Karnataka news paper

ಸೋಮವಾರ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡ ಸ್ಮಾಲ್‌ ಕ್ಯಾಪ್, ಮಿಡ್‌ ಕ್ಯಾಪ್ ಷೇರುಗಳಿವು!


ಹೊಸದಿಲ್ಲಿ:ನಿಫ್ಟಿ ಮತ್ತು ಸೆನ್ಸೆಕ್ಸ್‌ಗಳು ಸೋಮವಾರ ಶೇ.2ಕ್ಕಿಂತ ಹೆಚ್ಚು ಕುಸಿದಿದ್ದು, ವಾರದ ಮೊದಲ ದಿನದ ವಹಿವಾಟು ಮಾರುಕಟ್ಟೆ ಕುಸಿತದೊಂದಿಗೆ ಆರಂಭವಾಗಿದೆ. ಜಾಗತಿಕ ಮಾರುಕಟ್ಟೆ ಕೂಡ ದುರ್ಬಲಗೊಳ್ಳುತ್ತಿರುವ ನಡುವೆಯೇ ನಿಫ್ಟಿ 161 ಪಾಯಿಂಟ್‌ಗಳಷ್ಟು ಕಡಿಮೆ ಅಂಕಗಳೊಂದಿಗೆ ವಹಿವಾಟು ಆರಂಭ ಮಾಡಿತು. ಇದು16,410ಕ್ಕೆ ಕುಸಿದರೂ, ನಂತರ ಸ್ವಲ್ಪ ಚೇತರಿಕೆ ಕಂಡಿತು. ದಿನದಂತ್ಯಕ್ಕೆ ನಿಫ್ಟಿ ಸುಮಾರು 371 ಅಂಕಗಳಷ್ಟು ಕುಸಿತ ಕಂಡಿತು. ಆದರೆ, ಈ ಪರಿಸ್ಥಿತಿಯಲ್ಲೂ ಇಂಡಿಯಾ VIX ಶೇ.16 ಕ್ಕಿಂತ ಹೆಚ್ಚು ಗಳಿಕೆ ಕಂಡಿತು.

ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸಹ ಶೇ.3 ಕ್ಕಿಂತ ಹೆಚ್ಚು ಕುಸಿತ ಕಂಡವು. ಟಾಪ್ ಲೂಸರ್‌ಗಳ ಪಟ್ಟಿಯಲ್ಲಿ ಬಿಪಿಸಿಎಲ್, ಟಾಟಾ ಸ್ಟೀಲ್ ಮತ್ತು ಟಾಟಾ ಮೋಟಾರ್ಸ್ ಸೇರಿವೆ. ಆದರೆ, ಸಿಪ್ಲಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ಗಳು ಕ್ರಮವಾಗಿ ಶೇ.4 ಮತ್ತು ಶೇ.1ರಷ್ಟು ಗಳಿಕೆ ಕಾಣುವ ಮೂಲಕ ಮಾರುಕಟ್ಟೆಯನ್ನು ಬೆಂಬಲಿಸಿದವು. ದಿನದ ಕನಿಷ್ಠ ಮಟ್ಟದಿಂದ ಮಾರುಕಟ್ಟೆಯು ಚೇತರಿಸಿಕೊಂಡಿರುವ ಅಂಶವನ್ನು ಗಮನಿಸಿದರೆ, ಕೊನೆಯಲ್ಲಿ ಯಾವ ಷೇರುಗಳು ಚೇತರಿಕೆ ಕಂಡವು ಎಂಬುದು ಕುತೂಹಲಕಾರಿಯಾಗಿತ್ತು. ಕೆಳ ಹಂತದಿಂದಲೇ ಚೇತರಿಕೆ ಕಂಡ ಷೇರುಗಳು ಬಲವಾದ ಖರೀದಿ ವಲಯಗಳನ್ನು ಸೂಚಿಸುತ್ತದೆ. ಜತೆಗೆ ಸೋಮವಾರ ಟ್ರೆಂಡ್‌ ಆದ ಷೇರುಗಳನ್ನೂ ಸೂಚಿಸುತ್ತವೆ.

ದಿನದ ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡ ಷೇರುಗಳು:

  • ಬಿಎಸ್ಇ (BSE)
  • ಸಿಎಎಂಎಸ್ (CAMS)
  • ಹೋಮ್ ಫಸ್ಟ್ (HOMEFIRST)
  • ಐಒಎಲ್‌ಸಿಪಿ (IOLCP)
  • ಐಪಿಸಿಎಎಲ್‌ಎಬಿ (IPCALAB)
  • ಎಂಐಎನ್‌ಡಿಎಐಎನ್‌ಡಿ (MINDAIND)
  • ಪಾಲಿಕ್ಯಾಬ್ (POLYCAB)
  • ಆರ್‌ಎಚ್‌ಐಎಂ (RHIM)
  • ಟಿವಿಎಸ್‌ ಮೋಟಾರ್‌ (TVSMOTOR)

ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.

ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್‌ ಸ್ಟ್ರೀಟ್‌ ಇನ್ವೆಸ್ಟ್‌ಮೆಂಟ್‌ ಜರ್ನಲ್‌ (DSIJ) ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್‌ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.



Read more…