Source : The New Indian Express
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಕೆಎಲ್ ರಾಹುಲ್ ಉಪ ನಾಯಕತ್ವದ ಕ್ಯಾಪ್ ತೊಡಲಿದ್ದಾರೆ. ರೋಹಿತ್ ಶರ್ಮಾ ಉಪನಾಯಕರಾಗುತ್ತಿದ್ದರು. ಆದರೆ, ಮಂಡಿರಜ್ಜು ಗಾಯದ ಸಮಸ್ಯೆಯಿಂದ ಅವರು ಸರಣಿಯಿಂದ ಹೊರಗಿರುವುದರಿಂದ ರಾಹುಲ್ ಉಪ ನಾಯಕರಾಗಲಿದ್ದು, ವಿರಾಟ್ ಕೊಹ್ಲಿಗೆ ಸಾಥ್ ನೀಡಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಗಾಗಿ ಕೆಎಲ್ ರಾಹುಲ್ ಉಪ ನಾಯಕರಾಗಲಿದ್ದಾರೆ ಎಂಬುದನ್ನು ಪ್ರಸ್ತುತದಲ್ಲಿನ ಬೆಳವಣಿಗೆ ಉಲ್ಲೇಖಿಸಿದ ಮೂಲಗಳು ಹೇಳಿವೆ. ರೋಹಿತ್ ಸರಣಿಯಿಂದ ಹೊರಗುಳಿಯಲಿದ್ದು, ಕೆಎಲ್ ರಾಹುಲ್ ಉಪನಾಯಕರಾಗಲಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಎನ್ ಎಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಸರಣಿಗೂ ಮೊದಲೇ ಟೀಂ ಇಂಡಿಯಾಗೆ ಆಘಾತ: ರೋಹಿತ್ ಶರ್ಮಾ ಟೂರ್ನಿಯಿಂದಲೇ ಔಟ್
ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೂರು ಪಂದ್ಯಗಳಿಂದ ರೋಹಿತ್ ಶರ್ಮಾ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಸೋಮವಾರ ಸ್ಪಷ್ಟಪಡಿಸಿತ್ತು. ಅಭ್ಯಾಸದ ವೇಳೆಯಲ್ಲಿ ಎಡ ಮಂಡಿರಜ್ಜು ಗಾಯದಿಂದಾಗಿ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಗಾಯಗೊಂಡಿರುವುದಾಗಿ ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅವರು ಹೊರಗುಳಿಯಲಿದ್ದು, ಅವರ ಬದಲಿಗೆ ಪ್ರಿಯಾಂಕ್ ಪಂಚಾಲ್ ತಂಡ ಸೇರಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿತ್ತು.