ಅಂದಹಾಗೆ ವಿಶ್ವ ಶ್ರೇಷ್ಠ ಆಸ್ಟ್ರೇಲಿಯಾದ ವಿರುದ್ಧ ಟೀಮ್ ಇಂಡಿಯಾ ನಾಕೌಟ್ ಸವಾಲನ್ನು ಮೀರಿದ್ದು ಹೇಗೆ ಎಂಬ ಪ್ರಶ್ನೆ ಕಾಡದಿರದು. ಅದಕ್ಕಿಲ್ಲಿದೆ ಉತ್ತರ. ಮೊದಲ 3 ಓವರ್‌ಗಳಲ್ಲಿ ಕೂಪರ್ ಅವರನ್ನು ಔಟ್ ಮಾಡಿದ ಭಾರತ, ಆರಂಭಿಕ ಜತೆಯಾಟಕ್ಕೆ ತಡೆಯೊಡ್ಡಿತು. ಚೆಂಡು ಕೂಪರ್ ಅವರ ಬ್ಯಾಟ್ ಸವರಿ ನೇರವಾಗಿ ಕೀಪರ್ ರಾಹುಲ್ ಅವರ ಕೈಸೇರಿತು. ಅಂಪೈರ್ ಔಟೆಂದು ತೀರ್ಪಿತ್ತರು. ಆದರೆ ಬ್ಯಾಟರ್ 3ನೇ ಅಂಪೈರ್‌ನತ್ತ ಮುಖ ಮಾಡಿದರು. ತೀರ್ಪು ಭಾರತದ ಪರ ಇತ್ತು. ಮೊದಲ ಪವರ್ ಪ್ಲೇ ಅವಧಿಯಲ್ಲಿ ಟ್ರಾವಿಸ್ ಹೆಡ್ (39 ರನ್) ಸ್ಫೋಟಕ ಆಟಕ್ಕೆ ಒತ್ತು ನೀಡಿದರೂ 50 ರನ್ ಒಳಗೆ ಅಗ್ರ ಕ್ರಮಾಂಕದ ಇಬ್ಬರನ್ನು ಔಟ್ ಮಾಡಿದ್ದು ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಿಸಿತು.
ಆಸೀಸ್‌ನ ಬ್ಯಾಟಿಂಗ್ ಬಲವಾಗಿದ್ದ ಲಾಬುಶೇನ್, ಇಂಗ್ಲಿಸ್, ಮ್ಯಾಕ್ಸ್‌ವೆಲ್ ಅವರನ್ನು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾದರು. ಸ್ಪಿನ್‌ಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ವೇಗ ಮತ್ತು ಸ್ಪಿನ್ ಎರಡರಲ್ಲೂ ಭಾರತ ಪಾರಮ್ಯ ಸಾಧಿಸಿತು. ವೇಗಿಗಳು ಮತ್ತು ಸ್ಪಿನ್ನರ್‌ಗಳು ಕ್ರಮವಾಗಿ 4 ಮತ್ತು 5 ವಿಕೆಟ್ ಹಂಚಿಕೊಂಡರು.
ನಾಕೌಟ್‌ನಂತಹ ಮಹತ್ವದ ಪಂದ್ಯದಲ್ಲಿ 250 ರನ್ ಆಸುಪಾಸಿನಲ್ಲಿ ಆಸೀಸ್ ತಂಡವನ್ನು ನಿಯಂತ್ರಿಸಿದ್ದು ಭಾರತೀಯರ ಪಾಳಯದಲ್ಲಿ ನಿರಾಳ ಮೂಡಿಸಿದರೆ, ಆಸೀಸ್ ತಂಡದಲ್ಲಿ ಸೋಲಿನ ಭೀತಿ ಹುಟ್ಟಿಸಿತು. ಟೀಮ್ ಇಂಡಿಯಾದ ಆರಂಭಿಕರು ನಿರಾಸೆ ಮೂಡಿಸಿದರೂ ವಿರಾಟ್ ಕೊಹ್ಲಿ (84) ಮತ್ತು ಶ್ರೇಯಸ್ ಅಯ್ಯರ್ (45) ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರು. ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು 5ನೇ ಕ್ರಮಾಂಕಕ್ಕೆ ಮುಂಬಡ್ತಿ ನೀಡಲಾಯಿತು. 27 ರನ್ ಗಳಿಸಿದ ಅವರು ತಂಡದ ಒತ್ತಡವನ್ನು ತಗ್ಗಿಸಿದರು.
ಬಳಿಕ 225ಕ್ಕೆ 5 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಹೊರತಾಗಿಯೂ ಕೆ.ಎಲ್. ರಾಹುಲ್(42 ಅಜೇಯ) ಮತ್ತು ಹಾರ್ದಿಕ್ ಪಾಂಡ್ಯ (28) ಅನುಭವದ ಆಟದೊಂದಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಒಂದೇ ಪಿಚ್‌ನಲ್ಲಿ ಗುಂಪು ಹಂತದ ಮೂರು ಪಂದ್ಯಗಳು ಸೇರಿ ಸೆಮಿ ಫೈನಲ್ ಪಂದ್ಯ ಆಡಿದ್ದು, ರೋಹಿತ್ ಶರ್ಮ ಬಳಗಕ್ಕೆ ನೆರವಾಯಿತು.
Read more
[wpas_products keywords=”deal of the day sale today offer all”]