Karnataka news paper

ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಎಫ್ ಐ ಆರ್!


Source : Online Desk

ಮುಂಬಯಿ: ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರ ಪೈಕಿ ಆಲಿಯಾ ಭಟ್ ಕೂಡಾ ಒಬ್ಬರು. ತಮ್ಮ ಸೌಂದರ್ಯದ ಜೊತೆಗೆ ಅಭಿನಯದಿಂದಲೂ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಈ ಬೆಡಗಿಯ ವಿರುದ್ದ ಮುಂಬೈ ನಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಾಗಿದೆ.

ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಿಯಮಗಳ ಪ್ರಕಾರ, ಕೋವಿಡ್‌ ಸೋಂಕು ಬಂದರೂ ಬರದಿದ್ದರೂ, ಪಾಸಿಟಿವ್‌ ಬಂದ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ 14-ದಿನಗಳು ಕ್ವಾರಂಟೈನ್‌ ನಲ್ಲಿರಬೇಕು. ಆದರೆ ಈ ನಿಯಮಗಳನ್ನು ಉಲ್ಲಂಘಿಸಿ, ದೆಹಲಿಯಲ್ಲಿ ತಮ್ಮ ಹೊಸ ಚಿತ್ರ ‘ಬ್ರಹ್ಮಾಸ್ತ್ರ’ ಮೋಷನ್ ಪೋಸ್ಟರ್ ಬಿಡುಗಡೆಗಾಗಿ ಅಲಿಯಾ ಭಟ್ ರಣಬೀರ್ ಕಪೂರ್ ಜೊತೆ ಹೋಗಿದ್ದರು. ಅಲ್ಲದೆ ಅಲ್ಲಿ ಸಾಕಷ್ಟು ಜನರನ್ನು ಭೇಟಿಯಾಗಿದ್ದರು ಇದರೊಂದಿಗೆ ಅಲಿಯಾ ಭಟ್‌ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲು ಬಿಎಂಸಿ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ರಣ್ ಬೀರ್ ಜೊತೆಗೆ ರಿಲೇಷನ್ ಶಿಪ್ ಅಧಿಕೃತವಾಗಿ ಬಹಿರಂಗಪಡಿಸಿದ ಆಲಿಯಾ

ಈ ಕುರಿತು ಬಿ ಎಂ ಸಿ ಸಾರ್ವಜನಿಕ ಆರೋಗ್ಯ ಸಮಿತಿ ಅಧ್ಯಕ್ಷ ರಾಜು ಪಟೇಲ್, “ಮನೆಯಲ್ಲಿ ಐಸೋಲೇಶನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಲಿಯಾ ಭಟ್ ವಿರುದ್ಧ ಪ್ರಕರಣ ದಾಖಲಿಸಲು ಡಿ ಎಂಸಿ ಆರೋಗ್ಯ ಇಲಾಖೆಗೆ ಆದೇಶ ನೀಡಿದ್ದೇನೆ. ಅಲಿಯಾ ಭಟ್‌ ಅನೇಕರಿಗೆ ರೋಲ್‌ ಮಾಡೆಲ್‌ ಅಂತಹ ವ್ಯಕ್ತಿಗಳು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ನಿಯಮಗಳು ಎಲ್ಲರಿಗೂ ಸಮಾನ ಎಂದು ಹೇಳಿದ್ದಾರೆ.

Trailer: ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ ಮೋಷನ್ ಪೋಸ್ಟರ್ ರಿಲೀಸ್

ದೆಹಲಿಯಲ್ಲಿರುವ ಆಲಿಯಾ ಭಟ್ ಅವರ ಬಗ್ಗೆ ಮಾಹಿತಿ ಪಡೆಯಲು ಮ್ಯಾನೇಜರ್ ಅನ್ನು ಬುಧವಾರ ಬಿಎಂಸಿ ಸಂಪರ್ಕಿಸಿ, ನಿಯಮಾವಳಿಗಳನ್ನು ಉಲ್ಲಂಘಿಸಿರುವ ಕಾರಣ ಅಲ್ಲಿಯೇ ಇರಬೇಕೆಂದು ಅಲಿಯಾಗೆ ತಾಕೀತು ಮಾಡಲಾಗಿತ್ತು. ಆದರೆ ಅದನ್ನೂ ಮುರಿದ ಈ ಚೆಲುವೆ ನಿನ್ನೆ ರಾತ್ರಿ ಮುಂಬೈಗೆ ವಾಪಸಾಗಿದ್ದಾಳೆ. ಇದರೊಂದಿಗೆ ಭಟ್‌ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಲು ಬಿಎಂಸಿ ಸಿದ್ಧತೆ ನಡೆಸಿದೆ.



Read more…