Karnataka news paper

ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ


Source : Online Desk

ಥಿಂಪು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಾಡಾಗ್ ಪೆಲ್ ಗಿ ಖೋರ್ಲೊಗೆ ಭಾಜನಾರಾಗಿದ್ದು ಶುಕ್ರವಾರ ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಪ್ರದಾನ ಮಾಡಿದ್ದಾರೆ.

ದೇಶದ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಲೋಟೆ ತ್ಶೆರಿಂಗ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ. ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ” ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಾಡಾಗ್ ಪೆಲ್ ಗಿ ಖೋರ್ಲೋ” ಪ್ರಶಸ್ತಿಗೆ ಗೌರವಾನ್ವಿತ ನರೇಂದ್ರ ಮೋದಿಜೀ ಭಾಜನರಾಗಿರುವುದನ್ನು ಕೇಳಲು ತುಂಬಾ ಸಂತೋಷವಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ವರ್ಣಿಮ್ ವಿಜಯ್ ದಿವಸ್: 1971ರ ಯುದ್ಧದಲ್ಲಿ ಪಾಕ್ ವಿರುದ್ಧದ ಗೆಲುವಿಗೆ 50 ವರ್ಷದ ಸಂಭ್ರಮ, ಹುತಾತ್ಮ ವೀರ ಯೋಧರ ನೆನೆದ ಪ್ರಧಾನಿ ಮೋದಿ

ಭೂತಾನ್‍ನ ಜನರ ಪರವವಾಗಿ ಅಭಿನಂದನೆಗಳು. ಎಲ್ಲಾ ಸಂವಾದಗಳಲ್ಲಿ, ನಿಮ್ಮ ಶ್ರೇಷ್ಠತೆಯನ್ನು, ಅತ್ಯತ್ತಮ ಆಧ್ಯಾತ್ಮಿಕ ವ್ಯಕ್ತಿಯಾಗಿ ನೋಡಿದ್ದೇವೆ. ಈ ಪ್ರಶಸ್ತಿಗೆ ಭಾಜನರಾಗಿರುವ ನಿಮ್ಮನ್ನು ಗೌರವಿಸಲು ಎದುರು ನೋಡುತ್ತಿದ್ದೇನೆ” ಎಂದು ಭೂತಾನ್‍ನ ಪ್ರಧಾನ ಮಂತ್ರಿ ಕಚೇರಿ ಫೇಸ್‍ಬುಕ್‍ನಲ್ಲಿ ತಿಳಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೂತಾನ್ ಕಿಂಗ್ ಜಿಗ್ಮೆ ಖೇಸರ್ ನಾಮ್‍ಗೈಲ್ ವಾಂಗ್‍ಚುಕ್ ಅವರು ನರೇಂದ್ರ ಮೋದಿ ವಿಶೇಷವಾಗಿ ಕೋವಿಡ್-19 ಸಮಯದಲ್ಲಿ ಬೆಂಬಲ ನೀಡಿರುವುದನ್ನು ಕೊಂಡಾಡಿದರು. ಕೊರೋನಾದ ಪ್ರಾರಂಭದಿಂದಲೂ, ಭಾರತವು ಭೂತಾನ್‍ಗೆ ಕೋವಿಡ್ ಲಸಿಕೆಗಳು ಮತ್ತು ಇತರ ವೈದ್ಯಕೀಯ ಉಪಕರಣಗಳ ರೂಪದಲ್ಲಿ ಸಹಾಯ ಹಸ್ತ ನೀಡಿದೆ.



Read more