ಹೈಲೈಟ್ಸ್:
- ಇನ್‌ಸ್ಟಾಗ್ರಾಮ್‌ನಲ್ಲಿ ವಾರ್ನಿಂಗ್ ಕೊಟ್ಟ ನಟಿ ದೀಪಿಕಾ ದಾಸ್
- ದೀಪಿಕಾ ದಾಸ್ ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡಲಾಗುತ್ತಿದೆಯಂತೆ
- ಅಭಿಮಾನಿ / ಸುಳ್ಳು ಅಭಿಮಾನಿಗಳ ಕುರಿತು ದೀಪಿಕಾ ದಾಸ್ ಮಾತು
ಕೆಲ ವಿಷಯಗಳಿಂದ ದೂರ ಇರಿ: ನಟಿ ದೀಪಿಕಾ ದಾಸ್ ಮನವಿ ( deepika das )
“ನನ್ನ ಅಭಿಮಾನಿ ಎಂದು ಹೇಳಿಕೊಂಡು ದೌರ್ಜನ್ಯ ಮಾಡುವವರಿಗೆ ಈ ಸಂದೇಶ. ಕೆಲ ಅಕೌಂಟ್‌ಗಳು, ಮೇಲ್‌ಗಳಿಂದ ಬಂದ ಸಂದೇಶಗಳನ್ನು ನಾನು ಗಮನಿಸಿದ್ದೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋದು ನಿಮ್ಮ ಕೆಲಸ ಅಂತ ನಾನು ಭಾವಿಸಲಾರೆ. ಕೆಲವು ವಿಷಯಗಳಿಂದ ದೂರ ಇರಿ, ಸಮಸ್ಯೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ. ಇದು ಎಲ್ಲರಿಗೂ ನೀಡುತ್ತಿರುವ ಎಚ್ಚರಿಕೆ. ನೀವು ನನಗೆ ಏನೋ ಮಾಡಲು ಹೇಳಿದ್ದೀರಿ ಎಂದಮಾತ್ರಕ್ಕೆ ಯಾವುದು ಬದಲಾಗೋದಿಲ್ಲ” ಎಂದು ನಟಿ ದೀಪಿಕಾ ದಾಸ್ ಹೇಳಿದ್ದಾರೆ.
ಟಿಆರ್‌ಪಿ ರೇಸ್‌ನಲ್ಲಿ ‘ಮಂಗಳ ಗೌರಿ ಮದುವೆ’ಯನ್ನು ಹಿಂದಿಕ್ಕಿದ ‘ನಾಗಿಣಿ 2’! ಯಾರಿಗೆ ಎಷ್ಟನೇ ಸ್ಥಾನ?
ನನ್ನ ಡೇಟಿಂಗ್ ಬಗ್ಗೆ ಚಿಂತೆ ಮಾಡಬೇಡಿ: ದೀಪಿಕಾ ದಾಸ್
“ಪ್ರೀತಿ ಸಹಕಾರ ನೀಡುತ್ತ, ನನ್ನ ವೃತ್ತಿ ಜೀವನದುದ್ದಕ್ಕೂ ನನ್ನ ಜೊತೆಗಿರುವ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ಎಲ್ಲ ನಿಜವಾದ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಯಾರ ಜೊತೆ ಡೇಟ್ ಮಾಡ್ತೀನಿ, ಮಾಡಲ್ಲ, ಯಾರ ಜೊತೆ ಡೇಟ್ ಮಾಡಬೇಕು, ಮಾಡಬಾರದು ಅಂತೆಲ್ಲ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೆಲವು ಗ್ರೂಪ್‌ಗಳಲ್ಲಿ ಮನನೋಯಿಸುವ ಮೆಸೇಜ್‌ಗಳನ್ನು ನಾನು ನೋಡಿದ್ದೇನೆ. ಇದನ್ನು ಒಪ್ಪಿಕೊಳ್ಳಲಾಗೋದಿಲ್ಲ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ. ನನ್ನ ಬಗ್ಗೆ ಇರುವ ನಿಮ್ಮ ಪ್ರೀತಿಯನ್ನು ನಾನು ಅರ್ಥ ಮಾಡಿಕೊಳ್ಳುವೆ, ಆದರೆ ಬೇರೆಯವರ ಮನಸ್ಸು ನೋಯಿಸಬೇಡಿ” ಎಂದು ನಟಿ ದೀಪಿಕಾ ದಾಸ್ ಹೇಳಿದ್ದಾರೆ.
ನಾಗಿಣಿ 2 ಧಾರಾವಾಹಿಯಲ್ಲಿ ಆದಿಶೇಷ ಯಾರು ಅಂತ ರಿವೀಲ್ ಮಾಡಲಿರುವ ನಟಿ ದೀಪಿಕಾ ದಾಸ್!
ಬಿಗ್ ಬಾಸ್ ಮೂಲಕ ದೀಪಿಕಾ ದಾಸ್ ಇನ್ನಷ್ಟು ಕಿರುತೆರೆ ಮಂದಿಗೆ ಹತ್ತಿರ
ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ ನಂತರದಲ್ಲಿ ದೀಪಿಕಾ ದಾಸ್ ಅವರು ಯಾವುದೇ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿ ತೆರೆ ಮೇಲೆ ಕಾಣಿಸಿಕೊಂಡಿಲ್ಲವಾದರೂ ಕೂಡ, ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಉದ್ಯಮಿಯಾಗಿ ಹೊರಹೊಮ್ಮಿರುವ ಅವರು ಆನ್‌ಲೈನ್ ಡ್ರೆಸ್ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ‘ನಾಗಿಣಿ’ ಧಾರಾವಾಹಿ ದೀಪಿಕಾಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ತಂದುಕೊಟ್ಟಿತ್ತು. ಬಿಗ್ ಬಾಸ್ ಮನೆಯಲ್ಲಿ ಆಟ, ನಡವಳಿಕೆ, ಅಡುಗೆ ವಿಚಾರದಲ್ಲಿಯೂ ದೀಪಿಕಾ ಜನ ಮನ ಗೆದ್ದಿದ್ದರು.
ದೀಪಿಕಾ ದಾಸ್ ಫೋಟೋಶೂಟ್ ಮಾಡಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ, ಅವರು ಒಂದಾದ ಮೇಲೆ ಒಂದರಂತೆ ಫೋಟೋಶೂಟ್ ಮಾಡುತ್ತಿದ್ದಾರೆ. ದೀಪಿಕಾಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಈಗಾಗಲೇ ದೀಪಿಕಾ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ, ಪರಭಾಷಾ ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದರು.