ಹೈಲೈಟ್ಸ್:
- ‘ಲಕ್ಷಣ’ ಧಾರಾವಾಹಿಯಲ್ಲಿ ನಕ್ಷತ್ರಾ ಪಾತ್ರ ಮಾಡುತ್ತಿರುವ ವಿಜಯಲಕ್ಷ್ಮೀ
- ವಿಜಯಲಕ್ಷ್ಮೀ ಪಾತ್ರಕ್ಕೂ, ನಕ್ಷತ್ರಾ ಪಾತ್ರಕ್ಕೂ ಹೊಂದಾಣಿಕೆಯಿದೆಯಂತೆ
- ಕಪ್ಪಗಿರುವುದಕ್ಕೆ ವಿಜಯಲಕ್ಷ್ಮೀ ಅನುಭವಿಸಿದ ನೋವು, ತೊಂದರೆ ಏನು?
‘ಲಕ್ಷಣ’ ಧಾರಾವಾಹಿಯಲ್ಲಿ ನಕ್ಷತ್ರಾ ಪಾತ್ರಕ್ಕೆ ವಿಜಯಲಕ್ಷ್ಮೀ ಎಂಬುವವರು ಬಣ್ಣ ಹಚ್ಚಿದ್ದಾರೆ. ಈ ಸೀರಿಯಲ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಒಟ್ಟಾರೆಯಾಗಿ ಧಾರಾವಾಹಿ ಜರ್ನಿ ಕುರಿತಂತೆ ‘ವಿಜಯ ಕರ್ನಾಟಕ ವೆಬ್’ಗೆ ವಿಜಯಲಕ್ಷ್ಮೀ ನೀಡಿದ ಸಂದರ್ಶನ ಇಲ್ಲಿದೆ.
ವಿಜಯಲಕ್ಷ್ಮೀ ಹೇಳಿದ್ದೇನು?
ಗಣಿತದಲ್ಲಿ ಎಂಎಸ್‌ಸಿ ಮಾಡಿದ್ದೇನೆ. ಕಳೆದ 5 ವರ್ಷಗಳಿಂದ 12-13 ಆಡಿಶನ್ಸ್ ನೀಡಿದ್ದೇನೆ. ಚಾಲೆಂಜಿಂಗ್ ಪಾತ್ರ ಮಾಡುವ ಆಸೆ ಇದ್ದಿದ್ದರಿಂದ ನಾನು ತುಂಬ ಹುಡುಕಾಟದಲ್ಲಿದ್ದೆ. ‘ಲಕ್ಷಣ’ ಧಾರಾವಾಹಿಯಲ್ಲಿ ಜನರಿಗೆ ಹತ್ತಿರವಾಗುವ ಪಾತ್ರ ನಕ್ಷತ್ರಾ. ಕಷ್ಟ ಸುಖ ನೋಡಿಕೊಂಡು ಬಂದಿರುವ ನಕ್ಷತ್ರಾಗೆ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಯಿರುತ್ತದೆ. ಆದರೆ ಬಣ್ಣದ ಕಾರಣಕ್ಕೆ ಅವಳು ಆಂಕರಿಂಗ್ ಕ್ಷೇತ್ರದಿಂದ ರಿಜೆಕ್ಟ್ ಆಗುತ್ತಾಳೆ. ಕೆಲಸ ಮಾಡುತ್ತ ಕುಟುಂಬವನ್ನು ನಡೆಸುವ ನಕ್ಷತ್ರಾಗೆ ಭೂಪತಿ ತುಂಬ ಒಳ್ಳೆಯ ಸ್ನೇಹಿತ.
ಧಾರಾವಾಹಿ ಆರಂಭದಲ್ಲಿ ನಾನು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ಸ್ ನೋಡುತ್ತಿದ್ದೆ. ಆಮೇಲೆ ನೋಡುವುದು ಬಿಟ್ಟೆ. ಬೆಳ್ಳಗಿದ್ದವರನ್ನು ಕರೆದುಕೊಂಡು ಬಂದು ಕಪ್ಪಗೆ ಮಾಡ್ತೀರಾ ಎಂದು ಕಾಮೆಂಟ್ಸ್ ಬರುತ್ತಿತ್ತು. ನನ್ನ ಬಗ್ಗೆ ಗೊತ್ತಿಲ್ಲದೆ ಹೇಗೆ ಕಾಮೆಂಟ್ ಮಾಡ್ತಾರೆ? ನಾನು ಕೂಡ ಕಪ್ಪಗಿದ್ದೇನೆ. ನಕ್ಷತ್ರಾ ಕಪ್ಪಗಿದ್ದಕ್ಕೆ ಏನು ಅನುಭವಿಸಿದ್ದಾಳೋ, ಅದು ನನ್ನ ನಿಜ ಜೀವನದಲ್ಲಿಯೂ ನಡೆದಿದೆ.
‘ಲಕ್ಷಣ’ ಧಾರಾವಾಹಿಯಲ್ಲಿ ಬಡವರು ಕೊಳಕರು, ಕೆಟ್ಟವರು ಅಂತ ತೋರಿಸಿಲ್ಲ: ನಟ ಜಗನ್ ಚಂದ್ರಶೇಖರ್
ಕಪ್ಪಗಿರುವವರಿಗೆ ತೆರೆ ಮುಂದೆ ಕಾಣಿಸಿಕೊಳ್ಳುವ ಅವಕಾಶ ಕಮ್ಮಿ. ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎಂದ್ರೂ ಕಪ್ಪಗಿರುವವರರಿಗೆ ಕಡಿಮೆ ಅವಕಾಶ ಸಿಕ್ಕಿ, ತೆರೆ ಹಿಂದೆ ಉಳಿದುಕೊಳ್ಳುತ್ತಾರೆ. ಜಾಹೀರಾತಿನಲ್ಲಿಯೂ ಕಪ್ಪಗಿರುವವರು ಕಾಣಿಸಿಕೊಳ್ಳಲು ಚಾನ್ಸ್ ಇಲ್ಲ. ಅಲ್ಲಿಯೂ ಕೂಡ ಬೆಳ್ಳಗಿರುವವರನ್ನೇ ಬೆಳ್ಳಗೆ ಮಾಡ್ತಾರೆ ವಿನಃ ಕಪ್ಪಗಿರುವವರನ್ನು ಹಾಕಿಕೊಳ್ಳೋದಿಲ್ಲ.
ಒಂದು ದೃಶ್ಯದ ಹಿಂದೆ ತುಂಬ ಜನರು ಕಷ್ಟಪಡ್ತಿದ್ದಾರೆ. ಪರ್ಫೆಕ್ಷನ್ ಬೇಕಾಗುತ್ತದೆ. ದೊಡ್ಡ ದೊಡ್ಡ ನಟರ ಜೊತೆ ಕೆಲಸ ಮಾಡಬೇಕು ಎಂದಾಗ ನರ್ವಸ್ ಆಗಿತ್ತು. ಜಗನ್ ಅವರು ಕಳೆದ 8-10 ವರ್ಷದಿಂದ ಈ ರಂಗದಲ್ಲಿದ್ದಾರೆ. ಇಂಥವರ ಜೊತೆ ಕೆಲಸ ಮಾಡುತ್ತಿರೋದು ಖುಷಿ ಕೊಟ್ಟಿದೆ. ಟಿವಿಯಲ್ಲಿ ಕಲಾವಿದರನ್ನು ನೋಡುವುದು ಸುಲಭ, ಆದರೆ ಕಲಾವಿದರ ಲೈಫ್ ತುಂಬ ಕಷ್ಟ ಇರತ್ತೆ. ‘ಲಕ್ಷಣ ಧಾರಾವಾಹಿಯಲ್ಲಿ ಅಪ್ಪ ಮನೆಯಿಂದ ಹೊರಹಾಕುವ ದೃಶ್ಯ ಮರೆಯಲಾಗದು. ಆ ದೃಶ್ಯ ನೋಡಿದ ಪ್ರೇಕ್ಷಕರು ಅದೆಲ್ಲ ನಿಜ ಅಂತೆಲ್ಲ ತಿಳಿದು ನನ್ನ ಆರೋಗ್ಯವನ್ನು ಕೂಡ ವಿಚಾರಿಸಿದ್ರು. ಒಂದು ವಾರಗಳ ಕಾಲ ಆ ದೃಶ್ಯ ಶೂಟಿಂಗ್ ನಡೆದಿತ್ತು. ನಿಜಕ್ಕೂ ಪ್ರೇಕ್ಷಕರ ಪ್ರತಿಕ್ರಿಯೆ ಖುಷಿ ಕೊಟ್ಟಿದೆ’
Lakshana Serial: ಏನು.. ಅಪಘಾತದಲ್ಲಿ ನಕ್ಷತ್ರ ತೀರಿಕೊಂಡ್ಲಾ?
“ಜನರು ನಕ್ಷತ್ರಾ ಆಗಿ ಇಷ್ಟೊಂದು ಪ್ರೀತಿ ಕೊಡುತ್ತಾರೆ, ಒಪ್ಪಿಕೊಳ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಹಿಂದೆ ಊರಿನಲ್ಲಿದ್ದಾಗ ಯಾರೂ ನನ್ನ ಮಾತನಾಡಿಸುತ್ತಿರಲಿಲ್ಲ. ಲಕ್ಷಣ ಧಾರಾವಾಹಿ ಮಾಡಿದ ನಂತರದಲ್ಲಿ ಎಲ್ಲರೂ ಬಂದು ಮಾತನಾಡಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಕಷ್ಟ ಎಂಬುದು ನನಗೆ ಗೊತ್ತಿದೆ. ಆದರೆ ಇಷ್ಟವಿರದ ಪಾತ್ರ ಸಿಕ್ಕರೂ ಕೂಡ ಇಷ್ಟಪಟ್ಟು ನಟಿಸಿದರೆ ಯಶಸ್ಸು ಸಾಧ್ಯ ಎಂದು ನಂಬುತ್ತೇನೆ. ಉಳಿದ ಧಾರಾವಾಹಿಗಳಿಗೆ ಹೋಲಿಕೆ ಮಾಡಿ ನೋಡಿದರೆ ನಮ್ಮ ಧಾರಾವಾಹಿ ತುಂಬ ಸ್ಪೀಡ್ ಆಗಿ ಸಾಗುತ್ತಿದೆ. ಈ ಪ್ರಯತ್ನ ಜನರಿಗೆ ಇಷ್ಟವಾಗುತ್ತಿದೆ” ಎಂದು ನಟಿ ವಿಜಯಲಕ್ಷ್ಮೀ ಅವರು ಹೇಳಿದ್ದಾರೆ.
