಹಿಸೋದು ಹೇಗೆ?

* ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ವೆಬ್‌ಸೈಟ್‌ ಲಿಂಕ್‌ URL https://ನಿಂದ ಶುರುವಾಗಲಿದೆ. ಇದರಲ್ಲಿ ‘s’ ಇದ್ದರೆ ಸುರಕ್ಷಿತ ವೆಬ್‌ಸೈಟ್‌ ಎಂದು ಭಾವಿಸಬಹುದು.
* URL ನಲ್ಲಿ ಕಾಣುವ ಲಾಕ್ ಐಕಾನ್ ಮೇಲೆ ಮೌಸ್ ಬ್ರೌಸ್‌ ಮಾಡಿ ಅದರಲ್ಲಿ ಸೆಕ್ಯುರಿಟಿ ಫೀಚರ್ಸ್‌ ಬಗ್ಗೆ ತಿಳಿಯಬಹುದು.
* ಅಮೆಜಾನ್, ಫ್ಲಿಪ್‌ಕಾರ್ಟ್, ಶಾಪ್‌ಕ್ಲೂಸ್, ಪೆಪ್ಪರ್‌ಫ್ರೈ ನಂತಹ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವುದು ಬೆಸ್ಟ್‌.
* ನೀವು ಬಳಸುವ ಡಿವೈಸ್‌ನಲ್ಲಿ ಆಂಟಿ ವೈರಸ್ ಮತ್ತು ಫೈರ್‌ವಾಲ್ ಅಪ್ಡೇಟ್‌ ಆಗಿರುವಂತೆ ನೋಡಿಕೊಳ್ಳಬೇಕು.
* ನಿಮ್ಮ ಸಿಕ್ರೆಟ್‌ ಡೇಟಾ ಬಯಸುವ ಯಾವುದೇ ವೆಬ್‌ಸೈಟ್‌ ಆಗಿದ್ದರೂ ಅದನ್ನು ತೆರೆಯಲು ಹೋಗಬಾರದು.
* ಬೇರೆಯವರು ಹೇಳಿದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವ ಬದಲು ಸತ್ಯಾಸತ್ಯತೆ ಪರಿಶೀಲಿಸಿ.
* ನಿಮಗೆ ಪರಿಚಯವಿಲ್ಲದವರು ಕಳುಹಿಸಿದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ.
* ನಿಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಆಗಾಗ ಬದಲಾಯಿಸುತ್ತಿರಬೇಕು.
* ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಬಾರದು.

ಆನ್‌ಲೈನ್‌

ಇನ್ನು ನೀವು ಆನ್‌ಲೈನ್‌ನಲ್ಲಿ ನೀಡಿರುವ ಆಫರ್‌ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಕೂಡ ಒಳ್ಳೆಯದು. ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ನಿಜವಾಗಿಯೂ ಡಿಸ್ಕೌಂಟ್‌ ನೀಡಲಾಗ್ತಿದೆಯಾ ಅನ್ನೊದನ್ನ ಪರಿಶೀಲಿಸಿದ ನಂತರ ನಿಮ್ಮ ಮುಂದಿನ ಕಾರ್ಯನಿರ್ವಹಿಸಿ. ಹೆಚ್ಚಿನ ಆಫರ್‌ ಆಸೆಗೆ ನಕಲಿ ವೆಬ್‌ಸೈಟ್‌ಗಳ ಮೇಲೆ ಕ್ಲಿಕ್‌ ಮಾಡಿದರೆ ನಿಮ್ಮ ಡೇಟಾ ಕಳುವಾಗುವ ಸಾಧ್ಯತೆ ಇದೆ. ಜೊತೆಗೆ ನೀವು ಆನ್‌ಲೈನ್‌ ಶಾಪಿಂಗ್‌ ಹೆಸರಿನಲ್ಲಿ ಮೋಸ ಹೋಗುವ ಸಾದ್ಯತೆ ಇದೆ.



Read more…