ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಅಕ್ರಮ ಚಿನ್ನತಂದ ಆರೋಪದಲ್ಲಿ ಸಿನಿಮಾ ನಟಿ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.ರನ್ಯಾ ರಾವ್ ಅವರು ದುಬೈನಿಂದ ಬೆಂಗಳೂರಿಗೆ ಮಾರ್ಚ್ 3 ರ ರಾತ್ರಿ ಹಿಂದಿರುಗಿದ್ದರು. ಪ್ರಯಾಣಿಕರ ತಪಾಸಣೆ ನಡೆಸಿದಂತೆ ಇವರ ತಪಾಸಣೆಯೂ ನಡೆದಿದ್ದು, ಈ ವೇಳೆ ವಿದೇಶದಿಂದ ಹೆಚ್ಚುವರಿ ಚಿನ್ನ ತಂದಿದ್ದಾರೆ. ಈ ಆರೋಪದ ಮೇಲೆ ನಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುದೀಪ್ ಜತೆ ನಟನೆ
ನಟಿ ರನ್ಯಾ ರಾವ್ ಡಿಜಿಪಿ ರಾಮಚಂದ್ರ ರಾವ್ ಸಂಬಂಧಿಯಾಗಿದ್ದಾರೆ. ಇವರು ಅವರು ಮೂಲತಃ ಚಿಕ್ಕಮಗಳೂರಿನವರು. 2014 ರಲ್ಲಿ ಕಿಚ್ಚ ಸುದೀಪ್ ನಟನೆಯ ಮಾಣಿಕ್ಯ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆ ಬಳಿಕ ತಮಿಳು ಸಿನಿಮಾದಲ್ಲಿ ಕೂಡ ನಟನೆ ಮಾಡಿದ್ದರು.
Read more
[wpas_products keywords=”deal of the day sale today offer all”]