ಬೆಂಗಳೂರಿನಲ್ಲಿ ಪಾಸಿಟಿವ್ ಕೇಸ್ ಏರಿಕೆ, ಕೊಡಗು, ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಪ್ರಕರಣ
ಮುಖ್ಯವಾಗಿ ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ – 19 ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು ಶನಿವಾರ 190 ಕೇಸ್‌ಗಳು ದೃಢಪಟ್ಟಿವೆ. ಇನ್ನುಳಿದಂತೆ ಕೊಡಗಿನಲ್ಲಿ 21, ದಕ್ಷಿಣ ಕನ್ನಡದಲ್ಲಿ 20, ಹಾಸನದಲ್ಲಿ 17, ಮೈಸೂರಿನಲ್ಲಿ 14, ಚಿಕ್ಕಮಗಳೂರಿನಲ್ಲಿ 10 ಹೊಸ ಪ್ರಕರಣಗಳು ವರದಿಯಾಗಿವೆ.
ಉಳಿದೆಲ್ಲಾ ಜಿಲ್ಲೆಗಳಲ್ಲಿ ಒಂದಂಕಿ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 10 ಜಿಲ್ಲೆಗಳು ಶೂನ್ಯ ಸಾಧನೆ ಮಾಡಿವೆ.
ಗುಣಮುಖ ಇಳಿಕೆ, ಸಕ್ರಿಯ ಪ್ರಕರಣ ಅಲ್ಪ ಏರಿಕೆ
ಶನಿವಾರ ರಾಜ್ಯದಲ್ಲಿ 317 ಸೋಂಕಿತರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಕೋವಿಡ್ – 19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 29,54,513ಕ್ಕೆ ಏರಿಕೆಯಾಗಿದೆ.
ಶನಿವಾರ ಹೊಸ ಕೊರೊನಾ ಕೇಸ್‌ಗಳಿಗಿಂತ ಸ್ವಲ್ಪ ಕಡಿಮೆ ಸಂಖ್ಯೆಯ ರೋಗಿಗಳು ಚೇತರಿಸಿಕೊಂಡಿದ್ದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ದಾಖಲಾಗಿದೆ.
ಸದ್ಯ ರಾಜ್ಯದಲ್ಲಿ 7,306 ಮಂದಿ ಇನ್ನೂ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಬೆಂಗಳೂರು ನಗರದಲ್ಲಿ 5,547 ಆಕ್ಟಿವ್ ಕೊರೊನಾ ಕೇಸ್‌ಗಳಿದ್ದರೆ, 8 ಜಿಲ್ಲೆಗಳಲ್ಲಿ 100 ಕ್ಕಿಂತ ಹೆಚ್ಚಿನ ಸಂಖ್ಯೆಯ ಸೋಂಕಿತರು ಇನ್ನೂ ಚಿಕಿತ್ಸೆಯ ನೆರವಿನಲ್ಲಿದ್ದಾರೆ.
ಏತನ್ಮಧ್ಯೆ ಶನಿವಾರ 2.8 ಲಕ್ಷ (2,80,534) ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದು, ರಾಜ್ಯದಲ್ಲಿ ಇಲ್ಲಿಯವರೆಗೆ ನೀಡಲಾದ ಕೊರೊನಾ ಲಸಿಕೆ ಡೋಸ್‌ಗಳ ಸಂಖ್ಯೆ 8 ಕೋಟಿ (8,01,62,269)ಗೆ ಏರಿಕೆಯಾಗಿದೆ.