
ಹೌದು, ಗೂಗಲ್ ತನ್ನ ಜಿ-ಮೇಲ್ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಕಾಲಿಂಗ್ ಫೀಚರ್ಸ್ ಅನ್ನು ಸೇರ್ಪಡೆ ಮಾಡಿದೆ. ಗೂಗಲ್‌ನ ಎಲ್ಲಾ ಬಳಕೆದಾರರು ಈ ಕಾಲಿಂಗ್ ಫೀಚರ್ಸ್ ಅನ್ನು ಬಳಸುಬಹುದಾಗಿದೆ. ಈ ಹಿಂದೆ ಹ್ಯಾಂಗ್‌ಔಟ್ಸ್‌ನಲ್ಲಿ ಈ ಫೀಚರ್ಸ್ ಲಭ್ಯವಿದ್ದ ಕಾರಣ ಗೂಗಲ್‌ಗೆ ಇದೇನು ಹೊಸತಲ್ಲ. ಸದ್ಯ ಗೂಗಲ್‌ನ ಜಿ-ಮೇಲ್‌ನಲ್ಲಿ ಕಾಲ್ ಮಾಡಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಜಿ-ಮೇಲ್ ಮೂಲಕ ಕಾಲ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಂಡ್ರಾಯ್ಡ್ ಮತ್ತು ಐಫೋನ್ ಡಿವೈಸ್‌ನಲ್ಲಿ ಜಿ-ಮೇಲ್ ಕರೆ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಜಿ-ಮೇಲ್ ಅಕೌಂಟ್ ತೆರೆಯಿರಿ.
ಹಂತ:2 ನಂತರ ಜಿ-ಮೇಲ್ ಟಾಸ್ಕ್ ಬಾರ್‌ನಲ್ಲಿರುವ “ಮೀಟ್” ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ “ನ್ಯೂ ಮೀಟ್” ಬಟನ್ ಮೇಲೆ ಟ್ಯಾಪ್ ಮಾಡಿ. ಮೀಟಿಂಗ್ ಲಿಂಕ್ ಅನ್ನು ಹಂಚಿಕೊಳ್ಳಲು ಆಯ್ಕೆಗಳನ್ನು ಕಂಡು ಬರಲಿದೆ.
ಹಂತ:4 ನೀವು ತ್ವರಿತ ಸಭೆಗೆ ಸೇರಲು ಆಯ್ಕೆಮಾಡಿದರೆ, ನಿಮ್ಮ ಕಾಲರ್ ಜೊತೆಗೆ ಲಿಂಕ್ ಅನ್ನು ಹಂಚಿಕೊಳ್ಳಲು “ಇನ್ವೈಟ್ ಲಿಂಕ್ ಶೇರ್” ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:5 ನೀವು ಲಿಂಕ್ ಅನ್ನು ಟ್ಯಾಪ್ ಮಾಡಿದರೆ, ಸ್ವಯಂಚಾಲಿತವಾಗಿ ಮೀಟಿಂಗ್ ಸ್ಪೇಸ್‌ಗೆ ಸೇರಬಹುದು.
ಹಂತ:6 ನಂತರ ಜಿ-ಮೇಲ್ ತೆರೆಯಿರಿ ಮತ್ತು “ಚಾಟ್” ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:7 ನಿಮ್ಮ ಚಾರ್ ವಿಂಡೋವನ್ನು ಆಯ್ಕೆಮಾಡಿ ಮತ್ತು ಅದನ್ನು ತೆರೆಯಿರಿ.
ಹಂತ:8 ಈಗ “+” ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು “ಮೀಟ್ ಲಿಂಕ್” ಆಯ್ಕೆಮಾಡಿ.
ಹಂತ:9 ಲಿಂಕ್ ಅನ್ನು ನಿಮ್ಮ ಸಭೆಗೆ ಭಾಗವಹಿಸುವವರಿಗೆ ಕಳುಹಿಸಬೇಕಾಗುತ್ತದೆ.
ಹಂತ:10 ಈಗ ನೀವು ಮತ್ತು ನಿಮ್ಮ ಸಂಪರ್ಕದ ಇಬ್ಬರೂ ಸಭೆಯನ್ನು ಪ್ರಾರಂಭಿಸಲು ಲಿಂಕ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

PC ಯಲ್ಲಿ ಜಿ-ಮೇಲ್ ಕರೆ ಮಾಡುವುದು ಹೇಗೆ?
ಹಂತ:1 ಲ್ಯಾಪ್‌ಟಾಪ್‌ನಲ್ಲಿ ಜಿ-ಮೇಲ್ ಕರೆ ಮಾಡಲು ನಿಮ್ಮ ವೆಬ್ ಬ್ರೌಸರ್‌ನಲ್ಲಿ Gmail ತೆರೆಯಿರಿ.
ಹಂತ:2 ನಂತರ ಎಡಭಾಗದ ಬಾರ್‌ನಲ್ಲಿ, “ಮೀಟ್” ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು “ಹೊಸ ಸಭೆ” ಕ್ಲಿಕ್ ಮಾಡಿ.
ಹಂತ:3 ಇನ್ವೈಟ್ ಲಿಂಕ್‌ನೊಂದಿಗೆ ಹೊಸ ವಿಂಡೋ ಪಾಪ್ ಅಪ್ ಆಗುತ್ತದೆ.
ಹಂತ:4 ಈ ಲಿಂಕ್ ಅನ್ನು ನಿಮ್ಮ ಕರೆ ಮಾಡುವವರಿಗೆ ಇಮೇಲ್ ಮೂಲಕ ಕಳುಹಿಸಬಹುದು.
ಹಂತ:5 ನಂತರ, “ಈಗ ಸೇರಿಕೊಳ್ಳಿ” ಬಟನ್ ಅನ್ನು ಕ್ಲಿಕ್ ಮಾಡಿ. ಅದೇ ಲಿಂಕ್ ಮೂಲಕ ಇತರ ವ್ಯಕ್ತಿಯು ಸೇರುವವರೆಗೆ ಕಾಯಿರಿ.
ಹೀಗೆ ಮಾಡುವ ಮೂಲಕ ಜಿ-ಮೇಲ್ ಕರೆಯಲ್ಲಿ ಭಾಗವಹಿಸಬಹುದು.

ಜಿ-ಮೇಲ್‌ನಲ್ಲಿ ಆಡಿಯೋ/ವಿಡಿಯೋ ಕರೆಗಳನ್ನು ಮಾಡುವುದು ಹೇಗೆ?
ಹಂತ:1 ಮೊದಲನೇಯದಾಗಿ ನಿಮ್ಮ ಡಿವೈಸ್‌ನಲ್ಲಿ ಜಿ-ಮೇಲ್ ಅಪ್ಲಿಕೇಶನ್ ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿ
ಹಂತ:2 ನಂತರ, ನೀವು ಜಿ-ಮೇಲ್ ಅನ್ನು ತೆರೆಯಬೇಕು ಮತ್ತು “ಚಾಟ್‌ಗಳು” ಟ್ಯಾಬ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. Google Workspace ಬಳಕೆದಾರರಿಗೆ, ಇದನ್ನು ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ. ನಿಯಮಿತ ಬಳಕೆದಾರರು ಸೆಟ್ಟಿಂಗ್‌ಗಳಿಂದ ಚಾಟ್ಸ್ ಆಯ್ಕೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ.
ಹಂತ:3 ಚಾಟ್‌ಗಳ ವಿಭಾಗದ ಅಡಿಯಲ್ಲಿ, ಪಟ್ಟಿ ಮಾಡಲಾದ ಎಲ್ಲಾ ಸಂಭಾಷಣೆಗಳನ್ನು ನೀವು ನೋಡುತ್ತೀರಿ. ಇದರಲ್ಲಿ ಒಂದನ್ನು ಟ್ಯಾಪ್ ಮಾಡಿ.
ಹಂತ:4 ನಂತರ ಮೇಲಿನ ಮೂಲೆಯಿಂದ, ನೀವು ಕ್ರಮವಾಗಿ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಲು ಫೋನ್ ಅಥವಾ ವೀಡಿಯೊ ಐಕಾನ್‌ಗಳನ್ನು ಟ್ಯಾಪ್ ಮಾಡಬಹುದು.
ಹಂತ:5 ನೀವು ಜಿ-ಮೇಲ್ ಮೂಲಕ ಕರೆಯನ್ನು ಸ್ವೀಕರಿಸಿದಾಗ, ಸಾಮಾನ್ಯ ಫೋನ್ ಕರೆಗಳಂತೆಯೇ ಕಾಲ್ ನೋಟಿಫಿಕೇಶನ್ ಕಾಣಬಹುದಾಗಿದೆ.