ಅಸಲಿಗೆ, 2021ರ ಆರಂಭದಿಂದ ಕೋವಿಡ್ ಮಧ್ಯೆ ಸಿನಿ ಲೋಕದಲ್ಲಿ ಏನೆಲ್ಲಾ ವಿವಾದಗಳಾದವು? ಈ ವರ್ಷ ಸಾಕ್ಷಿಯಾದ ರಗಳೆಗಳ ರೌಂಡಪ್ ಇಲ್ಲಿದೆ ನೋಡಿ…
ರಾಧಿಕಾ ಕುಮಾರಸ್ವಾಮಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಆರ್‌ಎಸ್‌ಎಸ್ ರಾಷ್ಟ್ರೀಯ ಮುಖಂಡರು, ಪ್ರಭಾವಿ ರಾಜಕಾರಣಿಗಳು ತನಗೆ ಗೊತ್ತು ಎಂದು ಹೇಳಿಕೊಂಡು ಗಣ್ಯರು, ಉದ್ಯಮಿಗಳಿಂದ ಕೋಟ್ಯಂತರ ಹಣವನ್ನು ವಂಚಿಸಿರುವ ಆರೋಪದಲ್ಲಿ ಯುವರಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರೂ ಕೇಳಿಬಂದಿತ್ತು. ರಾಧಿಕಾ ಕುಮಾರಸ್ವಾಮಿ ಮತ್ತು ಅವರ ಸಹೋದರನ ಬ್ಯಾಂಕ್ ಖಾತೆಗೆ ಯುವರಾಜ್ ಭಾರಿ ಮೊತ್ತದ ಹಣ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದ ರಾಧಿಕಾ ಕುಮಾರಸ್ವಾಮಿ ‘’ಜೀವನದಲ್ಲಿ ನಮಗೆ ಮೋಸ ಆಗಿದೆಯೇ ಹೊರತು, ನಾವು ಯಾರಿಗೂ ಮೋಸ ಮಾಡಿಲ್ಲ’’ ಎಂದು ಹೇಳಿದ್ದರು. ಹಾಗೇ, ‘’2020ರ ಫೆಬ್ರವರಿ-ಮಾರ್ಚ್‌ನಲ್ಲಿ ನನಗೆ ಯುವರಾಜ್ ಹಣ ಹಾಕಿದ್ದಾರೆ. ಅವರ ಮತ್ತು ನಮ್ಮ ಬ್ಯಾನರ್ ಸೇರಿ ಒಟ್ಟಾಗಿ ಸಿನಿಮಾ ಮಾಡೋಣ ಎಂದು ಹೇಳಿದ್ದರು. ನಾನು ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಬೇಕಿದ್ರೆ ನಿಮ್ಮ ಬ್ಯಾನರ್‌ನಲ್ಲಿ ಮಾಡಿ, ಇಲ್ಲ ನಮ್ಮ ಬ್ಯಾನರ್‌ನಲ್ಲಿ ಮಾಡೋಣ ಅಂತ ಹೇಳಿದ್ದೆ. ನಿರ್ಮಾಪಕರೊಬ್ಬರು ನನ್ನ ಖಾತೆಗೆ 60 ಲಕ್ಷ ರೂಪಾಯಿ ಹಾಕಿದ್ದರು. ನನ್ನ ಖಾತೆಗೆ ಒಟ್ಟು 75 ಲಕ್ಷ ರೂಪಾಯಿ ಬಂದಿದೆ’’ ಅಂತೂ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದರು.
‘ನಮಗೆ ಮೋಸ ಆಗಿದೆಯೇ ಹೊರತು, ನಾವು ಯಾರಿಗೂ ಮೋಸ ಮಾಡಿಲ್ಲ’- ನಟಿ ರಾಧಿಕಾ ಕುಮಾರಸ್ವಾಮಿ!
ಜಗ್ಗೇಶ್

ಚಿತ್ರ ನಿರ್ಮಾಪಕರ ಬಳಿ ಮಾತನಾಡುವಾಗ ದರ್ಶನ್ ಹುಡುಗರ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಯ್ತು. ಇದರಿಂದ ಗಾಂಧಿನಗರದಲ್ಲಿ ಕೋಲಾಹಲವೇ ಸೃಷ್ಟಿಯಾಯ್ತು. ‘’ಚಿತ್ರ ಪ್ರಚಾರಕ್ಕೆ ಇದು ಫೇಕ್ ನ್ಯೂಸ್. ಒಬ್ಬ ಚಿಕ್ಕ ಹುಡುಗನದ್ದು ಈ ಆಟ’’ ಅಂತ ನಟ ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದರು. ಆದರೂ, ಜಗ್ಗೇಶ್ ವಿರುದ್ಧ ದರ್ಶನ್ ಫ್ಯಾನ್ಸ್ ತಿರುಗಿ ಬಿದ್ದಿದ್ದರು. ಜಗ್ಗೇಶ್ ಶೂಟಿಂಗ್ ಮಾಡುತ್ತಿದ್ದ ಸ್ಥಳಕ್ಕೆ ದರ್ಶನ್ ಫ್ಯಾನ್ಸ್ ಮುತ್ತಿಗೆ ಹಾಕಿದ್ದರು. ಬಳಿಕ ನಟ ದರ್ಶನ್ ‘’ಅಭಿಮಾನಿಗಳ ಪರವಾಗಿ ಜಗ್ಗೇಶ್ ಸರ್ ಹತ್ತಿರ ಕ್ಷಮೆ ಕೇಳ್ತೀನಿ’’ ಅಂತ ಹೇಳಿದ್ದರು. ಪರಿಣಾಮ, ವಿವಾದಕ್ಕೆ ತೆರೆ ಬಿತ್ತು.
“ಮನಸ್ಸು ಹಗುರವಾಯಿತು, ಧನ್ಯವಾದಗಳು ದರ್ಶನ್” : ‘ನವರಸನಾಯಕ’ ನಟ ಜಗ್ಗೇಶ್!
ಪೊಗರು

ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾ ಕೂಡ ವಿವಾದಕ್ಕೆ ಸಿಲುಕಿತ್ತು. ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಲಾಗಿದೆ, ಅರ್ಚಕರ ಸಂಪ್ರದಾಯವನ್ನು ಅವಮಾನಿಸಲಾಗಿದೆ ಎಂದು ಬ್ರಾಹ್ಮಣ ಸಮುದಾಯ ಕೆಂಡಕಾರಿತ್ತು. ಬಳಿಕ ವಿವಾದಾತ್ಮಕ ಸೀನ್‌ಗಳನ್ನು ಕಟ್ ಮಾಡುವುದಾಗಿ ನಿರ್ದೇಶಕ ನಂದ ಕಿಶೋರ್ ಹೇಳಿದ್ದರು.
‘ಪೊಗರು’ ತನ್ನ ಚಿತ್ರದಲ್ಲಿ ಮಾತ್ರ ಪೊಗರು ತೋರಿಸಲಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಎಚ್ಚರಿಕೆ!
ಕಂಗನಾ ರಣಾವತ್

ಬಾಲಿವುಡ್‌ನಲ್ಲಿ ಕಂಗನಾ ರಣಾವತ್ ವಿವಾದಾತ್ಮಕ ನಟಿ ಅಂತಲೇ ಹೆಸರುವಾಸಿ. ಕಂಗನಾ ರಣಾವತ್ ಮಾಡಿಕೊಂಡಿರುವ ವಿವಾದಗಳು ಒಂದೆರಡಲ್ಲ. ಟ್ವಿಟ್ಟರ್‌ನಲ್ಲಿ ಹಿಂಸಾಚಾರಕ್ಕೆ ಪುಷ್ಟಿ ನೀಡುವ ಹೇಳಿಕೆ ನೀಡಿದ್ದ ಕಂಗನಾ ರಣಾವತ್ ಟ್ವಿಟ್ಟರ್‌ನಿಂದಲೇ ಶಾಶ್ವತವಾಗಿ ಬ್ಯಾನ್ ಆಗಿದ್ದರು. ಇಷ್ಟಕ್ಕೆ ಕಂಗನಾ ರಣಾವತ್ ಸುಮ್ಮನಾಗಲಿಲ್ಲ. ‘’1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ. ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ’’ ಎಂದು ಕಂಗನಾ ಹೇಳಿದ್ದರು. ಕಂಗನಾ ರಣಾವತ್ ಅವರ ಈ ಮಾತು ಅನೇಕರನ್ನ ಕೆರಳಿಸಿತ್ತು.
1947ರಲ್ಲಿ ಸಿಕ್ಕಿದ್ದು ಭಿಕ್ಷೆ: ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ ವಿರುದ್ಧ ಆಕ್ರೋಶ!
ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್’ ಸಿನಿಮಾದ ಶೀರ್ಷಿಕೆಯನ್ನು ಬದಲಾವಣೆ ಮಾಡುವಂತೆ ಮಹಾರಾಷ್ಟ್ರದ ಕರ್ಣಿ ಸೇನಾ, ಭಾರತ ಕ್ಷತ್ರಿಯ ಮಹಾಸಭಾ ಆಗ್ರಹಿಸಿತ್ತು. ಆದರೆ, ಚಿತ್ರತಂಡ ಅದನ್ನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಪ್ರತಿಭಟನೆ ಮಾಡಿ, ಅಕ್ಷಯ್ ಕುಮಾರ್ ಅವರ ಪ್ರತಿಕೃತಿಯನ್ನು ದಹಿಸಲಾಗಿತ್ತು.
ವಿವಾದದಲ್ಲಿ ಸಿಲುಕಿದ ಅಕ್ಷಯ್ ಕುಮಾರ್! ನಟನ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು!
ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಬಂದಿದೆ ಎಂಬ ಕಾರಣ ಕೊಟ್ಟು, ಬ್ಯಾಂಕ್ ಮ್ಯಾನೇಜರ್ ಎಂದು ಸುಳ್ಳು ಹೇಳಿಕೊಂಡು ಬಂದಿದ್ದ ಅರುಣಾ ಕುಮಾರಿ ಎಂಬ ಮಹಿಳೆಯ ಪ್ರಕರಣ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತು. ಇದೇ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಹೆಸರೂ ಕೇಳಿಬಂದಿತ್ತು. ಬಳಿಕ ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ಒಂದಾದರು ಎನ್ನಲಾಗಿತ್ತು.
Fake Loan Case: ಪ್ರಕರಣದ ಅಸಲಿ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದರ್ಶನ್!
ಇಂದ್ರಜಿತ್ ಲಂಕೇಶ್

ಅರುಣಾ ಕುಮಾರಿಯ ಪ್ರಕರಣ ಸದ್ದು ಮಾಡುತ್ತಿರುವಾಗಲೇ ದರ್ಶನ್ ಅಂಡ್ ಫ್ರೆಂಡ್ಸ್ ವಿರುದ್ಧ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಂಬ್ ಸಿಡಿಸಿದರು. ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದರು. ಈ ವಿವಾದ ಕೂಡ ಸಾಕಷ್ಟು ತಿರುವುಗಳನ್ನು ಪಡೆದುಕೊಂಡಿತು.
ಬಾಂಬ್ ಸಿಡಿಸಿದ ಇಂದ್ರಜಿತ್ ಲಂಕೇಶ್: ದರ್ಶನ್ & ಫ್ರೆಂಡ್ಸ್ ವಿರುದ್ಧ ಗಂಭೀರ ಆರೋಪ!
ರಾಜ್ ಕುಂದ್ರಾ

ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧಿತರಾದರು. ಈ ಪ್ರಕರಣದಿಂದ ಶಿಲ್ಪಾ ಶೆಟ್ಟಿ ಅಂಡ್ ಫ್ಯಾಮಿಲಿ ತೀವ್ರ ಮುಜುಗರಕ್ಕೀಡಾದರು. ಜುಲೈ 19 ರಂದು ರಾಜ್ ಕುಂದ್ರಾ ಅರೆಸ್ಟ್ ಆಗಿದ್ದರು. ಎರಡು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ರಾಜ್ ಕುಂದ್ರಾ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದರು.
ಆರ್ಯನ್ ಖಾನ್

ಐಷಾರಾಮಿ ಹಡಗಿನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅರೆಸ್ಟ್ ಆದರು. ಅಕ್ಟೋಬರ್ 2 ರಂದು ಆರ್ಯನ್ ಖಾನ್ ಸೇರಿದಂತೆ 8ಕ್ಕೂ ಅಧಿಕ ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದರು. 26 ದಿನಗಳ ಕಾಲ ಜೈಲಿನಲ್ಲಿದ್ದ ಆರ್ಯನ್ ಖಾನ್ ಅಕ್ಟೋಬರ್ 30 ರಂದು ಜಾಮೀನಿನ ಮೇಲೆ ಬಿಡುಗಡೆಯಾದರು.
ಆರ್ಯನ್ ಖಾನ್ ಜಾಮೀನು ಅರ್ಜಿ ವಜಾ; ಆರ್ಥರ್ ಜೈಲಿಗೆ ಶಾರುಖ್ ಪುತ್ರ ಶಿಫ್ಟ್!
ಕೋಟಿಗೊಬ್ಬ-3 ರಿಲೀಸ್ ಕಿರಿಕ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಅಕ್ಟೋಬರ್ 14 ರಂದು ‘ಕೋಟಿಗೊಬ್ಬ-3’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ‘ಕೋಟಿಗೊಬ್ಬ-3’ ಸಿನಿಮಾದ ಶೋಗಳು ಅಕ್ಟೋಬರ್ 14 ರಂದು ರದ್ದಾದವು. ‘ಕೋಟಿಗೊಬ್ಬ-3’ ಸಿನಿಮಾ ಬಿಡುಗಡೆಗೆ ಕೆಲವರು ಅಡ್ಡಗಾಲು ಹಾಕಿದ್ದರು. ಕೆಲ ವಿತರಕರ ವಿರುದ್ಧ ಸೂರಪ್ಪ ಬಾಬು ಸಿಡಿದೆದ್ದರು. ವಿತರಕರನ್ನು ಬದಲಾವಣೆ ಮಾಡಿ ‘ಕೋಟಿಗೊಬ್ಬ-3’ ಚಿತ್ರವನ್ನು ಅಕ್ಟೋಬರ್ 15 ರಂದು ಬಿಡುಗಡೆ ಮಾಡಲಾಯಿತು.
Kotigobba 3 ವಿವಾದದ ಬಗ್ಗೆ ಹೊಸ ಬಾಂಬ್: ‘ಆಡಿಯೋ ಕ್ಲಿಪ್ಸ್ ಇದೆ’ ಎಂದ ಕಿಚ್ಚ ಸುದೀಪ್
ಹಂಸಲೇಖ

ನಾದಬ್ರಹ್ಮ ಹಂಸಲೇಖ ಕೂಡ ಈ ವರ್ಷ ವಿವಾದಕ್ಕೆ ಸಿಲುಕಿದ್ದರು. ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದ ಹಂಸಲೇಖ, ಅಸ್ಪೃಶ್ಯತೆ ಹಾಗೂ ದಲಿತರ ಕುರಿತಾಗಿ ಮಾತನಾಡಿದ್ದರು. ಅದರ ಜೊತೆಗೆ ಪೇಜಾವರ ಶ್ರೀಗಳ ಹೆಸರನ್ನೂ ಪ್ರಸ್ತಾಪಿಸಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು. ಪರಿಣಾಮ ಹಂಸಲೇಖ ಪರ-ವಿರೋಧ ಚರ್ಚೆ ಪ್ರಾರಂಭವಾಯಿತು. ಬಳಿಕ ಹಂಸಲೇಖ ಕ್ಷಮೆ ಕೇಳಿದ್ದರು.
ಪೇಜಾವರ ಶ್ರೀಗಳ ಬಗ್ಗೆ ‘ನಾದಬ್ರಹ್ಮ’ ಹಂಸಲೇಖ ಹೇಳಿಕೆ; ವಿಡಿಯೋ ವೈರಲ್!
ಏಕ್ ಲವ್ ಯಾ

ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ತಂಡ ಕೂಡ ವಿವಾದಕ್ಕೆ ಸಿಲುಕಿಕೊಂಡಿತು. ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್’ ಎಂಬ ಹಾಡಿನ ರಿಲೀಸ್ ವೇಳೆ ಪುನೀತ್ ರಾಜ್‌ಕುಮಾರ್ ಫೋಟೋ ಮುಂದೆ ‘ಏಕ್ ಲವ್ ಯಾ’ ತಂಡ ಶಾಂಪೇನ್ ಬಾಟಲ್ ಓಪನ್ ಮಾಡಿದ್ದು ಹಲವರ ಕೆಂಗಣ್ಣಿಗೆ ಕಾರಣವಾಯಿತು. ಬಳಿಕ ನಟಿ ರಚಿತಾ ರಾಮ್, ರಕ್ಷಿತಾ ಪ್ರೇಮ್ ಬಹಿರಂಗವಾಗಿ ಕ್ಷಮೆ ಕೇಳಿದ್ದರು.
ಪುನೀತ್ ಫೋಟೋ ಮುಂದೆ ಶಾಂಪೇನ್ ಓಪನ್ ಮಾಡಿದ ‘ಏಕ್ ಲವ್ ಯಾ’ ತಂಡ; ರಚಿತಾ & ರಕ್ಷಿತಾ ಕ್ಷಮೆ!