ಮೆಟ್ರೋ ರೈಲು ಯೋಜನೆಯ ಹಂತ-2 ಎ ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರ ಮಾರ್ಗದವರೆಗಿನ ಹೊರವರ್ತುಲ ರಸ್ತೆಯ ಮಾರ್ಗದಲ್ಲಿ ಬರುವ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಕಂಪನಿ ಹೆಸರನ್ನು ಇಟ್ಟುಕೊಳ್ಳಲು ಒಪ್ಪಂದವಾಗಿದೆ.
ಈ ಬಗ್ಗೆ ಮಾಹಿತಿ ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ” ಎಂಬಸಿ ಆರ್‌ಇಐಟಿಯ ಭಾಗವಾಗಿರುವ ವಿಕಾಸ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ (ವಿಟಿಪಿಎಲ್) ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹೊಸ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಒಪಂದದಂತೆ ರೂ. 100 ಕೋಟಿ ನೀಡಲಿದ್ದು, ಮೆಟ್ರೋ ನಿಗಮವು 30 ವರ್ಷಗಳ ಅವಧಿಗೆ ಜಾಹೀರಾತು, ವಾಣಿಜ್ಯ ಸ್ಥಳ ಮತ್ತು ನೇರ ಸಂಪರ್ಕದ ಜೊತೆಗೆ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕುಗಳನ್ನು ನೀಡಲಿದೆ. ಹೊಸ ನಿಲ್ದಾಣವನ್ನು ‘ಎಂಬೆಸಿ ಟೆಕ್ ವಿಲೇಜ್ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ’ ಎಂದು ಮರು ನಾಮಕರಣ ಮಾಡಲಾಗುವುದು” ಎಂದು ತಿಳಿಸಿದೆ.
ನೀಲಿ ಮಾರ್ಗದಲ್ಲಿ 16 ನಿಲ್ದಾಣಗಳು
ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣವು 17 ಕಿ.ಮೀನ ಓ.ಆರ್.ಆರ್ ಮಾರ್ಗದ ಒಂದು ಭಾಗವಾಗಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ -2A ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂವರೆಗಿನ 16 ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಈ ಮಾರ್ಗವು ಬೆಂಗಳೂರಿನ ಎಲ್ಲಾ ಭಾಗಗಳ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಮೂಲಕ ಓ.ಆರ್.ಆರ್ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ವಾಹನ ಮಾಲಿನ್ಯದಿಂದ ಪರಿಸರದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಮುಖ ವಾಣಿಜ್ಯ ಮಾರ್ಗ
ಈ ಕುರಿತಿ ಬಿಎಂಆರ್‌ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಮಾತನಾಡಿ, ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆಗೆ ತಮ್ಮ ಬೆಂಬಲದೊಂದಿಗೆ ಎಂಬೆಸಿ REIT ಸಂಸ್ಥೆ ಮುಂದೆ ಬಂದಿರುವುದಕ್ಕೆ ನಮಗೆ ಅತ್ಯಂತ ಸಂತೋಷವಾಗಿದೆ. ಓ.ಆರ್.ಆರ್ ಕಾರಿಡಾರ್ ಬೆಂಗಳೂರಿನಲ್ಲಿ ಪ್ರಮುಖ ಚಲನಶೀಲ ಮಾರ್ಗವಾಗಿದೆ. ಪ್ರಮುಖ ವಾಣಿಜ್ಯ ಕೇಂದ್ರಗಳು, ಕಚೇರಿ ಉದ್ಯಾನವನಗಳು ಮತ್ತು ವಸತಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇಂತಹ ಸಹಭಾಗಿತ್ವಗಳು ಮೂಲಸೌಕರ್ಯ ಬೆಳವಣಿಗೆಯನ್ನು ವೇಗಗೊಳಿಸಲು ಸಹಕಾರಿಯಾಗಿದೆ ಮತ್ತು ನಗರಕ್ಕೆ ಹೆಚ್ಚು ಸುಲಭವಾಗಿ ಮತ್ತು ಸುಸ್ಥಿರವಾದ ಮೆಟ್ರೋ ಜಾಲವನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದರು.
ಒಪಂದದ ನಂತರ ಮಾತನಾಡಿದ ಎಂಬೆಸಿ ಆರ್‌ಇಐಟಿಯ ಸಿಇಒ ಋತ್ವಿಕ್, ಕಾಡುಬೀಸನಹಳ್ಳಿಯಲ್ಲಿ ಮೆಟ್ರೋ ನಿಲ್ದಾಣದ ಅಭಿವೃದ್ಧಿಗಾಗಿ ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಂಡಿರುವುದು ಸಂತಸವಾಗಿದೆ. ದೀರ್ಘಾವಧಿಯ ಹೂಡಿಕೆಗಳ ಮೂಲಕ ಬೆಂಗಳೂರಿನ ನಗರ ಮೂಲಸೌಕರ್ಯವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಈ ಮೆಟ್ರೋ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
Read more
[wpas_products keywords=”deal of the day sale today offer all”]