Karnataka news paper

ರಾಹುಲ್ ದ್ರಾವಿಡ್ ಜೊತೆಗೆ ‘ಫುಟ್ ವಾಲಿ’ ಆಡಿ ಎಂಜಾಯ್ ಮಾಡಿದ ಟೀಂ ಇಂಡಿಯಾ ಆಟಗಾರರು: ವಿಡಿಯೋ


Source : Online Desk

ಜೋಹಾನ್ಸ್ ಬರ್ಗ್: ಡಿಸೆಂಬರ್ 26 ರಂದು ಸೆಂಚುರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್  ಸರಣಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಟೀಂ ಇಂಡಿಯಾ ಆಟಗಾರರು, ಶನಿವಾರ ಫುಟ್ ವಾಲಿ ಆಡಿ ಎಂಜಾಯ್ ಮಾಡಿದ್ದಾರೆ.

ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಭ್ ಪಂತ್, ವೇಗಿ ಇಶಾಂತ್ ಶರ್ಮಾ, ಕೆ.ಎಲ್. ರಾಹುಲ್ ಸೇರಿದಂತೆ ಹಲವು ಆಟಗಾರರು ಫುಟ್ ವಾಲಿ ಆಡಿ ಸಂಭ್ರಮಿಸಿದ್ದಾರೆ.  ಈ ವಿಡಿಯೋವನ್ನು ಬಿಸಿಸಿಐ ಟ್ವೀಟರ್ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. 

ಪ್ರವಾಸಕ್ಕೂ ಆರಂಭಕ್ಕೂ ಮುನ್ನ ನಾಯಕತ್ವ ವಿವಾದದಿಂದಾಗಿ ಸುದ್ದಿಯಾಗಿದ್ದ ವಿರಾಟ್ ಕೊಹ್ಲಿ ಕೂಡಾ, ಆಟಗಾರರ ಜೊತೆಗೆ ಖುಷಿಯಿಂದ ಫುಟ್ ವಾಲಿ ಆಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. 





Read more…