ಬೆಂಗಳೂರು: ಹಲವಾರು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ‘ಎದೆತುಂಬಿ ಹಾಡುವೆನು’ ಕಲರ್ಸ್ ಕನ್ನಡದಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಪ್ರಸಾರವಾಗಿದ್ದು ಗಾಯಕ ಚಿನ್ಮಯ್ ಜೋಶಿ ಈ ಕಾರ್ಯಕ್ರಮದ ವಿನ್ನರ್ ಆಗಿದ್ದಾರೆ.
ಅಂತಿಮ ಹಂತ ತಲುಪಿದ 6 ಸ್ಪರ್ಧಿಗಳ ಪೈಕಿ ನಾಲ್ವರು ಗಾಯಕರು ಫೈನಲ್ ಪ್ರವೇಶ ಪಡೆದರು. ಕಷ್ಟದ ಹಾಡುಗಳನ್ನು ಹಾಡಿದ ಈ ಸ್ಪರ್ಧಿಗಳ ಪೈಕಿ ಚಿನ್ಮಯ್ ಹಾಗೂ ಸಂದೇಶ್ ಮಾತ್ರ ಉಳಿದುಕೊಂಡರು.
ಅಂತಿಮವಾಗಿ ಚಿನ್ಮಯ್ ಜೋಶಿ 2021ರ ಎದೆ ತುಂಬಿ ಹಾಡುವೇನು ಸರಣಿಯ ವಿನ್ನರ್ ಆದರು. ಅವರು ₹ 10 ಲಕ್ಷ ರೂಪಾಯಿ ನಗದು ಬಹುಮಾನ ಪಡೆದರು. ಎರಡನೇ ಸ್ಥಾನ ಪಡೆದ ಸಂದೇಶ್ ಅವರಿಗೆ ₹ 5 ಲಕ್ಷ ರೂಪಾಯಿ ಬಹುಮಾನ ದೊರೆಯಿತು.
ಈಟಿವಿಯಲ್ಲಿ ಅಂದು ಎಸ್.ಪಿ. ಬಾಲಸುಬ್ರಮಣ್ಯಂ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ದಿವಂಗತ ಎಸ್.ಪಿ.ಬಿ. ಅವರ ಜಾಗದಲ್ಲಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ವಿಶೇಷ ತೀರ್ಪುಗಾರರಾಗಿ ಎಸ್‌ಪಿಬಿ ಅವರ ಪುತ್ರ ಎಸ್.ಪಿ. ಚರಣ್ ಇದ್ದರು.
ಓದಿ: ಮೆಹಂದಿ ಫೋಟೊ ಹಂಚಿಕೊಂಡ ನವವಧು ಕತ್ರೀನಾ ಕೈಫ್; ವಿಕ್ಕಿ ಹೆಸರು ಹುಡುಕಿದ ಅಭಿಮಾನಿ!
ಇಡೀ ಸರಣಿಯಲ್ಲಿ ಗಾಯಕ ಸೂರ್ಯಕಾಂತ್ ಕೂಡ ಗಮನ ಸೆಳೆದಿದ್ದರು. ಇವರು ಅಂತಿಮ ಹಂತಕ್ಕೆ ಪ್ರವೇಶ ಪಡೆದಿದ್ದರು.
ಓದಿ: ’83’ ಸಿನಿಮಾ ಪ್ರಚಾರಕ್ಕೆ ಮತ್ಸ್ಯ ಕನ್ಯೆಯಾಗಿ ಆಗಮಿಸಿದ ದೀಪಿಕಾ ಪಡುಕೋಣೆ