Karnataka news paper

Namma Metro Alert: ಬೆಂಗಳೂರು ಪ್ರಯಾಣಿಕರ ಗಮನಕ್ಕೆ: ಕೆಲ ಮಾರ್ಗಗಳಲ್ಲಿ ಮೆಟ್ರೋ ಸ್ಥಗಿತ, ಇಲ್ಲಿದೆ ಬದಲಾದ ವೇಳಾಪಟ್ಟಿ


ಬೆಂಗಳೂರು: ವೀಕೆಂಡ್ ಮೆಟ್ರೋ ಮೂಲಕ ಬೆಂಗಳೂರು ಸುತ್ತಾಡ್ಬೇಕು, ಶಾಪಿಂಗ್ ಹೊಗ್ಬೇಕು ಅಂತ ಪ್ಲ್ಯಾನ್ ಮಾಡಿರುವವರಿಗೆ ನಿರಾಸೆಯಾಗೋದು ಗ್ಯಾರಂಟಿ.
ಹೌದು ಇಂದು ಕೆಲವು ಮಾರ್ಗಗಳಲ್ಲಿ ಮೆಟ್ರೋ ರೈಲು ಓಡಾಟ ಇರುವುದಿಲ್ಲ.

ಏನು ಬದಲಾವಣೆ?

ದಿನಾಂಕ 09.03.2025 ರಂದು ಹಳಿ ನಿರ್ವಹಣೆ ಕಾಮಗಾರಿ ಕೈಗೊಳ್ಳುವುದರಿಂದ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ವಾಣಿಜ್ಯ ಸೇವೆ ಸ್ಥಗಿತ ಆಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಯಾವ ಸಮಯದಲ್ಲಿ ಸ್ಥಗಿತ?

ನಮ್ಮ ಮೆಟ್ರೋ ನಿಗಮ, ದಿನಾಂಕ 09.03.2025 (ಭಾನುವಾರ) ರಂದು ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದು ಬೆಳಿಗ್ಗೆ 07:00 ರಿಂದ 10:00 ಗಂಟೆಯವರೆಗೆ, (ಮೂರು ಗಂಟೆಗಳ ಕಾಲ) ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ಭಾಗಶಃ ರದ್ದುಪಡಿಸಲಾಗುತ್ತದೆ.

Karnataka Budget 2025 : ಬೆಂಗಳೂರು ನಮ್ಮ ಮೆಟ್ರೋ ದೇವನಹಳ್ಳಿಗೆ ವಿಸ್ತರಣೆ – ಸಿಎಂ ಸಿದ್ದರಾಮಯ್ಯ ಘೋಷಣೆ

ಯಾವೆಲ್ಲಾ ನಿಲ್ದಾಣಗಳು ಬಂದ್?

ಈ ರದ್ದತಿ ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸ‌ರ್.ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳು ಮುಚ್ಚಲಾಗಿರುತ್ತದೆ.
ಬೆಳಗ್ಗೆ 10.00 ಗಂಟೆಯವರೆಗೆ ಈ ರದ್ಧತಿಯ ಕಾರಣದಿಂದಾಗಿ, ಕ್ಯೂಆರ್ ಟಿಕೆಟ್‌ಗಳ ಖರೀದಿ ಮಾಡಲು ಸಾಧ್ಯವಿಲ್ಲ.

ಮೆಜೆಸ್ಟಿಕ್‌ನಲ್ಲಿ ಮೆಟ್ರೋ ಬದಲಾವಣೆ ಸಾಧ್ಯ ಇಲ್ಲ

ಮೆಜೆಸ್ಟಿಕ್‌ ನಲ್ಲಿ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಮೆಟ್ರೋ ಬದಲಾಯಿಸಿಕೊಳ್ಳಬೇಕೆಂದರೆ ಈ ಅವಧಿಯಲ್ಲಿ ಮೆಟ್ರೋ ಇರುವುದಿಲ್ಲ.
ನೇರಳೆ ಮಾರ್ಗ ದಲ್ಲಿನ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಲ್ಲಿ ರೈಲು ಲಭ್ಯವಿರುವುದಿಲ್ಲವಾದ್ದರಿಂದ, ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಮತ್ತು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಪ್ರಯಾಣಿಸಲು ಸಾರ್ವಜನಿಕರು ಕ್ಯೂಆರ್ ಟಿಕೆಟ್ ಹಾಗೂ ಟೋಕನ್ ಗಳನ್ನು ಖರೀದಿಸದಂತೆ ಸೂಚಿಸಲಾಗಿದೆ.

ನಮ್ಮ ಮೆಟ್ರೋ 4ನೇ ಹಂತಕ್ಕೆ ಸಿದ್ಧವಾಗ್ತಿದೆ ಕಾರ್ಯಸಾಧ್ಯತಾ ವರದಿ : ಬೆಂಗಳೂರಿನ ಯಾವ ಭಾಗದಲ್ಲಿ ಹೊಸ ಮಾರ್ಗಗಳು, ಯಾರಿಗೆಲ್ಲಾ ಅನುಕೂಲ? ಇಲ್ಲಿದೆ ಡಿಟೇಲ್ಸ್

ಈ ಮಾರ್ಗಗಳಲ್ಲಿ ಮೆಟ್ರೋ ಲಭ್ಯ

ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿ ಅಂದರೆ, ಚಲ್ಲಘಟ್ಟ ಮತ್ತು ಮಾಗಡಿ ರಸ್ತೆ ನಡುವೆ, ಹಾಗೂ ಎಂಜಿ ರಸ್ತೆ ಮತ್ತು ವೈಟ್‌ ಫೀಲ್ಡ್ (ಕಾಡುಗೋಡಿ) ನಡುವೆ, ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 07:00 ಗಂಟೆಗೆ ಪ್ರಾರಂಭವಾಗುತ್ತವೆ ಮತ್ತು ಮೇಲಿನ ಅವಧಿಯಲ್ಲಿ ವೇಳಾಪಟ್ಟಿಯ ಪ್ರಕಾರ ಲಭ್ಯವಿರುತ್ತವೆ.

ಹಸಿರು ಮಾರ್ಗದ ಮೆಟ್ರೋಗೆ ಸಮಸ್ಯೆ ಇಲ್ಲ

ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ರೈಲುಗಳ ಸೇವೆಗಳು ನಿಗದಿತ ಸಮಯ ಬೆಳಿಗ್ಗೆ 7:00 ಗಂಟೆಗೆ ಪ್ರಾರಂಭವಾಗುತ್ತವೆ.

ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸ ಬೇಕೆಂದು ಕೋರಿದೆ. ಪ್ರಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಇಂದು ಪೊಲೀಸ್ ರನ್ ಬೃಹತ್ ಕಾರ್ಯಕ್ರಮ ಕೂಡಾ ನಡೆಯಲಿದ್ದು, ಮೆಟ್ರೋ ಸಂಚಾರ ಸ್ಥಗಿತ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀಳಲಿದೆ.



Read more

[wpas_products keywords=”deal of the day sale today offer all”]