Karnataka news paper

ಉತ್ತರ ಕೊರಿಯಾ ಜನರು ಇನ್ನೂ 10 ದಿನ ನಗುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ! ಏಕೆ ಗೊತ್ತಾ?


Source : Online Desk

ಪ್ಯೊನ್ಗ್‌ಯಾಂಗ್: ಉತ್ತರ ಕೊರಿಯಾ ತನ್ನ ವಿಚಿತ್ರ ಕಾನೂನುಗಳು ಮತ್ತು ನಿರ್ಧಾರಗಳಿಗೆ ವಿಶ್ವದಾದ್ಯಂತ ಪ್ರಸಿದ್ಧಿಯಾಗಿದ್ದು, ಇದೀಗ ಇಲ್ಲಿನ ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಸಾರ್ವಜನಿಕರ ನಗುವನ್ನು ನಿಷೇಧಿಸಿದ್ದಾರೆ.

ಉತ್ತರ ಕೊರಿಯಾ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರ 10ನೇ ಪುಣ್ಯಸ್ಮರಣೆ ಪ್ರಯುಕ್ತ ಮುಂದಿನ 10 ದಿನಗಳ ಕಾಲ ಉತ್ತರ ಕೊರಿಯಾ ನಾಗರಿಕರು ಶೋಕಿಸಬೇಕಾಗಿದೆ. ಈ ಸಮಯದಲ್ಲಿ ಸಂತೋಷವಾಗಿರಲು ಅಥವಾ ನಗಲು ಸಾಧ್ಯವಿಲ್ಲ. ಯಾರಾದರೂ ಮದ್ಯಪಾನ ಮಾಡುತ್ತಿರುವುದು ಕಂಡುಬಂದರೆ ಅವರಿಗೆ ನೇರವಾಗಿ ಮರಣದಂಡನೆ ವಿಧಿಸುವುದಾಗಿ ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಪ್ರಕಟಿಸಿದ್ದಾರೆ. 

ಡೈಲಿಮೇಲ್ ಸುದ್ದಿ ಪ್ರಕಾರ, ಕಿಮ್ ಜಾಂಗ್ ಇಲ್ 1994 ರಿಂದ 2011ರವರೆಗೆ ಉತ್ತರ ಕೊರಿಯಾವನ್ನು ಆಳಿ 2021ರಲ್ಲಿ ನಿಧನರಾದರು. ಇಲ್ ನಂತರ ಅವರ ಮೂರನೇ ಮತ್ತು ಕಿರಿಯ ಮಗ ಕಿಮ್ ಜಾಂಗ್ ಉನ್ ದೇಶದ ಉಸ್ತುವಾರಿ ವಹಿಸಿಕೊಂಡಿದ್ದು, ಇದೀಗ ಕಿಮ್ ಜಾಂಗ್ ಇಲ್ ನಿಧನಕ್ಕೆ 10 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಜನರಿಗೆ 10 ದಿನಗಳ ಕಟ್ಟುನಿಟ್ಟಾದ ಶೋಕಾಚರಣೆಯನ್ನು ಆಚರಿಸಲು ಆದೇಶಿಸಲಾಗಿದೆ. 



Read more