ಏನಾಗಿದೆ ಅಂದರೆ ತೀರಾ ಇತ್ತೀಚಿಗೆ ರಣಹದ್ದುಗಳ ಸಂತತಿ ಕಡಿಮೆಯಾಗುತ್ತಿದೆ. ಇದರ ಉಳಿವಿಗಾಗಿಯೇ ಸರಕಾರ ರಾಮದೇವರ ಬೆಟ್ಟದಲ್ಲಿ ವನ್ಯಜೀವಿ ಧಾಮ ಸ್ಥಾಪಿಸಿದೆ. ಆದರೆ, ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಆರಂಭದಲ್ಲಿ ಧನಾತ್ಮಕವಾಗಿ ಆಗಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಮಾತ್ರ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಇದು ರಣಹದ್ದು ಪ್ರೇಮಿಗಳೂ ಹಾಗೂ ಪರಿಸರ ಪ್ರೇಮಿಗಳ ವಲಯದಲ್ಲಿ ಸಂತಸವನ್ನುಂಟು ಮಾಡಿದೆ.
ಎರಡರಿಂದ ಮೂರು ತಿಂಗಳು ಬೇಕು
ರಾಮದೇವರ ಬೆಟ್ಟದಲ್ಲಿ 15 ದಿನಗಳ ಹಿಂದೆ ಮರಿಗೆ ರಣಹದ್ದು ಜನ್ಮ ನೀಡಿದೆ. ಈ ಮರಿ ಸಾಮಾನ್ಯ ರಣಹದ್ದುಗಳಂತೆ ಹಾರಾಟ ನಡೆಸಲು ಇನ್ನು 2 ರಿಂದ 3 ತಿಂಗಳು ಬೇಕಾಗಿದೆ. ಹಾಗಾಗಿ ಈ ಸಣ್ಣ ಮರಿಯ ಚಲನವಲನ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಗಮನ ನೀಡಿದ್ದಾರೆ. ರಾಮದೇವರ ಬೆಟ್ಟ ರಣಹದ್ದು ವನ್ಯಜೀವಿಧಾಮದಲ್ಲಿ ಎರಡು ಜಾತಿಯ ರಣಹದ್ದು ಕಾಣಸಿಗುತ್ತವೆ. ಅದರಲ್ಲಿ ಉದ್ದ ಕೊಕ್ಕಿನ ರಣಹದ್ದು ಹಾಗೂ ಈಜಿಪ್ಟಿಯನ್ ರಣಹದ್ದುಗಳಾಗಿವೆ. ಇದರಲ್ಲಿ ಉದ್ದ ಕೊಕ್ಕಿನ ರಣಹದ್ದು ಸಂತತಿ ತೀರಾ ಕಡಿಮೆಯಾಗಿದೆ.
ಬೆಟ್ಟದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈ ಉದ್ದ ಕೊಕ್ಕಿನ ರಣಹದ್ದುಗಳು ಜನ್ಮ ನೀಡುತ್ತಿರುವುದು ಸಂತತಿ ಬೆಳವಣಿಗೆಗೆ ಕಾರಣವಾದರೆ, ಮತ್ತೊಂದೆಡೆ ಬೆಟ್ಟದಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ರಣಹದ್ದುಗಳು ಕಾಣಸಿಗುತ್ತಿವೆ. ಇನ್ನೊಂದು ಜತೆ ರಣಹ ದ್ದುಗಳು ಬೆಟ್ಟದ ತಾತ್ಕಾಲಿಕ ಅತಿಥಿಯಾಗಿದ್ದು, ಬಂದು ಹೋಗುವುದನ್ನು ಮಾಡುತ್ತಿವೆ ಎನ್ನಲಾಗುತ್ತಿದೆ. ಇನ್ನು ರಾಮದೇವರ ಬೆಟ್ಟದಲ್ಲಿ ಕಾಣಸಿಗುವ ಮತ್ತೊಂದು ಜಾತಿಯ ಈಜಿಪ್ಟಿಯನ್ ರಣಹದ್ದುಗಳು 50ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಂಡು ಬರುತ್ತವೆ. ರಾಮದೇವರ ಬೆಟ್ಟ, ಜಲಸಿದ್ದೇಶ್ವರ ಸ್ವಾಮಿ ಬೆಟ್ಟ ಹಾಗೂ ಸಾವನದುರ್ಗದಲ್ಲಿ ಈ ಜಾತಿಯ ರಣಹದ್ದುಗಳು ಕಾಣಸಿಗುತ್ತಿವೆ.
ಯಾಕಿಷ್ಟು ಮಹತ್ವ?
ರಣಹದ್ದುಗಳ ಸಂತಾನೋತ್ಪತ್ತಿಯ ಕ್ರಿಯೆ ಚಳಿಗಾಲದಲ್ಲಿ ಆರಂಭವಾಗುತ್ತದೆ. ಸಾಮಾನ್ಯವಾಗಿ ಪ್ರಶಾಂತ ಇರುವ ಸ್ಥಳದಲ್ಲಿ ಈ ಕ್ರಿಯೆ ನಡೆಯುತ್ತದೆ. ಆದರೆ, ಕಳೆದ ಮೂರು ವರ್ಷಗಳಿಂದ ರಾಮದೇವರ ಬೆಟ್ಟಕ್ಕೆ ಹೊಂದಿಕೊಂಡಂತೆ ಬೆಂಗಳೂರು ಮೈಸೂರು ನೂತನ ರಾಷ್ಟ್ರೀಯ ಹೆದ್ದಾರಿ ಇದೆ. ಇಲ್ಲಿ ವಾಹನ ಸಂಚಾರ ಹೆಚ್ಚಾಗಿಯೇ ಇರಲಿದೆ. ಇಷ್ಟೆಲ್ಲಾ ಅಡೆತಡೆಗಳಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಈ ಪ್ರಕ್ರಿಯೆ ಸತತವಾಗಿ ನಡೆಯುತ್ತಿದೆ. ಜತೆಗೆ, ಅಳಿವಿನಂಚಿನಲ್ಲಿರುವ ಜಾತಿಯ ರಣಹದ್ದುಗಳು ಮರಿ ಮಾಡುತ್ತಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ವರ್ಷದ ಮರಿ ಸೇರಿ ಎರಡು ಜೋಡಿಗಳು ಹಾಗೂ ಮೂರು ಮರಿ ಸೇರಿ ಒಟ್ಟು 8 ಉದ್ದ ಕೊಕ್ಕಿನ ರಣಹದ್ದುಗಳು ರಾಮದೇವರ ಬೆಟ್ಟದಲ್ಲಿ ನೋಡಲು ಸಿಗಲಿವೆ.
Read more
[wpas_products keywords=”deal of the day sale today offer all”]