ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ಮಾಡಿಕೊಂಡ ಒಪ್ಪಂದದಂತೆ ಭಾರತ ತಂಡ ಫೈನಲ್ ಪ್ರವೇಶಿಸಿದರೆ, ಅದನ್ನು ದುಬೈನಲ್ಲೇ ಆಯೋಜನೆ ಮಾಡಬೇಕಿತ್ತು. ಅದರಂತೆ ಇದೀಗ ಭಾರತ ತಂಡ ಫೈನಲ್ ಪ್ರವೇಶಿಸಿದ್ದು, ಮಾ.9(ಭಾನುವಾರ) ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಫೈನಲ್ ಪಂದ್ಯ ಆಡಲಿದೆ.
ಭದ್ರತಾ ಕಾರಣಗಳಿಗಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡಕ್ಕೆ ಪಾಕಿಸ್ತಾನ ಪ್ರವಾಸ ಮಾಡಲು ಅವಕಾಶ ನಿರಾಕರಿಸಲಾಗಿತ್ತು. ಇದಿರಂದ ಕೆರಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ), ಭಾರತ ತಂಡವನ್ನು ಹೊರಗಿಟ್ಟು ಪಂದ್ಯಾವಳಿಯನ್ನು ಆಯೋಜಿಸುವ ಬಗ್ಗೆ ಮಾತನಾಡಿತ್ತು.
ಆದರೆ ನಂತರ ಐಸಿಸಿ ಜೊತೆಗಿನ ಮಾತುಕತೆ ಬಳಿಕ, ಭಾರತ ತಂಡದ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಯೋಜನೆ ಮಾಡಲು ಪಿಸಿಬಿ ಒಪ್ಪಿಗೆ ಸೂಚಿಸಿತು. ಆದರೆ ಭವಿಷ್ಯದಲ್ಲಿ ಪಾಕಿಸ್ತಾನ ತಂಡ ಕೂಡ ಯಾವುದೇ ಐಸಿಸಿ ಪಂದ್ಯಾವಳಿಗಳಿಗಾಗಿ ಭಾರತ ಪ್ರವಾಸ ಮಾಡುವುದಿಲ್ಲ ಎಂದು ಪಿಸಿಬಿ ಸ್ಪಷ್ಟಪಡಿಸಿತ್ತು.
ಒಪ್ಪಂದದಂತೆ ಭಾರತದ ಎಲ್ಲಾ ಪಂದ್ಯಗಳನ್ನು ದುಬೈನಲ್ಲೂ ಮತ್ತು ಉಳಿದ ತಂಡದ ಎಲ್ಲಾ ಪಂದ್ಯಗಳನ್ನು ವೇಳಾಪಟ್ಟಿಗೆ ಅನುಸಾರವಾಗಿ ಪಾಕಿಸ್ತಾನದ ವಿವಿಧ ಮೈದಾನಗಳಲ್ಲಿ ಆಯೋಜನೆ ಮಾಡಲಾಗಿತ್ತು. ಒಂದು ವೇಳೆ ಭಾರತ ಫೈನಲ್‌ಗೆ ಪ್ರವೇಶಿಸದಿದ್ದರೆ, ಫೈನಲ್ ಪ್ರವೇಶಿಸುವ ತಂಡಗಳ ಪಂದ್ಯವನ್ನು ಪಾಕಿಸ್ತಾನದ ಲಾಹೋರ್‌ನ ಗಢಾಫಿ ಮೈದಾನದಲ್ಲಿ ಆಯೋಜನೆ ಮಾಡುವ ತೀರ್ಮಾನ ಮಾಡಲಾಗಿತ್ತು.
ಆದರೀಗ ಭಾರತ ತಂಡವು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ, ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಭಾರತ ಒಟ್ಟು ನಾಲ್ಕು ಪಂದ್ಯಗಳನ್ನು ದುಬೈ ಮೈದಾನದಲ್ಲಿ ಆಡಿದ್ದು, ಎಲ್ಲಾ ನಾಲ್ಕು ಪಂದ್ಯಗಳನ್ನೂ ಗೆದ್ದುಕೊಂಡಿದೆ. ಈ ಪೈಕಿ ಪಾಕಿಸ್ತಾನದ ವಿರುದ್ಧದ ಪಂದ್ಯವೂ ಸೇರಿದೆ.
ಒಟ್ಟಿನಲ್ಲಿ ದಶಕಗಳ ಬಳಿಕ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶ ಪಡೆದಿದ್ದ ಪಾಕಿಸ್ತಾನ, ಅದ್ದೂರಿ ಫೈನಲ್ ಆಯೋಜನೆ ಮಾಡುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡುವ ಕನಸು ಕಂಡಿತ್ತು. ಆದರೆ ಭಾರತ ತಂಡವು ಫೈನಲ್‌ಗೆ ಏರುವ ಮೂಲಕ, ಪಾಕಿಸ್ತಾನದ ಈ ಕನಸನ್ನು ನುಚ್ಚುನೂರು ಮಾಡಿದೆ.
Read more
[wpas_products keywords=”deal of the day sale today offer all”]