Karnataka news paper

‘ರೈಡರ್’ ಜೊತೆ ಅದೃಷ್ಟ ಪರೀಕ್ಷೆಗೆ ‘ಮಿಥುನ ರಾಶಿ’ ನಟಿ ಸಂಪದ ಹುಲಿವಾನ ಮುಂದು


Source : The New Indian Express

ಕಿರುತೆರೆಯಲ್ಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಂಪದ ಹುಲಿವಾನ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಮೂಲಕ  ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ.

ಮಿಥುನರಾಶಿ ಧಾರಾವಾಹಿಯಲ್ಲಿ ನಾನು 10 ತಿಂಗಳು ಕೆಲಸ ಮಾಡಿದೆ, ನನ್ನ ವಿದ್ಯಾಭ್ಯಾಸಕ್ಕಾಗಿ ಧಾರಾವಾಹಿಯಿಂದ ಹೊರಬಂದೆ, ಆನಂತರ ರೈಡರ್ ನಲ್ಲಿ ಕೆಲಸ ಮಾಡಲು ಅವಕಾಶ ದೊರೆಯಿತು. ಹಿರಿತೆರೆಗೆ ಕಾಲಿಡಲು ಇದು ನನಗೆ ಸುವರ್ಣವಕಾಶ ಎಂದು ನನಗನಿಸಿತು ಎಂದು ಸಂಪದ ಹೇಳಿದ್ದಾರೆ.

ವಿಜಯ್ ಕುಮಾರ್ ಕೊಂಡ ನಿರ್ದೇಶನದ ರೈಡರ್ ಸಿನಿಮಾದಲ್ಲಿ ಕಾಶ್ಮೀರ ಪರ್ದೇಸಿ ನಾಯಕಿಯಾಗಿದ್ದು, ಸಂಪದ ಎರಡನೇ ನಾಯಕಿಯಾಗಿ ನಟಿಸಿದ್ದಾರೆ.  ನಿಖಿಲ್ ಜೊತೆ ನಟಿಸುತ್ತಿರುವುದು ಖುಷಿ ತಂದಿದೆ,  ಧಾರಾವಾಹಿಗಿಂತ ಸಿನಿಮಾ ಸೆಟ್ ವಿಭಿನ್ನವಾಗಿದೆ, ದೊಡ್ಡ ಚಿತ್ರಗಳ ಭಾಗವಾಗುತ್ತಿರುವ ತಂತ್ರಜ್ಞರ ಜೊತೆ ಕೆಲಸ ಮಾಡುವುದು ತುಂಬಾ ಖುಷಿ ಕೊಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಸ್ಮಸ್ ಗೆ ರೈಡರ್ ಸಿನಿಮಾ ರಿಲೀಸ್: ಮಂಡ್ಯದಲ್ಲಿ ಡಿಸೆಂಬರ್ 19 ರಂದು ಪ್ರೀ ರಿಲೀಸ್ ಇವೆಂಟ್

ಸಂಪದ ಅವರು ರಾಜ್ ತರುಣ್, ಸಂದೀಪ್ ಮಾಧವ್ ಅಭಿನಯದ ಮಾಸ್ ಮಹಾರಾಜು ಚಿತ್ರದ ಮೂಲಕ ತೆಲುಗು ಚೊಚ್ಚಲ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.ನಾನು ಪ್ರಸ್ತುತ ನಟಿಯಾಗಿ ನನ್ನ ಕೆಲಸವನ್ನು ಆನಂದಿಸುತ್ತಿದ್ದೇನೆ ಮತ್ತು ನನ್ನ ಇಂಟೀರಿಯರ್ ಡಿಸೈನಿಂಗ್ ಅಧ್ಯಯನವನ್ನು ಸಹ ಮಾಡುತ್ತಿದ್ದೇನೆ” ಎಂದು ಯುವ ಪ್ರತಿಭೆ ಸಂಪದ ಹೇಳಿದ್ದಾರೆ.

ಡಿಸೆಂಬರ್ 24 ರಂದು ಬಿಡುಗಡೆಯಾಗಲಿರುವ ರೈಡರ್, ಚಂದ್ರು ಮನೋಹರನ್ ಅವರ ಲಹರಿ ಫಿಲ್ಮ್ಸ್ ಮತ್ತು ಸುನೀಲ್ ಗೌಡ ಅವರ ಶಿವನಂದಿ ಎಂಟರ್ಟೈನ್ಮೆಂಟ್ಸ್ ಸಹಯೋಗದೊಂದಿಗೆ ನಿರ್ಮಾಣವಾಗಿದೆ.



Read more…