” ಔರಂಗಜೇಬ್ ಒಬ್ಬ ಮಹಾನ್ ಆಡಳಿತಗಾರನಾಗಿದ್ದ, ಅವನು ಎಷ್ಟೋ ದೇವಸ್ಥಾನಗಳನ್ನು ಜೀರ್ಣೋದ್ದಾರಗೊಳಿಸಿದ್ದಾನೆ, ಕಟ್ಟಿಸಿದ್ದಾನೆ ” ಎಂದು ಅಬು ಆಜ್ಮಿ ಹೇಳಿದ್ದರು. ಇವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆಯೇ, ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ. ನನ್ನ ಹೇಳಿಕೆಯನ್ನು ಅಪಾರ್ಥಗೊಳಿಸಲಾಗಿದೆ ಎಂದು ಹೇಳಿದ್ದರು.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇಂತಹ ಜನರನ್ನು ಹೇಗೆ ಸಹಿಸಿಕೊಳ್ಳುತ್ತೀರಿ? ಇವರ ವಿಚಾರದಲ್ಲಿ ನಿಮ್ಮ ಪಕ್ಷವನ್ನು ಸ್ಪಷ್ಟವಾದ ನಿಲುವನ್ನು ತಾಳಬೇಕು ಎಂದು ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಸಿಎಂ ಒತ್ತಾಯಿಸಿದ್ದರು.
” ನಿಮಗೆ ಸಾಧ್ಯವಾಗದೇ ಇದ್ದಲ್ಲಿ ಹೇಳಿ, ಅವರನ್ನು ಇಲ್ಲಿಗೆ ಕಳುಹಿಸಿ. ಉತ್ತರ ಪ್ರದೇಶ ಸರ್ಕಾರಕ್ಕೆ ಇಂತವರನ್ನು ಯಾವ ರೀತಿ ಡೀಲ್ ಮಾಡಬೇಕು ಎನ್ನುವುದು ಗೊತ್ತಿದೆ. ಒಂದು ಕಡೆ ಮಹಾ ಕುಂಭಮೇಳವನ್ನು ಟೀಕಿಸುತ್ತೀರಿ, ಇನ್ನೊಂದು ಕಡೆ ಮತಾಂಧ ಔರಂಗಜೇಬ್ ನನ್ನು ಹೊಗಳುತ್ತೀರಿ” ಎಂದು ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
ಔರಂಗಜೇಬನ ಕ್ರೌರ್ಯ ಮತ್ತು ಅಸಹಿಷ್ಣುತೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದೀರಾ? ದೇವಾಲಯವನ್ನು ನಾಶ ಪಡಿಸಿದ ವ್ಯಕ್ತಿ ನಿಮಗೆ ಮಹಾನ್ ನಾಯಕನೇ? ನಮ್ಮ ದೇಶದ ಕೋಟ್ಯಾಂತರ ಜನರ ನಂಬಿಕೆಯನ್ನು ಹಾಳುಗೆಡವಿದ ಕ್ರೂರಿ ನಿಮಗೆ ಹೀರೋನಾ? ಎನ್ನುವ ಸಾಲುಸಾಲು ಪ್ರಶ್ನೆಗಳನ್ನು ಯೋಗಿ ಆದಿತ್ಯನಾಥ್, ಸದನದಲ್ಲಿ ಸಮಾಜವಾದಿ ಪಾರ್ಟಿಯ ನಾಯಕರಿಗೆ ಕೇಳಿದ್ದಾರೆ.
ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ್ದ, ಲೆಕ್ಕವಿಲ್ಲದಷ್ಟು ಜನರನ್ನು ಹಿಂಸಾತ್ಮಕವಾಗಿ ಧರ್ಮ ಪರಿವರ್ತನೆಗೊಳಿಸಿದ್ದ ವ್ಯಕ್ತಿಯ ಬಗ್ಗೆ ನಿಮ್ಮ ಪಕ್ಷದ ನಾಯಕ ಹೆಮ್ಮೆಯಿಂದ ಮಾತನಾಡುತ್ತಾನೆ. ಅವರ ವಿರುದ್ದ ಕ್ರಮ ತೆಗೆದುಕೊಳ್ಳಲು ನಿಮಗೆ ಅಡ್ಡಿ ಆಗುತ್ತಿರುವುದೇನು ಎಂದು ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
ಅಬು ಆಜ್ಮಿಗೆ ನಮ್ಮ ದೇಶದ ಗ್ರಂಥಾಲಯಕ್ಕೆ ಹೋಗಿ, ಇತಿಹಾಸ ಓದಲು ಹೇಳಿ. ಷಹಜಹಾನ್‌ನ ಆತ್ಮಕಥೆಯನ್ನು ಅವರು ಓದಲಿ, ಹಿಂದೂ ಸಮುದಾಯದ ಮಗ ಔರಂಗಜೇಬನಿಗಿಂತ ಯಾಕೆ ಉತ್ತಮ, ತಂದೆತಾಯಿಗಳನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿಯುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
” ಹಿಂದೂ ಸಂಸ್ಕಾರದಲ್ಲಿ ಬೆಳೆದವರು ಅವರ ಪೋಷಕರನ್ನು ಆರೈಸುತ್ತಾನೆ, ಅವರ ಅಂತ್ಯಕ್ರಿಯೆಯನ್ನು ನಡೆಸುತ್ತಾನೆ. ಅವರ ಆತ್ಮಗಳಿಗೆ ತರ್ಪಣವನ್ನು ಕೊಡುತ್ತಾನೆ. ನಿಮಗೆ, ಅಬು ಆಜ್ಮಿಯ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದೇ ಇದ್ದರೆ ಹೇಳಿ, ಅವರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿ, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ. ನಮ್ಮಲ್ಲಿ ಇಂತಹ ಜನರನ್ನು ನಿಭಾಯಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮರಾಠ ಆಡಳಿತಗಾರ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಔರಂಗಜೇಬನ ಜೀವನವನ್ನು ಚಿತ್ರಿಸುವ ವಿಕ್ಕಿ ಕೌಶಲ್ ಅಭಿನಯದ ಚಾವಾ ಚಿತ್ರ ತೆರೆಗೆ ಬಂದ ಸಮಯದಲ್ಲಿ ಆಜ್ಮಿ ಅವರ ಹೇಳಿಕೆಗಳು ವಿವಾದವನ್ನು ಸೃಷ್ಟಿಸಿತ್ತು. ಅಬು ಆಜ್ಮಿ ತಮ್ಮ ಹೇಳಿಕೆಯನ್ನು ಈಗಾಗಲೇ ವಿಡಿಯೋ ಮೂಲಕ ಹಿಂಪಡೆದಿದ್ದಾರೆ ಮತ್ತು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎನ್ನುವ ಸ್ಟ್ಯಾಂಡರ್ಡ್ ಹೇಳಿಕೆಯನ್ನು ಆಜ್ಮಿ ನೀಡಿದ್ದಾರೆ. ಆದರೂ, ಈ ವಿವಾದ ತಣ್ಣಗಾಗುತ್ತಿಲ್ಲ.
Read more
[wpas_products keywords=”deal of the day sale today offer all”]