Source : Online Desk
ಬೆಂಗಳೂರು: ನಟ ಅಲ್ಲು ಅರ್ಜುನ್ ನಟನೆಯ ಸಿನಿಮಾ ‘ಪುಷ್ಪ’ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದ್ದು, ಎರಡೇ ದಿನಕ್ಕೆ 100 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.
ಡಿಸೆಂಬರ್ 17ರಂದು ‘ಪುಷ್ಪ’ಸಿನಿಮಾ ತೆರೆಗೆ ಬಂದಿದ್ದು, ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಸುಕುಮಾರ್ ನಿರ್ದೇಶನದ ಈ ಚಿತ್ರ ಕ್ರಿಸ್ಮಸ್ಗೂ ಮೊದಲು ಕನಿಷ್ಠ ಒಂದು ವಾರದವರೆಗೆ ಓಡುವ ನಿರೀಕ್ಷೆಯಿದೆ.
ಇದನ್ನು ಓದಿ: ಸಾಮಿ ಸಾಮಿ ಹಾಡಿಗೆ ‘ರೀಲ್’ ಮಾಡಿದ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್
ಇದು ಪ್ಯಾನ್- ಇಂಡಿಯಾ ಸಿನಿಮಾವಾಗಿದ್ದು, ಡಿಸೆಂಬರ್ 17 ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಪುಷ್ಪ ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಏಕಕಾಲಕ್ಕೆ ರಿಲೀಸ್ ಆಗಿದೆ.
ಪುಷ್ಪ ಸಿನಿಮಾ ಎರಡೇ ದಿನಕ್ಕೆ 100 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಅಮೆರಿಕಾದಲ್ಲಿ ಹೆಚ್ಚು ಕಮ್ಮಿ 9 ಕೋಟಿ ರೂ. ಗಳಿಸಿದೆ ಎಂದು ರಮೇಶ್ ಬಾಲಾ ಅವರು ಟ್ವೀಟ್ ಮಾಡಿದ್ದಾರೆ.
#Pushpa has crossed ₹ 100 Crs Gross at the WW Box office in 2 days..
— Ramesh Bala (@rameshlaus) December 19, 2021