ಪುಟ್ಟೇನಹಳ್ಳಿ ನಿವಾಸಿ ರಾಜೇಂದ್ರ ಸಿ ಪಾಟೀಲ್ ಅವರು ಜಯನಗರ 8ನೇ ಬ್ಲಾಕ್‌ನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 2021ರ ಜೂನ್ 5ರಂದು ವೈಯಕ್ತಿಕ ಲಾಕರ್ ಸೇವೆ ತೆಗೆದುಕೊಂಡಿದ್ದರು. ಅವರು ಆ ಲಾಕರ್‌ನಲ್ಲಿ ಚಿನ್ನಾಭರಣ ಹಾಗೂ ಕೆಲ ವೈಯಕ್ತಿಕ ದಾಖಲೆ ಪತ್ರಗಳನ್ನು ಇಟ್ಟಿದ್ದರು.
2024ರ ಜೂನ್ 6, ಜುಲೈ 31 ಮತ್ತು ಅಕ್ಟೋಬರ್ 7ರಂದು ಲಾಕರ್ ತೆರೆದಿದ್ದರು. ತಮ್ಮ ಬಳಿಯಿದ್ದ ಒಂದು ಕೀ ಮತ್ತು ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ರಾಜು ಅವರ ಬಳಿಯಿದ್ದ ಮಾಸ್ಟರ್ ಕೀ ಬಳಸಿ ಲಾಕರ್ ತೆರೆದು ರಾಜೇಂದ್ರ ಸಿ ಪಾಟೀಲ್ ಪರಿಶೀಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಾಕರ್‌ನಲ್ಲಿ ಈಗ ನಕಲಿ ಆಭರಣ
ರಾಜೇಂದ್ರ ಸಿ ಪಾಟೀಲ್ ಅವರು ಕೊನೆಯದಾಗಿ 2024ರ ಅಕ್ಟೋಬರ್ 7ರಂದು ಲಾಕರ್ ತೆರೆದಿದ್ದಾಗ ಆಭರಣಗಳು ಇದ್ದವು. ಬಳಿಕ 2025ರ ಫೆಬ್ರವರಿ 20ರಂದು ಲಾಕರ್ ತೆರೆದು ನೋಡಿದಾಗ ಅಸಲಿ ಆಭರಣಗಳು ನಾಪತ್ತೆಯಾಗಿದ್ದವು. ಅಸಲಿ ಆಭರಣಗಳ ಬದಲು ನಕಲಿ ಆಭರಣಗಳನ್ನು ಲಾಕರ್‌ನಲ್ಲಿ ಇಟ್ಟಿರುವುದು ಗೊತ್ತಾಗಿದೆ. ಈ ಸಂಬಂಧ ಅವರು ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ರಾಜುರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ರಾಜು, ಆಭರಣಗಳ ಬಗ್ಗೆ ಗೊತ್ತಿಲ್ಲ. ತಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
“ರಾಜುರ ಉಡಾಫೆ ಉತ್ತರದಿಂದ ಅಸಮಾಧಾನಗೊಂಡ ರಾಜೇಂದ್ರ ಸಿ ಪಾಟೀಲ್ ಅವರು ರಾಜು ಮತ್ತು ಬ್ಯಾಂಕ್‌ನ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ,” ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ಮಾಹಿತಿ ನೀಡಿದ್ದಾರೆ.
Read more
[wpas_products keywords=”deal of the day sale today offer all”]