Source : Online Desk
ಮ್ಯಾಡ್ರಿಡ್: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಇತ್ತೀಚಿಗೆ ನಡೆದ ಪ್ರದರ್ಶನ ನಂತರ ಸ್ಪೇನ್ ಗೆ ಹಿಂದಿರುಗಿದ ಸ್ಪ್ಯಾನಿಷ್ ಟಾಪ್ ಟೆನಿಸ್ ಆಟಗಾರ ರಾಫೆಲ್ ನಡಾಲ್ ಅವರಿಗೆ ಕೋವಿಡ್-19 ದೃಢಪಟ್ಟಿದೆ.
ಅಹಿತಕರ ಕ್ಷಣಗಳನ್ನು ಅನುಭವಿಸುತ್ತಿರುವ ಬಗ್ಗೆ ಹೇಳಿಕೊಂಡಿರುವ ನಡಾಲ್, ಸ್ಪೇನ್ ಗೆ ಬಂದಾಗ ನಡೆಸಿದ ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ಇರುವುದು ಖಚಿತವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Hola a todos. Quería anunciaros que en mi regreso a casa tras disputar el torneo de Abu Dhabi, he dado positivo por COVID en la prueba PCR que se me ha realizado al llegar a España.
— Rafa Nadal (@RafaelNadal) December 20, 2021
” ನಾನು ಕೆಲವು ಅಹಿತಕರ ಕ್ಷಣಗಳನ್ನು ಅನುಭವಿಸುತ್ತಿದ್ದೇನೆ ಆದರೂ ಸ್ವಲ್ಪಮಟ್ಟಿಗೆ ಸುಧಾರಿಸಿದ್ದೇನೆ ಎಂದು ಭಾವಿಸುತ್ತೇನೆ. ಈಗ ಮನೆಗೆ ಮರಳಿದ್ದು, ತಮ್ಮೊಂದಿಗೆ ಸಂಪರ್ಕದಲ್ಲಿರುವವರು ಪರೀಕ್ಷೆ ಒಳಪಡುವಂತೆ ವಿನಂತಿಸಿದ್ದಾರೆ.
20 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತರಾದ ನಡಾಲ್ ಯುಎಇಯಲ್ಲಿ ಇತ್ತೀಚಿಗೆ ನಡೆದ ಮುಬದಲಾ ವಿಶ್ವ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಧೀರ್ಘಕಾಲದ ಪಾದದ ಗಾಯದ ನಂತರ ಟೆನಿಸ್ ಅಂಕಣಕ್ಕೆ ಮರಳಿದ್ದರು. ಡಿಸೆಂಬರ್ 18 ರಂದು ಆಡಿದ ರಿಟರ್ನ್ ಪಂದ್ಯದಲ್ಲಿ ಮಾಜಿ ವಿಶ್ವ ನಂಬರ್ 1 ಆಟಗಾರ ಆ್ಯಂಡಿ ಮರ್ರೆ ವಿರುದ್ಧ 6-3, 7-5 ಅಂತರದಿಂದ ಸೋತಿದ್ದರು.