
ಹೌದು, ಮುಂದಿನ ವರ್ಷ ಸಾಕಷ್ಟು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿವೆ. ಇದರಲ್ಲಿ ಒನ್‌ಪ್ಲಸ್, ಶಿಯೋಮಿ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಇವುಗಳಲ್ಲಿ ಗೂಗಲ್ ಪಿಕ್ಸೆಲ್ 6a, iQOO 9 ಸ್ಮಾರ್ಟ್‌ಫೋನ್‌ಗಳು 2022 ರಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲು ಸಿದ್ದತೆ ನಡೆಸಿವೆ. ಹಾಗಾದ್ರೆ ಮುಂದಿನ ವರ್ಷ ಅಂದರೆ 2022ಕ್ಕೆ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒನ್‌ಪ್ಲಸ್ 10 ಪ್ರೊ
ಒನ್‌ಪ್ಲಸ್ 10 ಪ್ರೊ ಸ್ಮಾರ್ಟ್‌ಫೋನ್ 2022ರಲ್ಲಿ ಬಿಡುಗಡೆ ಆಗಲಿರುವ ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಒನ್‌ಪ್ಲಸ್ 10 ಪ್ರೊ ಸ್ಮಾರ್ಟ್‌ಫೋನ್ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಸದ್ಯ ಲಭ್ಯ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.7-ಇಂಚಿನ LTPO OLED ಡಿಸ್‌ಪ್ಲೇ ಹೊಂದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 1 ಪ್ರೊಸೆಸರ್ ಬಲವನ್ನು ಪಡೆದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸಾಧ್ಯತೆ ಇದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ ಮುಂದಿನ ವರ್ಷ ಫೆಬ್ರವರಿ 4 ರಂದು ಬಿಡುಗಡೆ ಆಗುವ ಸಾದ್ಯತೆ ಇದೆ. ಈ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಗ್ಯಾಲಕ್ಸಿ S22, ಗ್ಯಾಲಕ್ಸಿ S22+ ಮತ್ತು ಗ್ಯಾಲಕ್ಸಿ S22 ಅಲ್ಟ್ರಾ ಎಂಬ ಮೂರು ಸ್ಮಾರ್ಟ್‌ಫೋನ್‌ಗಳನ್ನು ಹೊರತರುವ ನಿರೀಕ್ಷೆಯಿದೆ. ಇದರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 Ultra ಸ್ಮಾರ್ಟ್‌ಫೋನ್ ವಿಶೇಷತೆ ಬಹಿರಂಗವಾಗಿದೆ. ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 1 ಚಿಪ್‌ಸೆಟ್ ಅಥವಾ Exynos 2200 ಚಿಪ್‌ಸೆಟ್‌ನಿಂದ ಚಾಲಿತವಾಗಬಹುದು ಎನ್ನಲಾಗಿದೆ.

ಶಿಯೋಮಿ 12
ಇನ್ನು ಶಿಯೋಮಿ 12 ಫೋನ್ LTPO AMOLED ಡಿಸ್‌ಪ್ಲೇಯನ್ನು 120 Hz ವರೆಗಿನ ಹೊಂದಾಣಿಕೆಯ ರಿಫ್ರೆಶ್ ದರವನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 898 ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆಯುವ ಸಾಧ್ಯತೆಯಿದೆ ಮತ್ತು LPDDR5X RAM ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಶಿಯೋಮಿ 12 ಅಲ್ಟ್ರಾ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್ Qualcomm 8 Gen 1 ಪ್ರೊಸೆಸರ್‌ನೊಂದಿಗೆ ಬರುವ ಸಾಧ್ಯತೆಗಳು ಇವೆ. ಇದಲ್ಲದೆ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸಾದ್ಯತೆ ಇದೆ.

ಗೂಗಲ್ ಪಿಕ್ಸೆಲ್ 6a
ಗೂಗಲ್ ಮುಂದಿನ ವರ್ಷ ತನ್ನ ಮಧ್ಯಮ ಶ್ರೇಣಿಯ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ Pixel 6 ಗಿಂತ ಹೆಚ್ಚು ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿರಬಹುದು. ಸದ್ಯ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ 6.2 ಇಂಚಿನ AMOLED ಡಿಸ್‌ಪ್ಲೇ ಹೊಂದಿರುವ ಸಾದ್ಯತೆ ಇದೆ. ಜೊತೆಗೆ ಇದು ವಾಯ್ಸ್ ಟೈಪಿಂಗ್, HDRnet ವೀಡಿಯೊ ಮತ್ತು ಲೈವ್ ಟ್ರಾನ್ಸ್‌ಲೇಟ್‌ನಂತಹ ಟೆನ್ಸರ್ ಸಕ್ರಿಯಗೊಳಿಸಿದ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎನ್ನಲಾಗಿದೆ.

iQOO 9
ಐಕ್ಯೂ ಕಂಪೆನಿ ಮುಂದಿನ ವರ್ಷ ಮಿಡ್‌ರೇಂಜ್ ಪ್ರೈಸ್ ಟ್ಯಾಗ್‌ನಲ್ಲಿ iQOO 9 ಸರಣಿಯನ್ನು ಲಾಂಚ್ ಮಾಡುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ ಸರಣಿ ಕೂಡ ಕ್ವಾಲ್ಕಾಮ್ 8 Gen 1 ಪ್ರೊಸೆಸರ್ ಹೊಂದಿರುವ ಸಾದ್ಯತೆ ಇದೆ. ಇನ್ನು ಈ ಡಿವೈಸ್ 120Hz ಹೆಚ್ಚಿನ ರಿಫ್ರೆಶ್ ರೇಟ್ ಹೊಂದಿರುವ AMOLED ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಇತ್ತೀಚೆಗೆ iQOO 9 ಅನ್ನು 3C ಪಟ್ಟಿಯಲ್ಲಿ 120W ವೇಗದ ಚಾರ್ಜಿಂಗ್‌ನೊಂದಿಗೆ ಗುರುತಿಸಲಾಗಿದೆ.