Karnataka news paper

ಆಷಸ್‌ ಕೊನೇ 3 ಪಂದ್ಯಗಳಿಗೆ 15 ಸದಸ್ಯರ ಆಸ್ಟ್ರೇಲಿಯಾ ತಂಡ ಪ್ರಕಟ!


ಹೈಲೈಟ್ಸ್‌:

  • ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್‌ ಸರಣಿ.
  • ಮುಂದಿನ ಮೂರು ಪಂದ್ಯಗಳ 15 ಸದಸ್ಯರ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ.
  • ಅಡಿಲೇಡ್‌ ಟೆಸ್ಟ್‌ಗೆ ಅಲಭ್ಯರಾಗಿದ್ದ ಪ್ಯಾಟ್‌ ಕಮಿನ್ಸ್‌ ಹಾಗೂ ಹೇಝಲ್‌ವುಡ್‌ ಮರಳಿದ್ದಾರೆ.

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧ ಆಷಸ್‌ ಟೆಸ್ಟ್‌ ಸರಣಿಯ ಇನ್ನುಳಿದ ಮೂರು ಪಂದ್ಯಗಳಿಗೆ 15 ಸದಸ್ಯರ ಆಸ್ಟ್ರೇಲಿಯಾ ತಂಡ ಪ್ರಕಟವಾಗಿದೆ. ಪ್ರಸ್ತುತ ನಡೆಯುತ್ತಿರುವ ಪಿಂಕ್‌ ಬಾಲ್‌ ಟೆಸ್ಟ್‌ನಿಂದ ಹೊರಗುಳಿದಿದ್ದ ನಾಯಕ ಪ್ಯಾಟ್‌ ಕಮಿನ್ಸ್ ಹಾಗೂ ಜಾಶ್‌ ಹೇಝಲ್‌ವುಡ್‌ ತಂಡಕ್ಕೆ ಮರಳಿದ್ದಾರೆ.

ಕೋವಿಡ್‌-19 ಸೋಂಕಿತ ವ್ಯಕ್ತಿಯ ಸಂಪರ್ಕಿಸಿದ್ದ ಕಾರಣ ಅಡಿಲೇಡ್‌ ಟೆಸ್ಟ್‌ಗೆ ನಾಯಕ ಪ್ಯಾಟ್‌ ಕಮಿನ್ಸ್ ಅಲಭ್ಯರಾಗಿದ್ದರು. ನೆಗೆಟಿವ್‌ ವರದಿ ಬಂದ ಬಳಿಕ ಅವರು ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಅರ್ಹರಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಐಸೋಲೇಷನ್‌ ಅನ್ನು ಮುಗಿಸಲಿದ್ದಾರೆ. ಬೆನ್ನು ನೋವಿನಿಂದ ಡೇ ನೈಟ್‌ ಟೆಸ್ಟ್‌ನಿಂದ ಹೊರಗುಳಿದಿದ್ದ ಜಾಶ್‌ ಹೇಝಲ್‌ವುಡ್‌ ಇದೀಗ ತಂಡಕ್ಕೆ ಮರಳಿದ್ದಾರೆ.

ಆರಂಭಿಕ ಎರಡು ಪಂದ್ಯಗಳ ನಾಲ್ಕೂ ಇನಿಂಗ್ಸ್‌ಗಳಲ್ಲಿ ಕೇವಲ 38 ರನ್‌ ಗಳಿಸಿದ್ದ ಮಾರ್ಕಸ್‌ ಹ್ಯಾರಿಸ್‌ ಅವರು ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ, ಮುಂದಿನ ಪಂದ್ಯದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವರು ತಮ್ಮ ಸ್ಥಾನವನ್ನು ಉಸ್ಮಾನ್ ಖವಾಜಗೆ ಬಿಟ್ಟುಕೊಡುವ ಸಾಧ್ಯತೆ ಇದೆ.

ಕನ್ನಡಿಗರೇ ಓಪನರ್ಸ್‌! ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI ಇಂತಿದೆ..

ಮಿಚೆಲ್‌ ಸ್ಟಾರ್ಕ್‌ ಬೆನ್ನು ನೋವಿನಿಂದಾಗಿ ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಲಭ್ಯರಾಗುವುದು ಬಹುತೇಕ ಅನುಮಾನವಾಗಿದೆ. ಆಸ್ಟ್ರೇಲಿಯಾ ತಂಡದ ದ್ವಿತೀಯ ಇನಿಂಗ್ಸ್‌ನಲ್ಲಿ ಅವರು ಪೈನ್‌ ಕಿಲ್ಲರ್‌ಗಳನ್ನು ತೆಗೆದುಕೊಂಡು ಬ್ಯಾಟ್‌ ಮಾಡಿದ್ದರು. ನಂತರ, ನಾಲ್ಕನೇ ದಿನದ ಅಂತಿಮ ಸೆಷನ್‌ನಲ್ಲಿ ಅವರು ಬೌಲ್‌ ಮಾಡಿದ್ದರು.

ಪ್ಯಾಟ್‌ ಕಮಿನ್ಸ್ ಹಾಗೂ ಜಾಶ್‌ ಹೇಝಲ್‌ವುಡ್‌ ತಂಡಕ್ಕೆ ಮರಳಿದ್ದರಿಂದ 31ರ ಮಿಚೆಲ್‌ ಸ್ಟಾರ್ಕ್‌ಗೆ ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಆ ಮೂಲಕ ಜೇ ರಿಚರ್ಡ್ಸನ್‌ ಹಾಗೂ ಮಿಚೆಲ್‌ ನೆಸರ್ ಅವರಲ್ಲಿ ಒಬ್ಬರನ್ನು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಿಸಿಕೊಳ್ಳಬಹುದು. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಈ ಇಬ್ಬರೂ ವೇಗಿಗಳು ಅಡಿಲೇಡ್‌ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.

ಇಂಗ್ಲೆಂಡ್‌ ತಂಡದ ರಕ್ಷಣೆಗಾಗಿ ಆಫ್‌ ಸ್ಪಿನ್ನರ್‌ ಆದ ವೇಗಿ ರಾಬಿನ್ಸನ್‌!

ಇದೀಗ ನಡೆಯುತ್ತಿರುವ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಪಡೆಯಲು ಇನ್ನು ಕೇವಲ 4 ವಿಕೆಟ್‌ ಅಗತ್ಯವಿದೆ. ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯದ ಐದನೇ ದಿನ ಭೋಜನ ವಿರಾಮದ ಅಂತ್ಯಕ್ಕೆ ಇಂಗ್ಲೆಂಡ್‌ ತಂಡ 6 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿತ್ತು. ಇನ್ನು ನಾಲ್ಕು ಪಡೆದರೆ, ಆಸ್ಟ್ರೇಲಿಯಾ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-0 ಮುನ್ನಡೆ ಪಡೆಯಲಿದೆ.

ಇನ್ನು ಉಭಯ ತಂಡಗಳ ನಡುವಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ಡಿಸೆಂಬರ್‌ 26 ರಿಂದ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌(ಎಂಸಿಜೆ) ನಲ್ಲಿ ನಡೆಯಲಿದೆ. ಇದಾದ ಬಳಿಕ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಾಲ್ಕನೇ ಟೆಸ್ಟ್‌ ನಡೆಯಲಿದ್ದು, ಹೊಬರ್ಟ್‌ನಲ್ಲಿ ಐದನೇ ಹಾಗೂ ಅಂತಿಮ ಟೆಸ್ಟ್‌ ಜರುಗಲಿದೆ. ಅಂದಹಾಗೆ ಐದನೇ ಪಂದ್ಯ ಕೂಡ ಪಿಂಕ್‌ ಬಾಲ್‌ ಪಂದ್ಯವಾಗಿದೆ.

ಕೆ.ಎಲ್‌ ರಾಹುಲ್‌ ಭಾರತ ಟೆಸ್ಟ್‌ ತಂಡದ ಭವಿಷ್ಯದ ನಾಯಕ ಎಂದ ಬಟ್‌!

ಮುಂದಿನ 3 ಟೆಸ್ಟ್‌ ಪಂದ್ಯಗಳಿಂದ ಆಸ್ಟ್ರೇಲಿಯಾ ತಂಡ: ಪ್ಯಾಟ್‌ ಕಮಿನ್ಸ್‌(ನಾಯಕ), ಅಲೆಕ್ಸ್‌ ಕೇರಿ, ಕ್ಯಾಮೆರಾನ್‌ ಗ್ರೀನ್, ಮಾರ್ಕಸ್‌ ಹ್ಯಾರಿಸ್‌, ಜಾಶ್‌ ಹೇಝಲ್‌ವುಡ್, ಟ್ರಾವಿಸ್‌ ಹೆಡ್‌, ಉಸ್ಮಾನ್‌ ಖವಾಜ, ಮಾರ್ನಸ್‌ ಲಾಬುಶೇನ್‌, ನೇಥನ್‌ ಲಯಾನ್‌, ಮೈಕಲ್‌ ನೇಸರ್‌, ಜೇ ರಿಚರ್ಡ್‌ಸನ್‌, ಸ್ಟೀವನ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಮಿಚೆಲ್‌ ಸ್ವೆಪ್ಸನ್‌, ಡೇವಿಡ್‌ ವಾರ್ನರ್‌



Read more