Karnataka news paper

ಮೊಸರು ಕೊಳ್ಳಲು ಮಾರ್ಗ ಮಧ್ಯೆ ರೈಲು ನಿಲ್ಲಿಸಿದ ಚಾಲಕ ಮತ್ತು ಸಹಾಯಕ ಅಮಾನತು


Source : The New Indian Express

ಕರಾಚಿ: ಮೊಸರು ಕೊಳ್ಳಲು ಚಲಿಸುತ್ತಿದ್ದ ರೈಲನ್ನು ಮಾರ್ಗ ಮಧ್ಯೆ ನಿಲ್ಲಿಸಿದ್ದ ಚಾಲಕ ಮತ್ತು ಆತನ ಸಹಾಯಕನನ್ನು ಅಮಾನತುಗೊಳಿಸಿರುವ ವಿಚಿತ್ರ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ರೈಲು ಲಾಹೋರಿಗೆ ಪ್ರಯಾಣಿಸುತ್ತಿತ್ತು.

ಇದನ್ನೂ ಓದಿ: ಪಾಕ್ ಮೂಲಕ ಅಫ್ಘಾನಿಸ್ತಾನಕ್ಕೆ ಗೋದಿ ಸಾಗಿಸಲು ಭಾರತಕ್ಕೆ ಇಮ್ರಾನ್ ಖಾನ್ ಗ್ರೀನ್ ಸಿಗ್ನಲ್ 

ರೈಲು ಚಾಲಕ ರೈಲನ್ನು ಮಾರ್ಗಮಧ್ಯ ನಿಲ್ಲಿಸಿ ಹಳಿಯ ಬಳಿಯಿದ್ದ ಅಂಗಡಿಯೊಂದರಲ್ಲಿ ಮೊಸರು ಕೊಂಡುಕೊಂಡು ಮತ್ತೆ ರೈಲು ಹತ್ತುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. 

ಇದನ್ನೂ ಓದಿ: ಪಾಕಿಸ್ತಾನಕ್ಕೆ 22,572 ಕೋಟಿ ರೂ. ಸಾಲ ನೀಡಿದ ಸೌದಿ ಅರೇಬಿಯಾ: ಪಾಕ್ ಆರ್ಥಿಕ ಸುಸ್ಥಿರತೆಗೆ ಸಹಾಯ

ಈ ವೈರಲ್ ವಿಡಿಯೊ ಪಾಕ್ ರೈಲ್ವೇ ಸಚಿವರ ಗಮನಕ್ಕೆ ಬಂದಿತ್ತು. ತಕ್ಷಣವೇ ಘಟನೆಯಲ್ಲಿ ಕಂಡುಬಂದ ರೈಲು ಚಾಲಕ ಮತ್ತು ಆತನ ಸಹಾಯಕನನ್ನು ಅಮಾನತುಗೊಳಿಸಲು ಆದೇಶಿಸಿದರು.

ಇದನ್ನೂ ಓದಿ: ಚೀನಾ ಉದ್ದಿಮೆಗಳಿಗೆ ಪಾಕಿಸ್ತಾನ ಸರ್ಕಾರದ ಪ್ರೋತ್ಸಾಹ ನಿರಂತರ: ಇಮ್ರಾನ್ ಖಾನ್ ಭರವಸೆ

ಇತ್ತೀಚಿಗಷ್ಟೆ ರೈಲು ಚಾಲಕರು ಪ್ರಯಾಣದ ಸಂದರ್ಭದಲ್ಲಿ ಮೊಬೈಲ್ ಬಳಸುವ ಹಾಗಿಲ್ಲ ಎನ್ನುವ ಕಾನೂನು ಜಾರಿಗೊಳಿಸಲಾಗಿತ್ತು. ರೈಲು ಅಪಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತ್ತು. 

ಇದನ್ನೂ ಓದಿ: ಪಾಕಿಸ್ತಾನದಲ್ಲಿ 11 ವರ್ಷದ ಹಿಂದೂ ಬಾಲಕನ ಮೇಲೆ ಅತ್ಯಾಚಾರ, ಕತ್ತು ಕೊಯ್ದು ಕೊಲೆ: ಇಬ್ಬರ ಬಂಧನ!



Read more

Leave a Reply

Your email address will not be published. Required fields are marked *