Karnataka news paper

ಆಧಾರ್‌ ಕಾರ್ಡ್‌ ಎನ್‌ರೋಲ್‌ಮೆಂಟ್‌ ಸ್ಟೇಟಸ್‌ ಅನ್ನು ಚೆಕ್‌ ಮಾಡುವುದು ಹೇಗೆ?


ಆಧಾರ್‌

ಹೌದು, ಆಧಾರ್‌ ಕಾರ್ಡ್‌ ಇಂದಿನ ದಿನಗಳಲ್ಲಿ ಅತಿ ಅವಶ್ಯಕವಾಗಿದೆ. ಭಾರತದ ನಾಗರೀಕರಾಗಿರುವವರು ಆಧಾರ್‌ ಕಾರ್ಡ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಆಧಾರ್ ಸಂಖ್ಯೆಯನ್ನು ಪಡೆಯಲು ಸ್ವಯಂ ಪ್ರೇರಣೆಯಿಂದ ನೋಂದಾಯಿಸಿಕೊಳ್ಳಬಹುದು. ಆಧಾರ್‌ಗಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಲು ನೀವು ನೋಂದಣಿ ಪ್ರಕ್ರಿಯೆಯಲ್ಲಿ ಕನಿಷ್ಟ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಆಧಾರ್‌ಗಾಗಿ ಅರ್ಜಿ ಸಲ್ಲಿಸಿದ ಜನರು ಇದಿಗ ತನ್ನ ನೋಂದಣಿ ಸ್ಟೇಟಸ್‌ ಅನ್ನು ಆನ್‌ಲೈನ್‌ನಲ್ಲಿ ಕೂಡ ಪರಿಶೀಲನೆ ನಡೆಸಬಹುದಾಗಿದೆ. ಹಾಗಾದ್ರೆ ನಿಮ್ಮ ಆಧಾರ್‌ ಅಪ್ಲಿಕೇಶನ್‌ ಸ್ಟೇಟಸ್‌ ಅನ್ನು ಚೆಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್‌ ಕಾರ್ಡ್‌

ಆಧಾರ್‌ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಿದ ಜನರು ತಮ್ಮ ಎನ್‌ರೋಲ್‌ಮೆಂಟ್‌ ಸ್ಟೇಟಸ್‌ ಅನ್ನು ಆನ್‌ಲೈನ್‌ನಲ್ಲಿ ಚೆಕ್‌ ಮಾಡಬಹುದು. ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಅಪ್ಡೇಟ್‌ ಮಾಡುವಂತೆ ಯುಐಡಿಎಐ ಹೇಳಿದೆ. ನಿಮ್ಮ #ಆಧಾರ್ ಎನ್‌ರೋಳ್‌ಮೆಂಟ್‌ ಸ್ಟೇಟಸ್‌ ಅನ್ನು https://resident.uidai.gov.in/check-aadhaarನಲ್ಲಿ ಚೆಕ್‌ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು https://uidai. gov.in/my-aadhaar/about-your-aadhaar/updating-data-on-aadhaar.html ಸೈಟ್‌ಗೆ ಬೇಟಿ ನೀಡಿ ಎಂದು UIDAI ಟ್ವೀಟ್ ಮಾಡಿದೆ.

ಆಧಾರ್ ಸ್ಟೇಟಸ್‌ ಅನ್ನು ಆನ್‌ಲೈನ್‌ನಲ್ಲಿ ಚೆಕ್‌ ಮಾಡುವುದು ಹೇಗೆ?

ಆಧಾರ್ ಸ್ಟೇಟಸ್‌ ಅನ್ನು ಆನ್‌ಲೈನ್‌ನಲ್ಲಿ ಚೆಕ್‌ ಮಾಡುವುದು ಹೇಗೆ?

ನಿಮ್ಮ ಆಧಾರ್ ಕಾರ್ಡ್‌ ಸ್ಟೇಟಸ್‌ ಅನ್ನು ಆನ್‌ಲೈನ್‌ನಲ್ಲಿ ಚೆಕ್‌ ಮಾಡಬಹುದು. ನಿಮ್ಮ ಕಾರ್ಡ್‌ ಕ್ರಿಯೆಟ್‌ ಆಗಿದೆಯಾ, ಅಪ್ಡೇಟ್‌ ಮಾಡಲಾಗಿದೆಯಾ ಎನ್ನುವ ವಿಚಾರವನ್ನು ನೀವು ಪರಿಶೀಲಿಸಬಹುದು. ಆದರೆ ನಿಮ್ಮ ಆಧಾರ್ ಸ್ಟೇಟಸ್‌ ಅನ್ನು ಪರಿಶೀಲಿಸಲು ನಿಮಗೆ EID ನಂಬರ್‌ ಅಗತ್ಯವಿರುತ್ತದೆ. ಇನ್ನು EID ಸಂಖ್ಯೆಯನ್ನು ನೀವು ನಿಮ್ಮ ದಾಖಲಾತಿ/ಅಪ್‌ಡೇಟ್ ಸ್ವೀಕೃತಿ ಸ್ಲಿಪ್‌ನ ಮೇಲ್ಭಾಗದಲ್ಲಿ ಕಾಣಬಹುದು. ಇದು 14 ಅಂಕಿಗಳ ದಾಖಲಾತಿ ಸಂಖ್ಯೆ ಯನ್ನು ಹೊಂದಿರುತ್ತದೆ. ಈ ನೋಂದಣಿಯ 14 ಅಂಕಿ ದಿನಾಂಕ ಮತ್ತು ಸಮಯವನ್ನು (dd/mm/yyyy hh:mm:ss) ಒಳಗೊಂಡಿದೆ. ಈ 28 ಅಂಕೆಗಳು ಒಟ್ಟಾಗಿ ನಿಮ್ಮ ದಾಖಲಾತಿ ID (EID) ಆಗಿರುತ್ತದೆ. ಒಂದು ವೇಳೆ ನೀವು EID ಕಳೆದುಕೊಂಡರೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಕಳೆದುಹೋದ ಅಥವಾ ಮರೆತುಹೋದ EID ಅನ್ನು ನೀವು ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಆಧಾರ್ ಸ್ಟೇಟಸ್‌ ಚೆಕ್‌ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ

ನಿಮ್ಮ ಆಧಾರ್ ಸ್ಟೇಟಸ್‌ ಚೆಕ್‌ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ

ಹಂತ:1 ಮೊದಲಿಗೆ UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
ಹಂತ:2 ನಂತರ ನೀವು ನಿಮ್ಮ ದಾಖಲಾತಿ ID (EID) ಮತ್ತು ದಾಖಲಾತಿಯ ಸಮಯವನ್ನು ನಮೂದಿಸಬೇಕು.
ಹಂತ:3 ಇದಾದ ನಂತರ ಅಲ್ಲಿ ಕಂಡುಬರುವ ಕ್ಯಾಪ್ಚಾವನ್ನು ಪರಿಶೀಲಿಸಿ.
ಹಂತ:4 ಅಂತಿಮವಾಗಿ ಚೆಕ್ ಸ್ಟೇಟಸ್ ಬಟನ್ ಮೇಲೆ ಕ್ಲಿಕ್ ಮಾಡಿ.

ಹೀಗೆ ಮಾಡುವ ಮೂಲಕ ನಿಮ್ಮ ಆಧಾರ್‌ ಕಾರ್ಡ್‌ ಸ್ಟೇಟಸ್‌ ಅನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ.

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ನಲ್ಲಿ ಫೋನ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಲು ಹೀಗೆ ಮಾಡಿ:

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ನಲ್ಲಿ ಫೋನ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಲು ಹೀಗೆ ಮಾಡಿ:

ಹಂತ 1: ಹತ್ತು-ಅಂಕಿಯ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು, ನೀವು ಮೊದಲು UIDAI ವೆಬ್ ಪೋರ್ಟಲ್‌ಗೆ ask.uidai.gov.in ಗೆ ಭೇಟಿ ನೀಡಬೇಕಾಗುತ್ತದೆ.
ಹಂತ 2: ನೀವು ನವೀಕರಿಸಲು ಬಯಸುವ ಫೋನ್ ಸಂಖ್ಯೆಯನ್ನು ಸೇರಿಸಿ.
ಹಂತ 3: ಮುಂದಿನ ಪೆಟ್ಟಿಗೆಗಳಲ್ಲಿ ಕ್ಯಾಪ್ಚಾದಲ್ಲಿ ಟೈಪ್ ಮಾಡಿ.
ಹಂತ 4: ನಂತರ ನೀವು ‘ಕಳುಹಿಸು ಒಟಿಪಿ’ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಫೋನ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ನಮೂದಿಸಬೇಕಾಗುತ್ತದೆ.
ಹಂತ 5: ನಂತರ ‘ಸಬ್‌ಮಿಟ್ ಒಟಿಪಿ & ಪ್ರೊಸೀಡ್’ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 6: ನಂತರ ನೀವು ‘ಆನ್‌ಲೈನ್ ಆಧಾರ್ ಸೇವೆಗಳು’ ಎಂದು ಸೂಚಿಸುವ ಡ್ರಾಪ್‌ಡೌನ್ ಮೆನುವನ್ನು ನೋಡಬಹುದು.
ಹಂತ 7: ಹೆಸರು, ವಿಳಾಸ, ಲಿಂಗ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಆಯ್ಕೆಗಳನ್ನು ಪಟ್ಟಿ ತೋರಿಸುತ್ತದೆ. ಆಧಾರ್‌ನಲ್ಲಿ ಫೋನ್ ಸಂಖ್ಯೆಯನ್ನು ನವೀಕರಿಸಲು ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ.
ಹಂತ 8: ನಂತರ ನೀವು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ‘ನೀವು ಏನು ನವೀಕರಿಸಲು ಬಯಸುತ್ತೀರಿ’ ಆಯ್ಕೆಯನ್ನು ಆರಿಸಲು ಖಚಿತಪಡಿಸಿಕೊಳ್ಳಿ.
ಹಂತ 9: ಮುಂದೆ ಹೊಸ ಪುಟವು ತೋರಿಸುತ್ತದೆ ಮತ್ತು ನೀವು ಕ್ಯಾಪ್ಚಾವನ್ನು ನಮೂದಿಸಬೇಕಾಗುತ್ತದೆ.

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಲು ಈ ಹಂತಗಳನ್ನು ಅನುಸರಿಸಿ:

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಲು ಈ ಹಂತಗಳನ್ನು ಅನುಸರಿಸಿ:

ಹಂತ:1. UIDAI ಅಫಿಶಿಯಲ್ ವೆಬ್‌ಸೈಟ್‌ನಿಂದ ಆಧಾರ್ ಎನರೊಲಮಂಟ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.

ಹಂತ:2. ಆಧಾರ್ ಎನರೊಲಮಂಟ್ ಫಾರ್ಮ್ ಅನ್ನು ಪ್ರಿಂಟ್ ತೆಗೆದು ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ.

ಹಂತ:3. ಈ ಅಫಿಶಿಯಲ್ ವೆಬ್‌ಸೈಟ್ ಬಳಸಿಕೊಂಡು ಹತ್ತಿರದ ಆಧಾರ್ ಎನರೊಲಮಂಟ್ ಸೆಂಟರ್ / ಆಧಾರ್ ಸೇವಾ ಕೇಂದ್ರವನ್ನು ಸರ್ಚ್ ಮಾಡಿ.

ಹಂತ:4. ನಿಮ್ಮ ಅರ್ಜಿಯನ್ನು ಆಧಾರ್ ಎನರೊಲಮಂಟ್ ಎಕ್ಸಿಕ್ಯುಟಿವ್ ಗೆ ಸಬಮಿಟ್ ಮಾಡಿ.

ಹಂತ:5. ಎಕ್ಸಿಕ್ಯುಟಿವರಿಂದ ಬಯೋಮೆಟ್ರಿಕ್ ಬಳಸಿ ನಿಮ್ಮ ವಿವರಗಳನ್ನು ದೃಢೀಕರಿಸಲಾಗುತ್ತದೆ.

ಹಂತ:6. ನಿಮ್ಮ ಹೊಸ ಛಾಯಾಚಿತ್ರವನ್ನು ಆಧಾರ್ ಎನೊರೊಲಮಂಟ್ ಸೆಂಟರ್/ಆಧಾರ್ ಸೇವಾ ಕೇಂದ್ರದಲ್ಲಿ ಎಕ್ಸಿಕ್ಯುಟಿವ್ ತೆಗೆದುಕೊಳ್ಳುತ್ತಾರೆ.

ಹಂತ:7. ಫೋಟೋ ಬದಲಾವಣೆ ಸೇವೆಯನ್ನು ಪಡೆಯಲು ನೀವು GST ಜೊತೆಗೆ ರೂ 25 ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹಂತ:8. ಎಕ್ಸಿಕ್ಯುಟಿವ್ ಅಪಡೆಟ್ ರಿಕ್ವೆಸ್ಟ ನಂಬರ್ (URN) ನೊಂದಿಗೆ ನಿಮಗೆ ಎಕನೊಲೆಡ್ಜಮೆಂಟ ಸ್ಲಿಪ್ ಅನ್ನು ನೀಡಲಾಗುತ್ತದೆ.

ಹಂತ:9. UIDAI ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅಪಡೆಟ್ ಸ್ಟೇಟಸ್ ನ್ನು ಚೆಕ್ ಮಾಡಲು ನೀವು URN ಸಂಖ್ಯೆಯನ್ನು ಬಳಸಬಹುದು.

ಹಂತ:10. ಫೋಟೋವನ್ನು ಯಶಸ್ವಿಯಾಗಿ ಅಪಡೆಟ್ ಮಾಡಿದ ನಂತರ ನೀವು ನ್ಯು ಕಾಪಿಯನ್ನು ಡೌನ್‌ಲೋಡ್ ಮಾಡಬಹುದು ಅಥವಾ UIDAI ನ ಪೋರ್ಟಲ್‌ನಿಂದ ಪಿಸಿಕಲ್ ಕಾರ್ಡ್ ಅನ್ನು ಆರ್ಡರ್ ಮಾಡಬಹುದು.



Read more…

Leave a Reply

Your email address will not be published. Required fields are marked *