Karnataka news paper

ಕ್ಯಾಲಿಫೋರ್ನಿಯಾ: 52 ಸ್ಟಾರ್‌ಲಿಂಕ್‌ ಉಪಗ್ರಹಗಳು ಕಕ್ಷೆಗೆ, ಯಶಸ್ವಿ ಉಡಾವಣೆ


ಕ್ಯಾಲಿಫೋರ್ನಿಯಾ: ಸ್ಪೇಸ್‌ ಎಕ್ಸ್‌ ಇಲ್ಲಿನ ವಂಡೆನ್‌ಬರ್ಗ್‌ ಬಾಹ್ಯಾಕಾಶ ನೆಲೆಯಿಂದ 52 ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಉಪಗ್ರಹಗಳನ್ನು ಹೊತ್ತಿದ್ದ ರಾಕೆಟ್ ಅನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.

ಎರಡು ಹಂತದಲ್ಲಿ ಫಾಲ್ಕನ್‌ 9 ರಾಕೆಟ್‌ ಉಡಾವಣೆ ಪ್ರಕ್ರಿಯೆ ನಡೆಯಿತು. ಮೊದಲ ಹಂತದ ರಾಕೆಟ್‌ ಕಡಲಿನಲ್ಲಿದ್ದ ಸ್ಪೇಸ್‌ ಎಕ್ಸ್‌ನ ಡ್ರೋನ್‌ ಹಡಗಿಗೆ ಮರಳಿತು. 

ಎರಡನೇ ಹಂತದಲ್ಲಿ ರಾಕೆಟ್ ಯಶಸ್ವಿಯಾಗಿ ಗುರಿ ತಲುಪಿದ್ದು, ಕಕ್ಷೆಗೆ ಉಪಗ್ರಹಗಳನ್ನು ಸೇರಿಸಿತು ಎಂದು ಉಡಾವಣಾ ವೀಕ್ಷಣೆಗಾರ ಯೊಮೆ ಝೋ ಅವರು ತಿಳಿಸಿದರು.

ಸ್ಟಾರ್‌ಲಿಂಕ್‌ ಎಂಬುದು ಉಪಗ್ರಹ ಆಧರಿತ ಜಾಗತಿಕ ಇಂಟರ್‌ನೆಟ್‌ ವ್ಯವಸ್ಥೆಯಾಗಿದ್ದು, ಸ್ಟೇಸ್ ಎಕ್ಸ್‌ ಇದನ್ನು ದಶಕಗಳಿಂದ ನಿರ್ವಹಣೆ ಮಾಡುತ್ತಿದೆ.



Read more from source