ಹೈಲೈಟ್ಸ್:
- ಅಲ್ಲು ಅರ್ಜುನ್ ನಟನೆಯ ಚಿತ್ರ ‘ಪುಷ್ಪ- ದಿ ರೈಸ್’
- ‘ಪುಷ್ಪ’ ಸಿನಿಮಾದ ಮೂರು ದಿನಗಳ ಕಲೆಕ್ಷನ್ ಎಷ್ಟು?
- 173 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ‘ಪುಷ್ಪ’ ಸಿನಿಮಾ
ಹೌದು.. ಕಲೆಕ್ಷನ್ ಲೆಕ್ಕಾಚಾರದಲ್ಲಿ ‘ಪುಷ್ಪ’ ಸಿನಿಮಾದ ನಾಗಲೋಟ ಮುಂದುವರೆದಿದೆ. ಮಿಶ್ರ ಪ್ರತಿಕ್ರಿಯೆ ಮಧ್ಯೆಯೂ ‘ಪುಷ್ಪ’ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ ‘ಪುಷ್ಪ’ ಸಿನಿಮಾ ವಿಶ್ವದಾದ್ಯಂತ 173 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅಂದ್ರೆ ನೀವು ನಂಬಲೇಬೇಕು..!
ಆಲ್ ಟೈಮ್ ರೆಕಾರ್ಡ್ ಸೃಷ್ಟಿಸಿದ ಅಲ್ಲು ಅರ್ಜುನ್: ಮೊದಲ ದಿನ 71 ಕೋಟಿ ಬಾಚಿದ ‘ಪುಷ್ಪ’!
ಅಧಿಕೃತ ಮಾಹಿತಿ ನೀಡಿದ ನಿರ್ಮಾಣ ಸಂಸ್ಥೆ
‘ಪುಷ್ಪ’ ಸಿನಿಮಾದ ಮೂರು ದಿನಗಳ ಕಲೆಕ್ಷನ್ ಬಗ್ಗೆ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ‘’ಮೂರು ದಿನಗಳಲ್ಲಿ ‘ಪುಷ್ಪ’ ಸಿನಿಮಾ 173 ಕೋಟಿ ರೂಪಾಯಿಯನ್ನು ಕಲೆಕ್ಟ್ ಮಾಡಿದೆ (Worldwide Gross Collection)’’ ಎಂದು ಮೈತ್ರಿ ಮೂವಿ ಮೇಕರ್ಸ್ ಟ್ವೀಟ್ ಮಾಡಿದೆ. ಜೊತೆಗೆ 2021ರ ಭಾರತದ ಬಿಗ್ಗೆಸ್ಟ್ ಗ್ರಾಸರ್ ಸಿನಿಮಾ ‘ಪುಷ್ಪ’ ಎಂದೂ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ತಿಳಿಸಿದೆ.
Pushpa First Day Collection: ನೆಗೆಟಿವ್ ಟಾಕ್ ಮಧ್ಯೆಯೂ ತಗ್ಗದ ‘ಪುಷ್ಪ’ ಕಲೆಕ್ಷನ್!
ಮೊದಲ ದಿನದ ಕಲೆಕ್ಷನ್ ಎಷ್ಟು?
‘ಮೈತ್ರಿ ಮೂವಿ ಮೇಕರ್ಸ್’ ಸಂಸ್ಥೆ ಟ್ವೀಟ್ ಮಾಡಿರುವ ಪ್ರಕಾರ, ‘ಪುಷ್ಪ- ದಿ ರೈಸ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ 71 ಕೋಟಿ ರೂಪಾಯಿ (Day 1 Worldwide Gross Collection) ಕಲೆಕ್ಷನ್ ಮಾಡಿದೆ.
ಮೊದಲ ದಿನವೇ ನಿಜಾಮ್ ಪ್ರದೇಶದಲ್ಲಿ 11.44 ಕೋಟಿ ರೂಪಾಯಿ ಶೇರ್ ಪಡೆದ ‘ಪುಷ್ಪ – ದಿ ರೈಸ್’ ಸಿನಿಮಾ ಆಲ್ ಟೈಮ್ ರೆಕಾರ್ಡ್ ಸೃಷ್ಟಿಸಿದೆ. ಇನ್ನೂ, ಅಲ್ಲು ಅರ್ಜುನ್ ಕೆರಿಯರ್‌ನಲ್ಲೇ ಬಿಗ್ ಓಪನ್ನಿಂಗ್ ಪಡೆದ ಚಿತ್ರ ‘ಪುಷ್ಪ- ದಿ ರೈಸ್’ ಎಂದೆನಿಸಿಕೊಂಡಿದೆ.
‘ಪುಷ್ಪ’
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಧನಂಜಯ, ಸುನೀಲ್, ಅಜಯ್, ರಾವ್ ರಮೇಶ್, ಸಮಂತಾ ಮುಂತಾದವರು ನಟಿಸಿರುವ ಸಿನಿಮಾ ‘ಪುಷ್ಪ – ದಿ ರೈಸ್’. ‘ಆರ್ಯ’, ‘ಆರ್ಯ-2’ ಚಿತ್ರಗಳ ಬಳಿಕ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಒಂದಾಗಿರುವುದು ಈ ಚಿತ್ರದಲ್ಲೇ. ಇದೇ ಕಾರಣಕ್ಕೆ ‘ಪುಷ್ಪ- ರಿ ರೈಸ್’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಹೈ ಎಕ್ಸ್ ಪೆಕ್ಟೇಷನ್ಸ್ ಇತ್ತು.