
ಹೌದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ಸೋಶಿಯಲ್‌ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದೆ. ಪ್ರಮುಖ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ನಲ್ಲಿ ಅನೇಕ ಹೊಸ ಫೀಚರ್ಸ್‌ಗಳು ಬಂದಿವೆ. ಅನೇಕ ನಿಯಮಗಳು ಬದಲಾಗಿವೆ. ಅದರಲ್ಲೂ 2021 ರಲ್ಲಿ ಪ್ರಪಂಚದಾದ್ಯಂತ 3.78 ಶತಕೋಟಿ ಸಂಖ್ಯೆಯ ಸಾಮಾಜಿಕ ಮಾಧ್ಯಮ ಬಳಕೆದಾರರಿದ್ದಾರೆ ಎಂದು ವರದಿಯಾಗಿದೆ. ಹಾಗಾದ್ರೆ ಈ ವರ್ಷ ಪ್ರಮುಖ ಸೊಶಿಯಲ್ ಮೀಡಿಯಾ ಪ್ಲಾಟ್‌ಪಾರ್ಮ್‌ಗಳು ಹೊಸದಾಗಿ ಯಾವೆಲ್ಲಾ ಫೀಚರ್ಸ್‌ಗಳನ್ನು ಪರಿಚಯಿಸಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್
ಬರ್ಡ್‌ವಾಚ್
ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಕೂಡ ಎಂದಿನಂತೆ ಈ ವರ್ಷವೂ ಅನೇಕ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಬರ್ಡ್‌ವಾಚ್ ಎಂಬ ಪೈಲಟ್ ಪ್ರೋಗ್ರಾಂ ಕೂಡ ಒಂದಾಗಿದೆ. ಇದು ಬಳಕೆದಾರರನ್ನು ತಪ್ಪುದಾರಿಗೆಳೆಯುವ ಟ್ವೀಟ್‌ಗಳನ್ನು ಫ್ಲ್ಯಾಗ್ ಮಾಡಲು ಅವಕಾಶ ನೀಡಲಿದೆ. ಬರ್ಡ್ ವಾಚ್ ಪ್ರಸ್ತುತ USನಲ್ಲಿರುವ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಹೆಸರೇ ಸೂಚಿಸುವಂತೆ ಬರ್ಡ್‌ವಾಚ್ ಎಂದರೆ ತಪ್ಪುಗಳ ಮೆಲೆ ಕಣ್ಣಿಡುವುದು ಎಂದರ್ಥ.
ಪ್ರಾಂಪ್ಟ್‌ಗಳು
ಟ್ವಿಟರ್ ಈ ವರ್ಷ ‘ಪ್ರಾಂಪ್ಟ್ಸ್’ ಎನ್ನುವ ವಿಶೇಷ ಫೀಚರ್ಸ್ ಅನ್ನು ಕೂಡ ಪರಿಚಯಿಸಿದೆ. ಇದು ಹೆಚ್ಚು ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿನ ಕೆಲವು ಸಂಭಾಷಣೆಗಳಿಂದ ಬಳಕೆದಾರರಿಗೆ ಸ್ಪಷ್ಟವಾಗಿರಲು ಇದು ಅನುಮತಿಸುತ್ತದೆ.

ನೋ ಮೋರ್ ಆಟೋಕ್ರಾಪ್
ಇನ್ನು ಈ ವರ್ಷ ಟ್ವಿಟರ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪೂರ್ಣ ಗಾತ್ರದ ಚಿತ್ರಗಳನ್ನು ನೀಡುವುದಾಗಿ ಘೋಷಿಸಿತು. ಇದರಿಂದ ಆಟೋಕ್ರಾಪ್ ಮಾಡುವ ಅವಶ್ಯಕತೆ ಇಲ್ಲವೆಂದು ಹೇಳಿದೆ. ಅದರಂತೆ Android ಮತ್ತು iOS ಅಪ್ಲಿಕೇಶನ್‌ಗಳಲ್ಲಿ ಆಟೋ-ಕ್ರಾಪಿಂಗ್ ಅಲ್ಗಾರಿದಮ್ ಅನ್ನು ತೆಗೆದುಹಾಕಿದೆ. ಇದು ಬಳಕೆದಾರರು ತಮ್ಮ ಟೈಮ್‌ಲೈನ್‌ನಲ್ಲಿ ಪೂರ್ಣ ಪ್ರಮಾಣದ ಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.
ಸಂಭಾಷಣೆಗಳ ಮೇಲೆ ನಿಯಂತ್ರಣ
ಇನ್ನು ಟ್ವಿಟರ್‌ನಲ್ಲಿ ಜನರು ಪ್ರಾರಂಭಿಸುವ ಸಂಭಾಷಣೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುವ ಫೀಚರ್ಸ್ ಕೂಡ ಈ ವರ್ಷ ಪರಿಚಯಿಸಲಾಗಿದೆ. ಇದರಿಂದ, ಸಂಭಾಷಣೆಯ ಮಧ್ಯದಲ್ಲಿ ಟ್ವೀಟ್‌ಗೆ “ಯಾರು ಪ್ರತ್ಯುತ್ತರ ನೀಡಬಹುದು” ಎಂದು ಜನರಿಗೆ ಅನುಮತಿಸಲು ‘ಸಂಭಾಷಣೆ ಸೆಟ್ಟಿಂಗ್‌ಗಳು’ ಎನ್ನುವ ಹೊಸ ಅಪ್ಡೇಟ್ ನೀಡಿದೆ.

ಸೇಫ್ಟಿ ಮೋಡ್
ಟ್ವಿಟರ್‌ನಲ್ಲಿ ನಿಂದನಾತ್ಮಕ ಟ್ವೀಟ್‌ಗಳಿಂದ ಸೇಫ್ಟಿ ಆಗಿರಲಿ ಈ ಫೀಚರ್ಸ್ ಸಹಾಯ ಮಾಡಲಿದೆ. ಹಾನಿಕಾರಕ ಟೀಕೆಗಳ ಹರಡುವಿಕೆ ಮತ್ತು ಗೋಚರತೆಯನ್ನು ಕಡಿಮೆ ಮಾಡಲಿದೆ. ಸುರಕ್ಷತಾ ಮೋಡ್ ನಿಮ್ಮ ಟ್ವೀಟ್‌ಗಳಿಗೆ ನಿಂದನಾತ್ಮಕವಾಗಿ ಟ್ವೀಟ್ ಮಾಡುವ ಖಾತೆಗಳನ್ನು ತಾತ್ಕಾಲಿಕವಾಗಿ ಸ್ವಯಂ-ನಿರ್ಬಂಧಿಸುತ್ತದೆ.
ಟಿಪ್ಸ್
ಈ ಫಿಚರ್ಸ್ ಕ್ರಿಯೆಟರ್ಸ್ ಮತ್ತು ಪತ್ರಕರ್ತರು ಸೇರಿದಂತೆ ಬಳಕೆದಾರರಿಗೆ ಸಲಹೆಗಳ ರೂಪದಲ್ಲಿ ತಮ್ಮ ಟ್ವೀಟ್‌ಗಳ ಮೂಲಕ ಹಣಗಳಿಸಲು ಅನುವು ಮಾಡಿಕೊಡುತ್ತದೆ. ನೀವು ನೀಡುವ ಟಿಪ್ಸ್‌ಗಳ ಮೂಲಕ ಹಣ ಸಂಪಾದನೆ ಮಾಡುವುದಕ್ಕೆಇದು ಉತ್ತಮ ಅವಕಾಶವಾಗಿದೆ.

ಟಿಕೆಟೆಡ್ ಸ್ಪೇಸಸ್
ಟ್ವಿಟರ್‌ನ ಈ ಫೀಚರ್ಸ್ ಲೈವ್ ಆಡಿಯೊ ಸಂಭಾಷಣೆಗಳನ್ನು ಹೋಸ್ಟ್ ಮಾಡುವ, ಮಾತನಾಡುವ ಮತ್ತು ಮಾಡರೇಟ್ ಮಾಡುವಲ್ಲಿ ಅವರ ಸಮಯ ಮತ್ತು ಶ್ರಮಕ್ಕಾಗಿ ಕ್ರಿಯೆಟರ್ಸ್‌ಗಳನ್ನು ಬೆಂಬಲಿಸಲು ಇದು ಮತ್ತೊಂದು ಮಾರ್ಗವಾಗಿದೆ. ವಿಶೇಷ ಸ್ಪೇಸ್‌ಗಳಿಗೆ ಹಾಜರಾಗುವ ಪ್ರೇಕ್ಷಕರು ಖರೀದಿಸಿದ ಟಿಕೆಟ್‌ಗಳಿಂದ ರಚನೆಕಾರರು ಆದಾಯದ ಪಾಲನ್ನು ಗಳಿಸಬಹುದು. ಟ್ವಿಟರ್‌ನಲ್ಲಿ ಸ್ಪೇಸ್‌ಗಳು ಲೈವ್ ಆಡಿಯೊ ಚಾಟ್ ಆಯ್ಕೆಯಾಗಿದೆ, ಇದು ಪ್ಲಾಟ್‌ಫಾರ್ಮ್‌ನಲ್ಲಿ 600 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ.
ಟ್ವಿಟರ್ ಬ್ಲೂ
ಟ್ವಟಿರ್‌ನಲ್ಲಿ ಇದು ಚಂದಾದಾರಿಕೆ ಆಧಾರಿತ ಸೇವೆಯಾಗಿದ್ದು. ಈ ಚಂದಾದಾರಿಕೆ ಸೇವೆಯು ಟ್ವೀಟ್‌ಗಳನ್ನು ರದ್ದುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ಜಾಹೀರಾತುಗಳಿಲ್ಲದೆ ಕೆಲವು ಸುದ್ದಿ ಲೇಖನಗಳನ್ನು ಓದಬಹುದಾದ ಫೀಚರ್ಸ್‌ಗಳ ಸೇರ್ಪಡೆಗೆ ಮುಂದಾಗಿದೆ. ಇದರೊಂದಿಗೆ ಟ್ವಿಟರ್ ಬ್ಲೂ ಚಂದಾದಾರಿಕೆ ಮೂಲಕ ತನ್ನ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸಲು ನೋಡುತ್ತಿದೆ. ಈ ಚಂದಾದಾರಿಕೆ ಸೇವೆಯು undo ಬಟನ್ ಸೇರಿದಂತೆ ಹೊಸ ಫೀಚರ್ಸ್‌ಗಳನ್ನು ಸೇರಿಸುತ್ತಿದೆ. ಇದು ಟ್ವೀಟ್‌ಗಳನ್ನು ಕಳುಹಿಸುವ ಮೊದಲು undo ಮಾಡಲು ನಿಮಗೆ ಅನುಮತಿಸಲಿದೆ.

ಇನ್‌ಸ್ಟಾಗ್ರಾಮ್
ಪ್ರೊಫೆಷನಲ್ ಡ್ಯಾಶ್‌ಬೋರ್ಡ್
ಇನ್‌ಸ್ಟಾಗ್ರಾಮ್ ಈ ವರ್ಷ ಪರಿಚಯಿಸಿದ ಪ್ರಮುಖ ಫೀಚರ್ಸ್‌ಗಳಲ್ಲಿ ಪ್ರೊಫೆಷನಲ್ ಡ್ಯಾಶ್‌ಬೋರ್ಡ್ ಕೂಡ ಒಂದಾಗಿದೆ. ಇದು ವೃತ್ತಿಪರರಿಗೆ ಸಾಕಷ್ಟು ಅನುಕೂಲಕರವಾಗಿದೆ. ಸದ್ಯ ಈ ಫೀಚರ್ಸ್ ಇನ್‌ಸ್ಟಾಗ್ರಾಮ್ ಎಲ್ಲಾ ವ್ಯಾಪಾರ ಮತ್ತು ರಚನೆಕಾರ ಖಾತೆಗಳಿಗೆ ಲಭ್ಯವಿದೆ.
‘ರೀಸೆಂಟ್ಲಿ ಡಿಲೇಟೆಡ್’
ಇನ್‌ಸ್ಟಾಗ್ರಾಮ್ ‘ರೀಸೆಂಟ್ಲಿ ಡಿಲೇಟೆಡ್’ ಎನ್ನುವ ಫೀಚರ್ಸ್ ಅನ್ನು ಈ ವರ್ಷ ತನ್ನ ಪ್ಲಾಟ್‌ಫಾರ್ಮ್‌ಗೆ ಸೇರ್ಪಡೆ ಮಾಡಿದೆ. ಇದರಿಂದ ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತಿಚಿಗೆ ಡಿಲೀಟ್ ಮಾಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ಮರಳಿ ಪಡೆಯಲು ಸಹಾಯ ಮಾಡಲಿದೆ. ಇದು ಹ್ಯಾಕರ್‌ಗಳಿಂದ ನಿಮ್ಮನ್ನು ರಕ್ಷಣೆಮಾಡಲಿದೆ.

ಲೈವ್ ರೂಮ್ಸ್
ಇನ್‌ಸ್ಟಾಗ್ರಾಮ್ ಈ ವರ್ಷ ಲೈವ್ ರೂಮ್ಸ್ ಅನ್ನು ಸೇರ್ಪಡೆ ಮಾಡಿತ್ತು. ಇದು ಲೈವ್ ಪ್ರಸಾರಕ್ಕೆ ನಾಲ್ಕು ಜನರನ್ನು ಸೇರಿಸುವ ಸಾಮರ್ಥ್ಯವನ್ನು ರಚನೆಕಾರರಿಗೆ ನೀಡುತ್ತದೆ. ಈ ಹಿಂದೆ, ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಒಬ್ಬ ಬಳಕೆದಾರರು ಮಾತ್ರ ಇನ್ನೊಬ್ಬರನ್ನು ಸೇರಬಹುದಾಗಿತ್ತು.
ರೀಲ್‌ಗಳಿಗೆ ರೀಮಿಕ್ಸ್ ಆಯ್ಕೆ
ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ಗಳನ್ನು ಮಾಡುವವರಿಗೆ ಈ ಹೊಸ ಫೀಚರ್ಸ್ ಪರಿಚಯಿಸಿತು. ಈ ರೀಮಿಕ್ಸ್ ಫೀಚರ್ಸ್ ಮೂಲಕ ಬಳಕೆದಾರರು ಈಗ ಮೂಲ ಕ್ಲಿಪ್ ಅನ್ನು ಬಳಸಬಹುದು. ಅದಕ್ಕೆ ತಮ್ಮ ಪ್ರತಿಕ್ರಿಯೆಯನ್ನು ಸೇರಿಸಬಹುದು ಅಥವಾ ಅವರ ಆಲೋಚನೆಗಳೊಂದಿಗೆ ಸೃಜನಶೀಲರಾಗಬಹುದು.

ಕೊಲಾಬ್
ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿರುವ ‘ಕೊಲಾಬ್’ ಫೀಚರ್ಸ್ ಹೊಸ ಫೀಡ್ ಪೋಸ್ಟ್‌ಗಳನ್ನು ಶೇರ್ ಮಾಡುವಾಗ ಬಳಕೆದಾರರು ಪರಸ್ಪರ ಸಹಯೋಗಿಸಲು ಅನುಮತಿಸುತ್ತದೆ.
ಟೆಕ್ಸ್ಟ್ ಟ್ರಾನ್ಸ್ ಲೇಶನ್ ಇನ್ ಸ್ಟೋರೀಸ್
ಇನ್‌ಸ್ಟಾಗ್ರಾಮ್ ಪರಿಚಯಿಸಿರುವ ಹೊಸ ಅಪ್ಡೇಟ್‌ಗಳಲ್ಲಿ ಟೆಕ್ಸ್ಟ್ ಟ್ರಾನ್ಸ್ ಲೇಶನ್ ಇನ್ ಸ್ಟೋರೀಸ್ ಕೂಡ ಸೇರಿದೆ. ಇದು ನಿಮ್ಮ ಸ್ಟೋರೀಸ್ ಟೆಕ್ಸ್ಟ್ ಅನ್ನು ಸ್ವಯಂಚಾಲಿತವಾಗಿ ಅನುವಾದಿಸುತ್ತದೆ. ಇದು ಬಳಕೆದಾರರಿಗೆ ಸ್ಟೋರೀಸ್‌ಗಳನ್ನು ಅಂತರರಾಷ್ಟ್ರೀಯ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಸುಲಭಗೊಳಿಸುತ್ತದೆ.

ಫೇಸ್‌ಬುಕ್
ಫೇಸ್‌ಬುಕ್ ಪೇಜಸ್ ರಿ ಡಿಸೈನ್
ಇನ್ನು ಈ ವರ್ಷ ಫೇಸ್‌ಬುಕ್ ಭಾರತದಲ್ಲಿನ ಬಳಕೆದಾರರಿಗೆ ಹೊಸ ಪುಟದ ಅನುಭವವನ್ನು ಹೊರತಂದಿದೆ. ಇದು ಸಾರ್ವಜನಿಕ ವ್ಯಕ್ತಿಗಳು ಮತ್ತು ಕ್ರಿಯೆಟರ್ಸ್‌ಗಳಿಗೆ ಕಮ್ಯೂನಿಟಿಯನ್ನು ನಿರ್ಮಿಸಲು ಮತ್ತು ಅವರ ವ್ಯಾಪಾರ ಉದ್ದೇಶಗಳನ್ನು ಸಾಧಿಸಲು ಇದು ಉತ್ತಮ ಅವಕಾಶ ನೀಡಲಿದೆ.
ಸ್ಟಾರ್ಸ್ ಆನ್ ಲೈವ್
ಸ್ಟಾರ್-ಸಕ್ರಿಯಗೊಳಿಸಿದ ಲೈವ್ ಸ್ಟ್ರೀಮ್‌ಗಳ ಸಮಯದಲ್ಲಿ ಜನರು ಮುಕ್ತವಾಗಿ ಭಾಗವಹಿಸಲು ಇದು ಅವಕಾಶ ನೀಡಲಿದೆ. ಜನರು ತಮ್ಮ ಗೋಚರತೆಯನ್ನು ಹೆಚ್ಚಿಸಲು ಮತ್ತು ಅವರ ಗಳಿಕೆಗೆ ಸೇರಿಸಲು ಸ್ಟಾರ್‌ಗಳನ್ನು ಖರೀದಿಸಲು ಮತ್ತು ಅವರ ನೆಚ್ಚಿನ ಕ್ರಿಯೆಟರ್ಸ್‌ಗಳಿಗೆ ಕಳುಹಿಸಲು ಆಯ್ಕೆಯನ್ನು ಕಾಣಬಹುದಾಗಿದೆ.

ಫೇಸ್‌ಬುಕ್ ಜಾಹೀರಾತುಗಳನ್ನು ವಿಸ್ತರಿಸುವುದು
ಇನ್ನು ಈ ವರ್ಷ ಫೇಸ್‌ಬುಕ್ ಪರಿಚಯಿಸಿದ ಪ್ರಮುಖ ಫೀಚರ್ಸ್‌ಗಳಲ್ಲಿ ಜಾಹೀರಾತು ವಿಸ್ತರಣೆ ಮಾಡುವುದು ಕೂಡ ಒಂದಾಗಿದೆ. ಇದರಿಂದ ಫೇಸ್‌ಬುಕ್‌ನಲ್ಲಿ ಕ್ರಿಯೆಟರ್ಸ್‌ಗಳು ತಮ್ಮ ಲೈವ್ ವೀಡಿಯೊಗಳಲ್ಲಿ ತಮ್ಮದೇ ಆದ ಜಾಹೀರಾತುಗಳನ್ನು ಇರಿಸಲು ಅನುಮತಿಸುತ್ತದೆ.
ಲೈವ್ ಆಡಿಯೊ ರೂಮ್ಸ್
ಫೇಸ್‌ಬುಕ್ ಈ ವರ್ಷ ಲೈವ್ ಆಡಿಯೊ ರೂಮ್ಸ್ ಮತ್ತು ಪಾಡ್‌ಕಾಸ್ಟ್‌ಗಳನ್ನು ಹೊರತಂದಿದೆ. ಈ ಸೇವೆಯು ಪ್ರಸ್ತುತ US ನಲ್ಲಿನ iOS ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಇದರ ಜೊತೆಗೆ, ಫೇಸ್‌ಬುಕ್ ಲೈವ್ ಆಡಿಯೊ ರೂಮ್‌ಗಳನ್ನು ರಚಿಸಲು ಸಾರ್ವಜನಿಕ ವ್ಯಕ್ತಿಗಳು ಮತ್ತು ಆಯ್ದ ಫೇಸ್‌ಬುಕ್ ಗುಂಪುಗಳಿಗೆ ಮಾತ್ರ ಅವಕಾಶ ನೀಡುತ್ತಿದೆ.

ಫೇಸ್‌ಬುಕ್‌ನ ಹೊಸ ಜಾಹೀರಾತು ನೀತಿ
ಫೇಸ್‌ಬುಕ್ ಹೊಸ ಜಾಹಿರಾತು ನೀತಿ ಪರಿಚಯಿಸಿದೆ. ಈ ನಿಯಮಗಳ ಅನ್ವಯ ಜಾಹೀರಾತುಗಳು ಜಾಹೀರಾತುಗಳನ್ನು ನೀಡುವ ವ್ಯಕ್ತಿ ಅಥವಾ ಸಂಸ್ಥೆಯ ಹೆಸರಿನೊಂದಿಗೆ ಹಕ್ಕು ನಿರಾಕರಣೆಗಳನ್ನು ಒಳಗೊಂಡಿರಬೇಕಾಗುತ್ತದೆ. ಹೊಸ ನಿಯಮಗಳು ಪರಿಸರ ರಾಜಕೀಯ, ಅಪರಾಧ, ಆರ್ಥಿಕತೆ, ಆರೋಗ್ಯ, ರಾಜಕೀಯ ಮೌಲ್ಯಗಳು ಮತ್ತು ಆಡಳಿತ, ನಾಗರಿಕ ಮತ್ತು ಸಾಮಾಜಿಕ ಹಕ್ಕುಗಳು, ವಲಸೆ, ಶಿಕ್ಷಣ ಮತ್ತು ಅಂತಿಮವಾಗಿ ಭದ್ರತೆ ಮತ್ತು ವಿದೇಶಾಂಗ ನೀತಿ ಸೇರಿದಂತೆ ಸುಮಾರು ಒಂಬತ್ತು ಸಾಮಾಜಿಕ ಸಮಸ್ಯೆಗಳ ವಿಷಯಗಳ ಜಾಹೀರಾತುಗಳಿಗೆ ಅನ್ವಯಿಸುತ್ತವೆ.
ಲೈವ್ ಚಾಟ್
ತಮ್ಮ ಫೇಸ್‌ಬುಕ್ ಖಾತೆಗಳಿಂದ ಲಾಕ್ ಔಟ್ ಆಗಿರುವ ಬಳಕೆದಾರರಿಗೆ ಲೈವ್ ಚಾಟ್ ಫೀಚರ್ಸ್ ಅನ್ನು ಫೇಸ್‌ಬುಕ್ ಪರಿಚಯಿಸಿದೆ. ಈ ಅಪ್ಡೇಟ್ ಪ್ರಸ್ತುತ ಅದರ ಪರೀಕ್ಷಾ ಹಂತದಲ್ಲಿದೆ ಮತ್ತು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾತ್ರ ಲಭ್ಯವಿದೆ.