‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್’ (ಜಿಬಿಡಿ)-2021 ಹೆಸರಿನ ಈ ಅಧ್ಯಯನ ವರದಿಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಂಶೋಧಕರೂ ಪಾಲ್ಗೊಂಡಿದ್ದರು.
3.8 ಶತಕೋಟಿ
2050ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ 1.8 ಶತಕೋಟಿ ಪುರುಷರು ಹಾಗೂ 1.9 ಶತಕೋಟಿ ಮಹಿಳೆಯರು ಅಧಿಕ ತೂಕದಿಂದ ಬಳಲಲಿದ್ದು, ಒಟ್ಟು 3.8 ಶತಕೋಟಿ ಜನರು ಬೊಜ್ಜಿನ ಸಮಸ್ಯೆಯಿಂದ ಬಳಲಲಿದ್ದಾರೆ. ಚೀನಾ, ಭಾರತ ಮತ್ತು ಅಮೆರಿಕದಲ್ಲಿ ಬೊಜ್ಜಿನ ವ್ಯಕ್ತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಎಂದು ವರದಿ ಹೇಳಿದೆ.
ಮಕ್ಕಳಲ್ಲೂ ಕಾಡಲಿದೆ
ಭಾರತದಲ್ಲಿ2050ರ ಹೊತ್ತಿಗೆ 5ರಿಂದ 14 ವರ್ಷದೊಳಗಿನ 3 ಕೋಟಿ ಮಕ್ಕಳು ಸ್ಥೂಲಕಾಯದಿಂದ ಸಮಸ್ಯೆಗಳನ್ನು ಎದುರಿಸಲಿದ್ದಾರೆ ಎಂದೂ ವರದಿ ತಿಳಿಸಿದೆ. 15-24 ವಯೋಮಾನದವರನ್ನೂ ಇದು ಕಾಡಲಿದ್ದು, ದೇಶಕ್ಕೆ ಇದು ಆರ್ಥಿಕವಾಗಿ ಹೊರೆಯಾಗಲಿದೆ ಎಂದು ವರದಿ ಎಚ್ಚರಿಸಿದೆ.
ಸ್ಥೂಲಕಾಯದ ವಿರುದ್ಧ ಹೋರಾಡಲು ಮೋದಿ ಕರೆ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ರೇಡಿಯೊ ಭಾಷಣದಲ್ಲಿ ಸ್ಥೂಲಕಾಯದ ವಿರುದ್ಧ ಹೋರಾಡುವಂತೆ ಭಾರತೀಯರಿಗೆ ಕರೆ ನೀಡಿದ್ದರು. ಸದೃಢ ಹಾಗೂ ಆರೋಗ್ಯವಂತ ದೇಶ ನಿರ್ಮಿಸಲು ಸ್ಥೂಲಕಾಯ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕು ಎಂದಿದ್ದರು. ಆಹಾರದಲ್ಲಿ ಅಡುಗೆ ಎಣ್ಣೆಯನ್ನು ಶೇ.10ರಷ್ಟು ಕಡಿಮೆ ಬಳಕೆ ಮಾಡುವಂತೆ ಸೂಚಿಸಿದ್ದರು. ಅಲ್ಲದೇ ಈ ಕುರಿತ ಅಭಿಯಾನಕ್ಕೆ ಹಲವು ಖ್ಯಾತನಾಮರನ್ನು ರಾಯಭಾರಿಗಳನ್ನಾಗಿ ನೇಮಿಸಿದ್ದರು.
ಸ್ಥೂಲಕಾಯದಿಂದ ಏನು ಸಮಸ್ಯೆ?
- ಚಯಾಪಚಯ ಕ್ರಿಯೆಯಲ್ಲಿತೊಂದರೆ, ಹೃದಯ ಸಂಬಂಧಿ ಸಮಸ್ಯೆ ಹೆಚ್ಚಳ
- ಬಿಪಿ, ಶುಗರ್ ಸೇರಿದಂತೆ ನಾನಾ ಕಾಯಿಲೆಗಳಿಂದ ಬಳಲುವ ಸಂಭವ
- ದೈಹಿಕವಾಗಿ ಕೆಲಸ ಮಾಡುವ ಸಾಮರ್ಥ್ಯ ಕುಂಠಿತ
- ಭಾರಿ ಸಂಖ್ಯೆಯ ಯುವಜನರು ಬೊಜ್ಜಿನ ಸಮಸ್ಯೆಗೆ ತುತ್ತಾದರೆ ಒಟ್ಟಾರೆಯಾಗಿ ದೇಶದ ಉತ್ಪಾದಕತೆಗೂ ಹೊಡೆತ
Read more
[wpas_products keywords=”deal of the day sale today offer all”]