Karnataka news paper

ಹೃತಿಕ್ ಮಾಜಿ ಪತ್ನಿ ಸುಸಾನೆ ಖಾನ್ ಜತೆಗೆ ಹುಟ್ಟುಹಬ್ಬ ಆಚರಿಸಿದ ನಟ ಅಸ್ಲಾನ್ ಗೋನಿ


ಬೆಂಗಳೂರು: ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸಾನೆ ಖಾನ್ ನಟ ಅಸ್ಲಾನ್ ಗೋನಿ ಜತೆಗೆ ಗಾಢವಾದ ಗೆಳೆತನ ಹೊಂದಿದ್ದಾರೆ.

ಸುಸಾನೆ ಖಾನ್ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿದ ಸಂದರ್ಭ ಅಲ್ಲಿ ಅಸ್ಲಾನ್ ಗೋನಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.

ಅಲ್ಲದೆ, ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿ ಪೋಸ್ಟ್ ಮಾಡಿದ್ದರು.

ಈ ಬಾರಿ ಅಸ್ಲಾನ್ ಗೋನಿ ಹುಟ್ಟುಹಬ್ಬದಲ್ಲಿ ಸುಸಾನೆ ಖಾನ್ ಪಾಲ್ಗೊಂಡಿದ್ದಾರೆ. ಬರ್ತ್‌ಡೇ ಆಚರಣೆಯ ಫೋಟೊ ಮತ್ತು ವಿಡಿಯೊಗಳನ್ನು ನಟಿ ಅನುಷ್ಕಾ ರಂಜನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಸ್ಲಾನ್ ಬರ್ತ್‌ಡೇ ಕೇಕ್ ಮೇಲಿನ ಕ್ಯಾಂಡಲ್ ಅನ್ನು ಸುಸಾನೆ ಖಾನ್ ಉರಿಸಿದ್ದಾರೆ. ಜತೆಗೆ ಆತ್ಮೀಯವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ, ನಮ್ಮಿಬ್ಬರ ಮಧ್ಯೆ ಏನೂ ಇಲ್ಲ ಎಂದು ಸುಸಾನೆ ಮತ್ತು ಅಸ್ಲಾನ್ ಹೇಳಿಕೊಂಡೇ ತಿರುಗಾಡುತ್ತಿದ್ದಾರೆ.

ಅದರ ಮಧ್ಯೆ ಇಬ್ಬರೂ ಪರಸ್ಪರ ಜತೆಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಬಿಟೌನ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.





Read More…Source link