Personal Finance
ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹಲವಾರು ಬ್ಯಾಂಕ್‌ಗಳಲ್ಲಿ ಕೆಲವು ಬದಲಾವಣೆ ಆಗಲಿದೆ. ಈಗಾಗಲೇ ಈ ಬಗ್ಗೆ ಹಲವಾರು ಬ್ಯಾಂಕ್‌ಗಳು ಹೇಳಿಕೆಯನ್ನು ಹೊರಡಿಸಿದೆ. ಈ ನಡುವೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಬ್ಯಾಂಕ್ ಕೂಡಾ ತನ್ನ ಗ್ರಾಹಕರಿಗೆ ಪ್ರಮುಖ ಮಾಹಿತಿಯನ್ನು ನೀಡಿದೆ.
ಜನವರಿ 1, 2022 ರಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆದಾರರು ಹಣವನ್ನು ಠೇವಣಿ ಮಾಡಲು ಮತ್ತು ನಗದು ಹಿಂಪಡೆಯಲು ನಿಗದಿತ ಮಿತಿಯನ್ನು ಮೀರಿದರೆ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಮೂರು ರೀತಿಯ ಪ್ರಯೋಜನ ಗ್ರಾಹಕರಿಗೆ ದೊರೆಯಲಿದೆ. ಈ ಬ್ಯಾಂಕ್‌ನಲ್ಲಿ ಮೂರು ರೀತಿಯ ಉಳಿತಾಯ ಖಾತೆಗಳು ಇದೆ. ಎಲ್ಲಾ 3 ಐಪಿಪಿಬಿ ಉಳಿತಾಯ ಖಾತೆಯಲ್ಲಿ ಹಲವು ಸಾಮಾನ್ಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ.
ಗಮನಿಸಿ: ಡಿಸೆಂಬರ್‌ನಲ್ಲಿ ಇನ್ನೂ 6 ದಿನ ಬ್ಯಾಂಕ್ ಬಂದ್!
ಆರ್‌ಬಿಐ ನಿಯಮಗಳ ಪ್ರಕಾರ ನೀವು ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಹೊಂದುವಂತಿಲ್ಲ. ಆದರೆ ನೀವು 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ವರ್ಗಾವಣೆ ಮಾಡುವ ಪೋಸ್ಟ್ ಆಫೀಸ್ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ. ಹಾಗಾದರೆ ಏನಿದು ಬದಲಾವಣೆ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ…

ಐಪಿಪಿಬಿ ಮೂಲ ಉಳಿತಾಯ ಖಾತೆ
ಮೂಲ ಉಳಿತಾಯ ಖಾತೆಯಲ್ಲಿ, ಯಾವುದೇ ಮೊತ್ತದವರೆಗಿನ ನಗದು ಠೇವಣಿ ಉಚಿತವಾಗಿರುತ್ತದೆ. ಪ್ರತಿ ತಿಂಗಳಿಗೆ 4 ವಹಿವಾಟುಗಳವರೆಗೆ ನಗದು ವಿತ್‌ಡ್ರಾ ಉಚಿತವಾಗಿರುತ್ತದೆ. ಅದರ ನಂತರ, ಪ್ರತಿ ವಹಿವಾಟಿಗೆ ಕನಿಷ್ಠ 25 ರೂಪಾಯಿ ಅಂದರೆ ಶೇಕಡ 0.50 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ.
ಐಪಿಪಿಬಿ ಉಳಿತಾಯ ಮತ್ತು ಕರೆಂಟ್ ಅಕೌಂಟ್
ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ, ನಗದು ಠೇವಣಿಗಳು ತಿಂಗಳಿಗೆ 10,000 ರೂಪಾಯಿವರೆಗೆ ಉಚಿತವಾಗಿರುತ್ತದೆ. ಅದರ ನಂತರ, ಪ್ರತಿ ವಹಿವಾಟಿಗೆ ಕನಿಷ್ಠ 25 ರೂಪಾಯಿ ಅಥವಾ ಒಟ್ಟು ಮೌಲ್ಯದ ಶೇಕಡ 0.50 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ, ನಗದು ವಿತ್‌ಡ್ರಾ ಮಾಡುವುದು ತಿಂಗಳಿಗೆ 25,000 ರೂಪಾಯಿವರೆಗೆ ಉಚಿತವಾಗಿರುತ್ತದೆ. ಒಂದು ವೇಳೆ ತಿಂಗಳಿಗೆ 25,000 ರೂಪಾಯಿಗಿಂತ ಅಧಿಕ ಹಣವನ್ನು ವಿತ್‌ಡ್ರಾ ಮಾಡುವುದಾದರೆ ಪ್ರತಿ ವಹಿವಾಟಿಗೆ ಕನಿಷ್ಠ 25 ರೂಪಾಯಿ ಅಥವಾ ಒಟ್ಟು ಮೌಲ್ಯದ ಶೇಕಡ 0.50 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ.
ಐಸಿಐಸಿಐ ಬ್ಯಾಂಕ್‌ಗೆ 30 ಲಕ್ಷ, ಪಿಎನ್‌ಬಿಗೆ 1.8 ಕೋಟಿ ದಂಡ ವಿಧಿಸಿದ ಆರ್‌ಬಿಐ
ಈ ಬಗ್ಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿದೆ. “ನಗದು ಠೇವಣಿ ಮತ್ತು ನಗದು ಹಿಂತೆಗೆದುಕೊಳ್ಳುವ ವಹಿವಾಟುಗಳ ಶುಲ್ಕಗಳು ಜನವರಿ 01, 2022 ರಿಂದ ಜಾರಿಗೆ ಬರುತ್ತವೆ. ಈ ಬೆಲೆಗಳು ಜಿಎಸ್‌ಟಿ ಹಾಗೂ ಸಿಜಿಎಸ್‌ಟಿ ಅನ್ನು ಹೊರತುಪಡಿಸಿ, ಅನ್ವಯಿಸುವ ದರಗಳಲ್ಲಿ ವಿಧಿಸಲಾಗುವುದು,” ಎಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿದೆ. ಇದಕ್ಕೂ ಮೊದಲು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತನ್ನ ಡೋರ್‌ಸ್ಟೆಪ್ ಬ್ಯಾಂಕಿಂಗ್ ಶುಲ್ಕಗಳನ್ನು 01 ಆಗಸ್ಟ್ 2021 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಿದೆ. ಪ್ರಸ್ತುತ ಗ್ರಾಹಕರ ಪ್ರತಿ ಡೋರ್‌ಸ್ಟೆಪ್ ಬ್ಯಾಂಕಿಂಗ್ ಶುಲ್ಕವು 20 ರೂಪಾಯಿ ಆಗಿದೆ.
ಹೊಸ ವರ್ಷದಲ್ಲಿ ಎಟಿಎಂ ವಿತ್‌ಡ್ರಾ ಶುಲ್ಕ ದುಬಾರಿ
ಆರ್‌ಬಿಐನ ಹೊಸ ಮಾರ್ಗಸೂಚಿ ಪ್ರಕಾರ ಹೊಸ ವರ್ಷದ ಆರಂಭದಿಂದ ನೀವು ಆ ಎಟಿಎಂನಿಂದ ವಿತ್‌ಡ್ರಾ ಮಾಡಲು ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಎಟಿಎಂ ನಲ್ಲಿ ನಾವು ಹಣವನ್ನು ವಿತ್‌ಡ್ರಾ ಮಾಡುವುದಕ್ಕೆ ಮಿತಿ ಇದೆ. ನಾವು ಆ ಮಿತಿಯನ್ನು ಮೀರಿ ಹೆಚ್ಚು ಬಾರಿ ವಿತ್ ಡ್ರಾ ಮಾಡಿದರೆ ಅದಕ್ಕೆ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಈ ಬಗ್ಗೆ ಆರ್‌ಬಿಐ ಈಗಾಗಲೇ ಅಧಿಕೃತ ಹೇಳಿಕೆಯನ್ನು ನೀಡಿದೆ. ಈ ಬಗ್ಗೆ ಆರ್‌ಬಿಐ ಸುತ್ತೋಲೆಯನ್ನು ಹೊರಡಿಸಿದೆ. “ಗ್ರಾಹಕರು ತಮ್ಮದೇ ಆದ ಬ್ಯಾಂಕ್ ಎಟಿಎಂನಿಂ ಐದು ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕುಗಳ ಎಟಿಎಂನಲ್ಲಿ ವಹಿವಾಟು ಮಾಡುವ ಗ್ರಾಹಕರು, ಮೆಟ್ರೋ ನಗರದಲ್ಲಿ ಮೂರು ಬಾರಿ, ಮೆಟ್ರೋಯೇತರ ನಗರದಲ್ಲಿ ಐದು ಬಾರಿ ವಹಿವಾಟು ನಡೆಸಬಹುದು. ಈ ಉಚಿತ ಸೇವಾ ಮಿತಿಯನ್ನು ಮೀರಿದರೆ, ಆಗಸ್ಟ್ 14, 2014 ಸುತ್ತೋಲೆಯ ಪ್ರಕಾರ ಗ್ರಾಹಕರು ಹೆಚ್ಚಿಗೆ 20 ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಈಗ ಬ್ಯಾಂಕುಗಳಿಗೆ ಹೆಚ್ಚಿನ ವಿನಿಮಯ ಶುಲ್ಕವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಾಸಿಕ ಮಿತಿಗಿಂತ ಅಧಿಕ ವಹಿವಾಟು ನಡೆಸಿದರೆ, ಶುಲ್ಕವನ್ನು ಅಧಿಕ ಮಾಡಲಾಗಿದೆ. ಇನ್ನು ಮುಂದೆ 21 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕ ಹೆಚ್ಚಳವು ಜನವರಿ 1, 2022 ರಿಂದ ಅನ್ವಯ ಆಗಲಿದೆ,” ಎಂದು ಹೇಳಿದೆ.
English summary
You need to pay for cash deposit above 10,000 in India Post Payments Bank From January 1, 2022
You need to pay for cash deposit above 10,000 in this bank From January 1, 2022.