ಜನಗಣತಿಯೇ ಅಡ್ಡಿ
“ಜನಗಣತಿ ಸಂದರ್ಭದಲ್ಲಿ ಯಾವ ರಾಜ್ಯಗಳೂ ಹೊಸ ಕಂದಾಯ ಜಿಲ್ಲೆ ಘೋಷಿಸಬಾರದು ಎಂದು ಕೇಂದ್ರ ಸರ್ಕಾರದ ನಿಯಮವಿದೆ. ಅಲ್ಲದೆ ರಾಜ್ಯ ಸರ್ಕಾರದ ಮುಂದೆಯೂ ಯಾವುದೇ ಹೊಸ ಜಿಲ್ಲೆ ಅಥವಾ ತಾಲೂಕು ರಚನೆಯ ಪ್ರಸ್ತಾವನೆ ಇಲ್ಲ” ಎಂದು ಕೃಷ್ಣ ಬೈರೇಗೌಡ ಹೇಳಿದರು. ನಂತರ ಮಾತು ಮುಂದುವರೆಸಿ “ಒಂದೆರಡು ತಾಲೂಕುಗಳಿಂದ ಜಿಲ್ಲಾ ಕೇಂದ್ರ ರಚನೆಯ ಕೋರಿಕೆ ಇದೆ. ಭವಿಷ್ಯದಲ್ಲಿ ಇಂತಹ ಸಾಧ್ಯತೆ ಎದುರಾದರೆ ಖಂಡಿತ ಇಂಡಿ ತಾಲೂಕನ್ನು ಪರಿಗಣಿಸಲಾಗುವುದು” ಎಂದು ಭರವಸೆ ನೀಡಿದರು.
‘ಇಂಡಿ ತಾಲೂಕು ಪರಿಗಣಿಸುತ್ತೇವೆ’
ಮಂಗಳವಾರ ಗಮನ ಸೆಳೆಯುವ ಸೂಚನೆಯಲ್ಲಿ ಮಾತನಾಡಿದ ಅವರು, “ಸದ್ಯಕ್ಕೆ ಯಾವುದೇ ಹೊಸ ಜಿಲ್ಲೆ ರಚನೆಯ ಪ್ರಸ್ತಾಪವಿಲ್ಲ. ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ವಿ ಪಾಟೀಲ್ ಅವರು ತಮ್ಮ ಕ್ಷೇತ್ರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಹೊಸ ಜಿಲ್ಲೆಗಳ ರಚನೆ ಸಂದರ್ಭ ಬಂದಾಗ ಅವರ ಮನವಿಯನ್ನು ಪರಿಗಣಿಸುತ್ತೇವೆ” ಎಂದು ತಿಳಿಸಿದರು.
ಯಾವ ಯಾವ ಜಿಲ್ಲೆಗಳ ರಚನೆಗೆ ಕೂಗು?
ಪ್ರಸ್ತುತ 31 ಜಿಲ್ಲೆಗಳ ಪೈಕಿ ಉತ್ತರ ಕರ್ನಾಟಕದ ಜಿಲ್ಲೆಗಳ ವಿಭಜನೆಯ ಕೂಗು ಹೆಚ್ಚಾಗಿದ್ದು, ಅತಿ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜಿಸಿ ಬೈಲಹೊಂಗಲ ಅಥವಾ ಗೋಕಾಕ್ ಜಿಲ್ಲೆಗಳಾಗಿ ಮಾಡಬೇಕೆಂಬ ಕೂಗು ಇದೆ. ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಗಳ ರಚನೆಗೆ ಬೇಡಿಕೆಯಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ, ಮೈಸೂರಿನ ಹುಣಸೂರು, ತುಮಕೂರಿನ ಮಧುಗಿರಿ, ತಿಪಟೂರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಜಿಲ್ಲೆಗಳಾಗಬೇಕು ಎಂಬುದು ಜನರ ಆಗ್ರಹವಾಗಿದೆ.
Read more
[wpas_products keywords=”deal of the day sale today offer all”]