Karnataka news paper

‘ಲಕ್ಷಣ’: ಭೂಪತಿ ಮುಂದೆ ಶ್ವೇತಾ ಪ್ಲಾನ್ ವರ್ಕೌಟ್ ಆಗುತ್ತಾ? ತುಕಾರಾಂ ಸಿಕ್ಕಿ ಬೀಳ್ತಾರಾ?


ಹೈಲೈಟ್ಸ್‌:

  • ಕುತೂಹಲ ಘಟ್ಟ ತಲುಪಿರುವ ‘ಲಕ್ಷಣ’ ಧಾರಾವಾಹಿ
  • ಶ್ವೇತಾಳ ಮಾಸ್ಟರ್ ಪ್ಲಾನ್ ವರ್ಕೌಟ್ ಆಗುತ್ತಾ?
  • ಭೂಪತಿ ಮುಂದೆ ತುಕಾರಾಂ ಸಿಕ್ಕಿ ಬೀಳ್ತಾರಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ ‘ಲಕ್ಷಣ’ (Lakshana) ಧಾರಾವಾಹಿಯ ಕಥೆ ವೇಗವಾಗಿ ಸಾಗುತ್ತಿದ್ದು, ಇದೀಗ ರೋಚಕ ಘಟ್ಟ ತಲುಪಿದೆ. ದುಡ್ಡಿನ ಆಸೆಗಾಗಿ ನಕ್ಷತ್ರಳನ್ನ ಮನೆಗೆ ವಾಪಸ್ ಕರೆದುಕೊಂಡು ಬರಲು ತುಕಾರಾಂ ಒಪ್ಪಿಕೊಂಡಿದ್ದಾರೆ. ತುಕಾರಾಂ ಜೊತೆ ಸೇರಿ ಶ್ವೇತಾ ಮಾಡಿರುವ ಪ್ಲಾನ್ ಭೂಪತಿಗೆ ಗೊತ್ತಾಗುತ್ತಾ ಎಂಬ ಕುತೂಹಲ ಸದ್ಯ ವೀಕ್ಷಕರಿಗೆ ಕಾಡುತ್ತಿದೆ.

ಶ್ವೇತಾಗೆ ನಕ್ಷತ್ರ ಕಂಟಕ
ತಾನು ಆರತಿ ಮತ್ತು ಚಂದ್ರಶೇಖರ್ ಅವರ ಪುತ್ರಿಯಲ್ಲ ಎಂಬ ಸತ್ಯ ಸಂಗತಿ ಶ್ವೇತಾಗೆ ಗೊತ್ತಾಗಿದೆ. ಜೊತೆಗೆ ಆರತಿ ಹಾಗೂ ಚಂದ್ರಶೇಖರ್ ಅವರ ನಿಜವಾದ ಮಗಳು ನಕ್ಷತ್ರ ಅನ್ನೋದೂ ಕೂಡ ಶ್ವೇತಾಳ ಅರಿವಿಗೆ ಬಂದಿದೆ. ಈ ಸತ್ಯ ಏನಾದರೂ ಆರತಿ ಮತ್ತು ಚಂದ್ರಶೇಖರ್‌ಗೆ ಗೊತ್ತಾದರೆ, ತಾನು ಬೀದಿಗೆ ಬೀಳುವುದು ಪಕ್ಕಾ ಅನ್ನೋದು ಶ್ವೇತಾ ಲೆಕ್ಕಾಚಾರ. ಹೀಗಾಗಿ, ತನ್ನ ಜನ್ಮರಹಸ್ಯವನ್ನು ಮುಚ್ಚಿಟ್ಟು ಕೋಟ್ಯಧಿಪತಿ ಭೂಪತಿಯನ್ನು ಮದುವೆಯಾಗುವುದು ಶ್ವೇತಾಳ ಪ್ಲಾನ್.

‘ಲಕ್ಷಣ’ ಧಾರಾವಾಹಿಯಲ್ಲಿ ಬೆಳ್ಳಗಿದ್ದವರನ್ನು ಕರೆದುಕೊಂಡು ಬಂದು ಕಪ್ಪಗೆ ಮಾಡ್ತೀರಾ ಅಂತ ಕಾಮೆಂಟ್ ಮಾಡ್ತಿದ್ರು: ವಿಜಯಲಕ್ಷ್ಮೀ
ಒಂದ್ಕಡೆ ಸತ್ಯ ಎಲ್ಲಿ ಹೊರೆಗೆ ಬರುತ್ತದೆ ಎಂಬ ಭಯ.. ಇನ್ನೊಂದು ಕಡೆ ನಕ್ಷತ್ರ ತನ್ನ ಮನೆಯಲ್ಲಿರುವುದು ಅಥವಾ ಭಾವಿ ಪತಿ ಭೂಪತಿ ಮನೆಯಲ್ಲಿರುವುದು ಶ್ವೇತಾಗೆ ಇಷ್ಟವಾಗುತ್ತಿಲ್ಲ. ಹೀಗಾಗಿ, ಭೂಪತಿ ಜೊತೆಗೆ ತನ್ನ ಮದುವೆ ನೆರವೇರುವವರೆಗೂ ನಕ್ಷತ್ರಳನ್ನ ಆಕೆಯ ಸಾಕು ತಂದೆ ತುಕಾರಾಂ ಮನೆಗೆ ಕಳುಹಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ ಶ್ವೇತಾ.

‘ಲಕ್ಷಣ’ ಧಾರಾವಾಹಿಯಲ್ಲಿ ಬಡವರು ಕೊಳಕರು, ಕೆಟ್ಟವರು ಅಂತ ತೋರಿಸಿಲ್ಲ: ನಟ ಜಗನ್ ಚಂದ್ರಶೇಖರ್
ನಕ್ಷತ್ರಳನ್ನ ಕಂಡರೆ ತುಕಾರಾಂ ಉರಿದುಬೀಳುತ್ತಿದ್ದರು. ಆದರೆ, ಲಕ್ಷಾಂತರ ರೂಪಾಯಿ ಕೊಡ್ತೀನಿ ಅಂತ ಶ್ವೇತಾ ಆಸೆ ತೋರಿಸಿರುವ ಪರಿಣಾಮ, ಕೆಲವು ದಿನಗಳ ಮಟ್ಟಿಗೆ ನಕ್ಷತ್ರಳನ್ನ ವಾಪಸ್ ಮನೆಗೆ ಕರೆದುಕೊಂಡು ಬರಲು ತುಕಾರಾಂ ಒಪ್ಪಿಕೊಂಡಿದ್ದಾರೆ. ಆದರೆ, ಈ ವಿಚಾರ ಯಾರಿಗೂ ಗೊತ್ತಿಲ್ಲ.

Lakshana Serial: ಏನು.. ಅಪಘಾತದಲ್ಲಿ ನಕ್ಷತ್ರ ತೀರಿಕೊಂಡ್ಲಾ?
ತುಕಾರಾಂ ಮಾತನ್ನ ಕೇಳಿ ನಕ್ಷತ್ರಳನ್ನ ಮನೆಗೆ ಕರೆದುಕೊಂಡು ಬರಲು ಪತ್ನಿ ಹಾಗೂ ಮಗಳು ಭೂಪತಿ ಮನೆಗೆ ಹೋಗಿದ್ದರು. ಆದರೆ, ನಕ್ಷತ್ರಳನ್ನ ಮನೆಗೆ ಕಳುಹಿಸಲು ಭೂಪತಿ ಒಪ್ಪಿಕೊಳ್ಳಲಿಲ್ಲ. ಇದೀಗ ತುಕಾರಾಂ ಖುದ್ದಾಗಿ ಭೂಪತಿ ಮನೆಗೆ ಬಂದಿದ್ದಾರೆ. ತುಕಾರಾಂ ಮಾತಿಗೆ ಮರುಳಾಗಿ ನಕ್ಷತ್ರಳನ್ನ ಭೂಪತಿ ಮನೆಗೆ ಕಳುಹಿಸಿಕೊಡುತ್ತಾರಾ? ಅಥವಾ ಭೂಪತಿ ಎದುರಿಗೆ ತುಕಾರಾಂ ಸಿಕ್ಕಿಬೀಳ್ತಾರಾ? ಈ ಮಾಸ್ಟರ್ ಪ್ಲಾನ್ ಮಾಡಿರೋದು ಶ್ವೇತಾ ಅಂತ ಭೂಪತಿಗೆ ಗೊತ್ತಾಗುತ್ತಾ? ಎಂಬ ಪ್ರಶ್ನೆಗಳು ಸದ್ಯ ವೀಕ್ಷಕರ ತಲೆಯಲ್ಲಿ ಓಡುತ್ತಿವೆ.

ಲಕ್ಷಣ: ನಿಶ್ಚಿತಾರ್ಥದ ದಿನವೇ ಶ್ವೇತಾಗೆ ದೊಡ್ಡ ಆಘಾತ: ಡಿಎನ್‌ಎ ರಿಪೋರ್ಟ್‌ನಲ್ಲಿ ಅಡಗಿದೆ ಸತ್ಯ!
ಎಲ್ಲಾ ಗೊತ್ತಿದ್ದರೂ ಸುಮ್ಮನಿರುವ ನಕ್ಷತ್ರ
ತನ್ನ ನಿಜವಾದ ತಂದೆ – ತಾಯಿ.. ಚಂದ್ರಶೇಖರ್ ಮತ್ತು ಆರತಿ ದಂಪತಿ ಅನ್ನೋದು ನಕ್ಷತ್ರಗೆ ಗೊತ್ತಾಗಿದೆ. ಆದರೆ, ಸತ್ಯವನ್ನು ಬಾಯ್ಬಿಟ್ಟು ಹೇಳಲು ಆಗದೆ ನಕ್ಷತ್ರ ಸುಮ್ಮನಿದ್ದಾಳೆ. ಶ್ವೇತಾ ಮತ್ತು ನಕ್ಷತ್ರಳ ಜನ್ಮ ರಹಸ್ಯ ಎಲ್ಲರ ಮುಂದೆ ಬಹಿರಂಗವಾಗುವುದು ಯಾವಾಗ..?

ಅಂದ್ಹಾಗೆ, ‘ಲಕ್ಷಣ’ ಧಾರಾವಾಹಿಯಲ್ಲಿ ಶ್ವೇತಾ ಆಗಿ ಸುಕೃತಾ ನಾಗ್, ಭೂಪತಿಯಾಗಿ ಜಗನ್ನಾಥ್ ಚಂದ್ರಶೇಖರ್, ನಕ್ಷತ್ರ ಆಗಿ ವಿಜಯಲಕ್ಷ್ಮೀ ಅಭಿನಯಿಸುತ್ತಿದ್ದಾರೆ. ‘ಲಕ್ಷಣ’ ಧಾರಾವಾಹಿಯನ್ನ ಜಗನ್ನಾಥ್ ಚಂದ್ರಶೇಖರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

ಜಾಹೀರಾತಿನಲ್ಲಿಯೂ ನೀವು ಕಪ್ಪಗಿರುವವರನ್ನು ನೋಡಲು ಚಾನ್ಸ್ ಇಲ್ಲ: ‘ಲಕ್ಷಣ’ ಧಾರಾವಾಹಿ ನಟಿ ವಿಜಯಲಕ್ಷ್ಮೀ



Read more