
ಹೌದು, ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ 2021 ಸೇಲ್ ಇದೀಗ ಲೈವ್ ಆಗಿದೆ. ಇನ್ನು ಈ ಮಾರಾಟ ಮೇಳವು ಇದೇ ಡಿಸೆಂಬರ್ 21 ರ ವರೆಗೂ ಚಾಲ್ತಿ ಇರಲಿದೆ. ಈ ಮಾರಾಟ ಮೇಳದಲ್ಲಿ ಆಪಲ್ ಐಫೋನ್ 13 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 13 ಮಿನಿ ಫೋನ್‌ಗಳು ಭರ್ಜರಿ ಎಕ್ಸ್‌ಚೇಂಜ್ ಕೊಡುಗೆ ಪಡೆದಿವೆ. ಐಫೋನ್ 13 ಪ್ರೊ ಮ್ಯಾಕ್ಸ್ (128GB) 1,29,900ರೂ. ದರದಲ್ಲಿ ಕಾಣಿಸಿಕೊಂಡಿದ್ದು, 15,450ರೂ.ಗಳ ವರೆಗೂ ಎಕ್ಸ್‌ಚೇಂಜ್ ಆಫರ್ ಲಭ್ಯ.

ಹಾಗೆಯೇ ಐಫೋನ್ 13 ಮಿನಿ (128GB) 69,900ರೂ. ದರದಲ್ಲಿ ಕಾಣಿಸಿಕೊಂಡಿದ್ದು, ಇದು ಸಹ 15,450ರೂ.ಗಳ ವರೆಗೂ ಎಕ್ಸ್‌ಚೇಂಜ್ ಆಫರ್ ಲಭ್ಯ. ಆಕ್ಸಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಶೇ. 5% ಕ್ಯಾಶ್‌ಬ್ಯಾಂಕ್ ಸಿಗಲಿದೆ. ಗ್ರಾಹಕರು ಪಿನ್‌ಕೋಡ್ ಅನ್ನು ನಮೂದಿಸಬೇಕು ಮತ್ತು ವಿನಿಮಯ ಕೊಡುಗೆಯು ತಮ್ಮ ಸ್ಥಳದಲ್ಲಿ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು ಎಂಬುದನ್ನು ಗಮನಿಸಬೇಕು. ಹಾಗಾದರೇ ಐಫೋನ್ 13 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 13 ಮಿನಿ ಫೋನ್‌ಗಳ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹಾಗೆಯೇ ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಜನಪ್ರಿಯ ಐಫೋನ್ 12 ಫೋನಿಗೂ ಬೊಂಬಾಟ್ ರಿಯಾಯಿತಿ ಲಭ್ಯ. ಈ ಫೋನ್ 64GB ವೇರಿಯಂಟ್ 54,199 ರೂ. ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್ ಮೋಡ್ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.

ಐಫೋನ್ 13 ಮಿನಿ ಫೋನ್ ಫೀಚರ್ಸ್
ಐಫೋನ್ 13 ಮಿನಿ ಫೋನ್ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. . 800nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ ಫೀಚರ್ಸ್
ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತಮ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ ಸಹ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ನೈಟ್ ಮೋಡ್ ಆಯ್ಕೆ ಇದ್ದು, ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್ ಬೆಂಬಲಿಸಲಿದೆ.

ಐಫೋನ್ 13 ಪ್ರೊ ಫೋನ್ ಫೀಚರ್ಸ್
ಐಫೋನ್ 13 ಪ್ರೊ ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ. ಇನ್ನು ಈ ನಾಲ್ಕು ಬಣ್ಣಗಳ ಆಯ್ಕೆ ಪಡೆದಿದೆ.

ಐಫೋನ್ 13 ಫೋನ್ ಫೀಚರ್ಸ್
ಐಫೋನ್ 13 ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಈ ಫೋನ್ ಬ್ಯಾಟರಿ ಹಿಂದಿನ ಐಫೋನ್ 12 ಗಿಂತ ಉತ್ತಮವಾಗಿದೆ.