Karnataka news paper

ಓಮೈಕ್ರಾನ್ ಭೀತಿ: ಕ್ರಿಕೆಟ್ ಪಂದ್ಯಗಳನ್ನು ಮುಂದೂಡಿದ ದಕ್ಷಿಣ ಆಫ್ರಿಕಾ


Source : Online Desk

ಜೋಹಾನ್ಸ್‌ಬರ್ಗ್: ಟೀಂ ಇಂಡಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮುಂಚಿತವಾಗಿ ಕೋವಿಡ್ -19 ಸಾಂಕ್ರಾಮಿಕದ ಇತ್ತೀಚಿನ ಅಲೆಯಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಧೆ ಭಾನುವಾರ ಸ್ಥಳೀಯ ಪಂದ್ಯಾವಳಿಯನ್ನು ಮುಂದೂಡಿದೆ.

2021ಕ್ಕೆ ಒಂದು ಮತ್ತು ಎರಡು ವಿಭಾಗಗಳಾದ್ಯಂತ ದಕ್ಷಿಣ ಆಫ್ರಿಕಾ ಕ್ರಿಕೆಟ್ 4 ದಿನಗಳ ಸರಣಿಯ ಮುಂದೂಡಲ್ಪಟ್ಟ ಪಂದ್ಯಗಳನ್ನು ಮುಂದಿನ ವರ್ಷ ಮರು ನಿಗದಿಪಡಿಸಲಾಗುತ್ತದೆ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ತಿಳಿಸಿದೆ.

ಡಿಸೆಂಬರ್ 16-19(ವಿಭಾಗ ಎರಡು) ಮತ್ತು ಡಿಸೆಂಬರ್ 19-22 (ವಿಭಾಗ ಒಂದು) ನಡುವೆ ನಡೆಯಬೇಕಿದ್ದ ಐದನೇ ಸುತ್ತಿನ ಪಂದ್ಯಗಳನ್ನು ಮುಂದೂಡುವ ನಿರ್ಧಾರವನ್ನು ಸುರಕ್ಷತಾ ಕ್ರಮವಾಗಿ ತೆಗೆದುಕೊಳ್ಳಲಾಗಿದೆ. ಜೈವಿಕ-ಸುರಕ್ಷಿತ ಪರಿಸರದಲ್ಲಿ ಪಂದ್ಯಾವಳಿಗಳು ನಡೆಯಬೇಕಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ನಾಲ್ಕನೇ ಸುತ್ತು ಸೇರಿದಂತೆ ಮುಂದೂಡಲ್ಪಟ್ಟ ಪಂದ್ಯಗಳನ್ನು ಹೊಸ ವರ್ಷದಲ್ಲಿ ಮರು ನಿಗದಿಪಡಿಸಲಾಗುತ್ತದೆ ಸಿಎಸ್ಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಜೊತೆಗೆ ‘ಫುಟ್ ವಾಲಿ’ ಆಡಿ ಎಂಜಾಯ್ ಮಾಡಿದ ಟೀಂ ಇಂಡಿಯಾ ಆಟಗಾರರು: ವಿಡಿಯೋ

ದಕ್ಷಿಣ ಆಫ್ರಿಕಾವು ಹೊಸ ಕೋವಿಡ್ -19 ರೂಪಾಂತರದ ಓಮಿಕ್ರಾನ್‌ ಕಾರಣದಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಪಾಯದ ಹೊರತಾಗಿಯೂ, ಟೀಂ ಇಂಡಿಯಾ ಆಟಗಾರರು ಮೂರು ಪಂದ್ಯಗಳ ಟೆಸ್ಟ್ ಸರಣಿ ಮತ್ತು ನಂತರ ಮೂರು ಏಕದಿನ ಪಂದ್ಯಗಳ ಡಿಸೆಂಬರ್ 16ರಂದು ದಕ್ಷಿಣ ಆಫ್ರಿಕಾಕ್ಕೆ ತಲುಪಿದ್ದಾರೆ. ದ್ವಿಪಕ್ಷೀಯ ಸರಣಿ ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಆರಂಭವಾಗಲಿದೆ.



Read more…