Karnataka news paper

ಪಾಕ್ ಲೆಗ್‌ ಸ್ಪಿನ್ನರ್‌ ಯಾಸಿರ್‌ ಶಾ ವಿರುದ್ಧ ಅತ್ಯಾಚಾರ ಆರೋಪ!


ಹೈಲೈಟ್ಸ್‌:

  • ಗೆಳೆಯನೊಂದಿಗೆ ಸೇರಿ ಅತ್ಯಾಚಾರದಲ್ಲಿ ಪಾಲ್ಗೊಂಡಿರುವ ಆರೋಪ.
  • ಇಸ್ಲಾಮಾಬಾದ್‌ನ ಶಾಲೀಮಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು.
  • ಸದ್ಯ ಗಾಯದ ಸಮಸ್ಯೆ ಕಾರಣ ಪಾಕಿಸ್ತಾನ ತಂಡದಿಂದ ಹೊರಗಿರುವ ಯಾಸಿರ್‌ ಶಾ.

ಇಸ್ಲಾಮಾಬಾದ್‌: ಪಾಕಿಸ್ತಾನ ಕ್ರಿಕೆಟ್‌ ತಂಡದ ಅನುಭವಿ ಲೆಗ್‌ ಸ್ಪಿನ್ನರ್‌ ಯಾಸಿರ್‌ ಶಾ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಕೇಳಿಬಂದಿದೆ. 14 ವರ್ಷದ ಬಾಲಕಿ ಮೇಲೆ ಅತ್ಯಾಚರ ಮತ್ತು ದೌರ್ಜನ್ಯ ಎಸಗಿದ್ದಾರೆ ಎಂದು ಇಸ್ಲಾಮಾಬಾದ್‌ನ ಶಾಲೀಮಾರ್‌ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.

ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ಪ್ರಕಾರ ಯಾಸಿರ್‌ ಶಾ ಅವರ ಸ್ನೇಹಿತ ಫರಾನ್‌ ಎಂಬಾತ ಗನ್ ತೋರತಿಸಿ ಹೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ದೂರಿನಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ್‌ ಬಳಿ ಹೋದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯಾಸಿರ್‌ ಹೆದರಿಸಿದ್ದರು ಎಂದು ಬಾಲಕಿ ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

“ನಾನು ಯಾಸಿರ್‌ ಅವರನ್ನು ವಾಟ್ಸ್‌ಆಪ್‌ ಮೂಲಕ ಸಂಪರ್ಕಿಸಿ ವಿಚಾರ ತಿಳಿಸಿದಾಗ ಅವರು ಅದನ್ನು ತಮಾಷೆ ಮಾಡಿದರು. ಫರಾನ್‌ಗೆ ಚಿಕ್ಕ ವಯಸ್ಸಿನ ಹುಡುಗಿಯರೆಂದರೆ ಇಷ್ಟ ಎಂದು ಹೇಳಿ ನಕ್ಕರು. ಫರಾನ್‌ ಪ್ರಭಾವಿ ವ್ಯಕ್ತಿ ಆತನಿಗೆ ಉನ್ನತಾಧಿಕಾರಿಗಳ ಪರಿಚಯವಿದೆ ಹುಶಾರ್‌ ಎಂದು ಹೆದರಿಸಿದರು. ಯಾಸಿರ್‌ ಮತ್ತು ಫರಾನ್‌ ಚಿಕ್ಕ ಹುಡುಗಿಯರನ್ನು ರೇಪ್‌ ಮಾಡಿ ವಿಡಿಯೋ ಮಾಡುತ್ತಾರೆ,” ಎಂದು ಎಫ್‌ಐಆರ್‌ನಲ್ಲಿ ಬಾಲಕಿಯ ಹೇಳಿಕೆಯನ್ನು ದಾಖಲಿಸಲಾಗಿದೆ.

ಪಾಕಿಸ್ತಾನ ಪ್ರವಾಸಕ್ಕೆ ಕೊನೆಗೂ ಗ್ರೀನ್‌ ಸಿಗ್ನಲ್‌ ಕೊಟ್ಟ ನ್ಯೂಜಿಲೆಂಡ್!

ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುವ ಮುನ್ನ ಸಂತ್ರಸ್ಥ ಹುಡುಗಿಗೆ ಫ್ಲ್ಯಾಟ್‌ ಮತ್ತು ಮುಂದಿನ 18 ವರ್ಷಗಳವರೆಗಿನ ಜೀವನಾಂಶ ಭರಿಸಿಕೊಡುವುದಾಗಿ ಯಾಸಿರ್‌ ಭರವಸೆ ಕೂಡ ನೀಡಿದ್ದರು ಎನ್ನಲಾಗಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗದ 200 ವಿಕೆಟ್‌ ಪಡೆದ ಬೌಲರ್‌ ಆಗಿರುವ ಯಾಸಿರ್‌ ಶಾ, ಈ ವರ್ಷ ವೆಸ್ಟ್‌ ಇಂಡೀಸ್‌ ವಿರುದ್ಧ ತಮ್ಮ ಕೊನೆಯ ಟೆಸ್ಟ್‌ ಆಡಿದ್ದಾರೆ. ಬಳಿಕ ಹೆಬ್ಬೆರಳಿನ ಗಾಯದ ಸಮಸ್ಯೆ ಎದುರಿಸಿದ್ದು, ಇದರಿಂದ ಚೇತರಿಸದ ಕಾರಣಕ್ಕೆ ಇತ್ತೀಚಿನ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯಿಂದಲೂ ಹೊರಗುಳಿದಿದ್ದರು.

ಈಗ ಅತ್ಯಾಚಾರ ಆರೋಪ ಕಾರಣ ಅವರು ಟೆಸ್ಟ್‌ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಮತ್ತಷ್ಟು ಕಾಯುವಂತ್ತಾಗಿದೆ. ಪ್ರಕರಣ ಸಂಬಂಧ 35 ವರ್ಷದ ಅನುಭವಿ ಕ್ರಿಕೆಟಿಗನಿಗೆ ವಿಚಾರಣೆ ಸಲುವಾಗಿ ಪೊಲೀಸ್‌ ಠಾಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಲಾಗಿದೆ. ಪ್ರಕರಣದಲ್ಲಿ ಯಾಸಿರ್‌ ತಪ್ಪು ಸಾಬೀತಾದರೆ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಪಾಕಿಸ್ತಾನದ ತಮ್ಮ ನೆಚ್ಚಿನ ಮೂವರು ಕ್ರಿಕೆಟಿಗರನ್ನು ಆರಿಸಿದ ಅಶ್ವಿನ್‌!

ಮುಂದಿನ ವರ್ಷ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 3 ಪಂದ್ಯಗಳ ಟೆಸ್ಟ್ ಕ್ರಿಕೆಟ್‌ ಸರಣಿಯನ್ನು ಆಡುವುದಿದೆ. ಕಳೆದ ಬಾರಿ ಪಾಕ್‌ ತಂಡ ಆಸೀಸ್‌ ಪ್ರವಾಸ ಕೈಗೊಂಡಾಗ ಲೆಗ್‌ ಸ್ಪಿನ್ನರ್‌ ಯಾಸಿರ್‌ ಭಾರಿ ಸದ್ದು ಮಾಡಿದ್ದರು. ಈ ಬಾರಿಯೂ ಆಸೀಸ್‌ ಪ್ರವಾಸಕ್ಕೆ ಅವರು ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ, ಅತ್ಯಾಚಾರದಂತಹ ಗಂಭೀರ ಆರೋಪ ಅವರ ಕ್ರಿಕೆಟ್‌ ವೃತ್ತಿ ಬದುಕನ್ನು ಈಗ ಸಂಕಷ್ಟಕ್ಕೆ ನೂಕಿದೆ.

ಪಾಕ್‌ ಪರ 46 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಯಾಸಿರ್‌ 31.08ರ ಸರಾಸರಿಯಲ್ಲಿ 235 ವಿಕೆಟ್‌ಗಳನ್ನು ಪಡೆದಿದ್ದಾರೆ. 25 ಒಡಿಐ ಪಂದ್ಯಗಳಿಂದ 24 ವಿಕೆಟ್‌ಗಳನ್ನು ಪಡೆದ ಹೆಗ್ಗಳಿಕೆ ಅವರದ್ದು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2 ಪಂದ್ಯಗಳನ್ನು ಆಡಿದ್ದಾರೆ ಆದರೂ ಯಾವುದೇ ಯಶಸ್ಸು ಸಿಕ್ಕಿಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಪರಿಣಾಮಕಾರಿ ಬೌಲರ್‌ ಆಗಿ ಗುರುತಿಸಿಕೊಂಡಿದ್ದಾರೆ.



Read more