ಶ್ರೀ ಮಠದ ಆಶೀರ್ವಾದದಿಂದ, ಯೋಗ್ಯ ವ್ಯಕ್ತಿ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಈಗಲೇ ರಾಜಕಾರಣದಲ್ಲಿ ಪ್ರತಿನಿತ್ಯ ಚರ್ಚೆ ನಡೆಯುತ್ತಿದೆ. ಎಲ್ಲಾ ಭಗವಂತರ ಆಶೀರ್ವಾದ ಸಿಗಲಿ, ಎಲ್ಲರೂ ಹೇಳುವಂತೆ, ಎಲ್ಲರ ಸಂಕಲ್ಪದಂತೆ ಬಡವರ, ರೈತರ ಪ್ರೀತಿ ವಿಶ್ವಾಸ ಗಳಿಸಿ ಉತ್ತಮ ವ್ಯಕ್ತಿಯಾಗಿ ಬಾಳಲಿ ಎಂದು ಆಶೀರ್ವಾದ ಮಾಡುವುದಾಗಿ ಹೇಳಿದ್ದಾರೆ. ರಾಜ ಪ್ರತ್ಯಕ್ಷ ದೇವನಂತೆ ಡಿಕೆ ಶಿವಕುಮಾರ್ ಬಾಳಲಿ ಎಂದು ಹರಸಿದ್ದಾರೆ.
ಧರ್ಮದೃಷ್ಟಿಯಿಂದ ಮಠಕ್ಕೆ ಬರುವ ಭಕ್ತರು ಅವರು. ರಾಜ ಪ್ರತ್ಯಕ್ಷ ದೇವರು ಎಂದು ನಂಬುವ ನಾವು, ಡಿಕೆಶಿಯವರಲ್ಲಿ ರಾಜಕೀಯ ಮುತ್ಸದ್ದಿತನವನ್ನು ನೋಡುತ್ತಿದ್ದೇವೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಆಗಿದ್ದಾರೆ. ಸೌಹಾರ್ದತೆಯ ರಾಜಪುತ್ರ ಅವರಾಗಿದ್ದು, ಸಮಾಜದ ಕಣ್ಮನಿಯಾಗಿ ಬೆಳೆಯಲಿದ್ದಾರೆ. 140 ವರ್ಷಕ್ಕೊಮ್ಮೆ ಆಗುವ ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದ್ದಾರೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಭವಿಷ್ಯ ನುಡಿದಿದ್ದ ಶ್ರೀ!
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ನೊಣವಿನಕೆರೆ ಕಾಡಾಸಿದ್ಧೇಶ್ವರ ಮಠಾಧ್ಯಕ್ಷರಾಗಿರುವ ಡಾ. ಕರಿವೃಷಭ ದೇಶೀಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿ 2023 ರಲ್ಲಿಯೂ ಮಂಡ್ಯದಲ್ಲಿ ಭವಿಷ್ಯ ನುಡಿದಿದ್ದರು.
ಮಠದ ಪರಮಭಕ್ತರಾಗಿರುವ ಡಿಕೆಶಿ ತುಮಕೂರು ಜಿಲ್ಲೆಯ ತಿಪಟೂರಿನ ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪರಮ ಭಕ್ತರಾಗಿರುವ ಡಿಕೆ ಶಿವಕುಮಾರ್ ಅವರು ಆಗಾಗ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿರುತ್ತಾರೆ. ಯಾವುದೇ ಪ್ರಮುಖ ನಿರ್ಧಾರ ತಳೆಯುವ ಮುನ್ನ ಅವರು ಶ್ರೀಗಳ ಬಳಿ ಕೇಳಿಯೇ ಮುಂದುವರಿಯುತ್ತಾರೆ. ಪ್ರತಿಯೊಂದು ಕಾರ್ಯತಂತ್ರ ರೂಪಿಸುವ ಮುನ್ನವೂ ಶ್ರೀಗಳ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ ಎಂದಿದ್ದರು. ಅಲ್ಲದೆ ವಿಧಾನಸಭಾ ಚುನಾವಣೆ ವೇಳೆ ನೊಣವಿನಕೆರೆ ಅಜ್ಜಯ್ಯನಿಗೆ ನಮಿಸಿದ ಬಳಿಕವೇ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಫಾರಂ ಹಂಚಿದ್ದರು.
Read more
[wpas_products keywords=”deal of the day sale today offer all”]