Karnataka news paper

ನನಗೂ ಸೋಮವಾರದ ಮುಂಜಾನೆ ಇಷ್ಟವಿಲ್ಲ: ಆಲಿಯಾ ಭಟ್


ಬೆಂಗಳೂರು: ನಟಿ ಆಲಿಯಾ ಭಟ್ ವರ್ಕೌಟ್ ಮತ್ತು ಫಿಟ್ನೆಸ್ ಕುರಿತು ಹಲವು ಬಾರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಉತ್ತೇಜನ ನೀಡುತ್ತಿದ್ದರು. ಆದರೆ ಈ ಬಾರಿ ಸೋಮವಾರ ಮುಂಜಾನೆಯ ಕುರಿತು ಅವರು ಮಾಡಿರುವ ಪೋಸ್ಟ್ ಅಚ್ಚರಿಗೆ ಕಾರಣವಾಗಿದೆ.

ಸೋಮವಾರ ಎಂದರೆ ನನಗೂ ಹೀಗೆಯೇ ಅನ್ನಿಸುತ್ತದೆ. ಸಿನಿಮಾಗಳಲ್ಲಿ ಮಾತ್ರ ನಾವು ಜನರಿಗೆ ವಿವಿಧ ರೀತಿಯಲ್ಲಿ ಉಪದೇಶ ಮಾಡುತ್ತೇವೆ. ಆದರೆ ನಿಜ ಜೀವನದಲ್ಲಿ ನಮ್ಮ ಕಥೆಯೂ ಇಷ್ಟೇ ಎನ್ನುವ ಅರ್ಥದಲ್ಲಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ತಮ್ಮ ಮುದ್ದಿನ ಬೆಕ್ಕಿನ ಜತೆಗಿರುವ ಫೋಟೊ ಒಂದನ್ನು ಅವರು ಪೋಸ್ಟ್ ಮಾಡಿದ್ದು, ನಿಜಜೀವನದಲ್ಲಿ ಹೀಗೆ ಎಂದು ಅಡಿಬರಹ ನೀಡಿದ್ದಾರೆ.

ಮುದ್ದಿನ ಬೆಕ್ಕು ಎಂದರೆ ಆಲಿಯಾ ಅವರಿಗೆ ಅಚ್ಚುಮೆಚ್ಚು. ಬೆಕ್ಕನ್ನು ಮುದ್ದಿಸುತ್ತಿರುವ ಹಲವು ಫೋಟೊಗಳನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.





Read More…Source link