Karnataka news paper

ಅಮೆರಿಕ: ಕೆಂಟುಕಿಗೆ ಅಪ್ಪಳಿಸಿದ ಚಂಡಮಾರುತ, ಕನಿಷ್ಠ 50 ಸಾವು


ವಾಷಿಂಗ್ಟನ್: ಅಮೆರಿಕದ ಕೆಂಟುಕಿಯಲ್ಲಿ ಚಂಡಮಾರುತ ಅಪ್ಪಳಿಸಿದ ಪರಿಣಾಮ ಕನಿಷ್ಠ 50 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಈ ಕುರಿತು ಎಎಫ್‌ಪಿ ವರದಿ ಮಾಡಿದೆ.

ಶುಕ್ರವಾರ ತಡರಾತ್ರಿ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಗವರ್ನರ್ ಆ್ಯಂಡಿ ಬೆಶಿಯರ್ ತಿಳಿಸಿದ್ದಾರೆ.

ಅಮೆಜಾನ್ ವೇರ್‌ಹೌಸ್‌ಗೆ ಚಂಡಮಾರುತ ಬೀಸಿದ ಪರಿಣಾಮ 100 ಕಾರ್ಮಿಕರು ಸಿಕ್ಕಿ ಹಾಕಿಕೊಂಡರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕೆಂಟುಕಿ ಜತೆಗೆ ಇತರೆ ಪ್ರದೇಶಗಳಿಗೂ ಬಿರುಗಾಳಿ ಬೀಸಿದೆ. ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದ್ದು, ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗವರ್ನರ್ ಮಾಹಿತಿ ನೀಡಿದ್ದಾರೆ.

 

 



Read more from source