
ಹೌದು, ಟೆಲಿಕಾಂ ವಲಯದಲ್ಲಿ ಡೈಲಿ 2GB ಡೇಟಾ ನೀಡುವ ಪ್ರಿಪೇಯ್ಡ್ ಪ್ಲಾನ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಆನ್‌ಲೈನ್ ತರಗತಿಗಳು, ವರ್ಕ್ ಫ್ರಂ ಹೋಮ್ ಕೆಲಸ ಮಾಡುವವರಿಗೆ ಹೆಚ್ಚಿನ ಡೇಟಾ ಅವಶ್ಯಕತೆಯಿದೆ. ಆದ್ದರಿಂದ, ಪ್ರತಿನಿತ್ಯ 2GB ಡೇಟಾ ನೀಡುವ ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್
ಏರ್‌ಟೆಲ್ 839ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಕೊಡುಗೆ ಸಿಗಲಿದೆ.
ಏರ್‌ಟೆಲ್ 549ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಕೊಡುಗೆ ಸಿಗಲಿದೆ.

ಜಿಯೋ
ಜಿಯೋ 299ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್‌ಗಳಾದ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್‌ನಂತಹ ಸೇವೆಗಳು ಸಹ ಲಭ್ಯ.
ಜಿಯೋ 719ರೂ. ಪ್ರೀಪೇಯ್ಡ್ ಪ್ಲಾನ್
ರಿಲಾಯನ್ಸ್ ಜಿಯೋ 719ರೂ. ಪ್ರೀಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಈ ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಹೊಂದಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿದ್ದು, ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ 3000 ಉಚಿತ ನಿಮಿಷಗಳ ಮಿತಿ ಹೊಂದಿದೆ.

ವಿ ಟೆಲಿಕಾಂ
ವಿ ಟೆಲಿಕಾಂ 539ರೂ. ಪ್ರೀಪೇಯ್ಡ್‌ಪ್ಲಾನ್
ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.
ವಿ ಟೆಲಿಕಾಂ 839ರೂ.ಪ್ರಿಪೇಯ್ಡ್ ಪ್ಲ್ಯಾನ್
ವಿ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲ್ಯಾನ್ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.