Karnataka news paper

ಹಾವೇರಿ ಪೊಲೀಸ್‌ ಶ್ವಾನ ಕನಕ ಸಾವು! ಹಂಪಿ ಉತ್ಸವದ ಕರ್ತವ್ಯಕ್ಕೆ ತೆರಳಿದ್ದ ವೇಳೆ ಅಪಘಾತ


ಹಾವೇರಿ: ಜಿಲ್ಲಾ ಪೊಲೀಸ್ ಘಟಕದ ಕಣ್ಣಾಗಿ ಕಾರ್ಯ ನಿರ್ವಹಿಸುತ್ತ ಪೊಲೀಸರ ಮೆಚ್ಚುಗೆ ಗಳಿಸಿದ್ದ ಶ್ವಾನ ಕನಕ ದುರಂತ ಅಂತ್ಯ ಕಂಡಿದೆ. ಹಂಪಿ ಉತ್ಸವದ ಕರ್ತವ್ಯಕ್ಕೆ ತೆರಳಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದು, ಸಕಲ ಸರಕಾರಿ ಗೌರವದೊಂದಿಗೆ ಶ್ವಾನದ ಅಂತ್ಯಕ್ರಿಯೆಯನ್ನು ಸೋಮವಾರ ನೆರವೇರಿಸಲಾಗಿದೆ.ಲ್ಯಾಬ್ರಡರ್ ರಿಟ್ರಿವರ್ ತಳಿಯ ಕನಕ 2019 ರ ಜನವರಿ 28ರಂದು ಜನಿಸಿತ್ತು. ಶ್ವಾನಕ್ಕೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿತ್ತು. ಬಾಂಬ್, ಸ್ಪೋಟಕ ಪತ್ತೆ ದಳದಲ್ಲಿ ಪರಿಣಿತಿ ಹೊಂದಿ, ಹಾವೇರಿ ಪೊಲೀಸ್ ಘಟಕದಲ್ಲಿ 2019ರ ಡಿಸೆಂಬರ್‌ನಿಂದ ಕರ್ತವ್ಯ ನಿರ್ವಹಿಸುತ್ತಿತ್ತು.

ಚುರುಕಾಗಿದ್ದ ಕನಕ

ಈ ಶ್ವಾನವು ಮೈಸೂರು ದಸರಾ, ಹಂಪಿ ಉತ್ಸವ, ಬೆಳಗಾವಿ ಅಧಿವೇಶನ, ವೈಮಾನಿಕ ಪ್ರದರ್ಶನ ಬೆಂಗಳೂರು, 2023 ರ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2024ನೇ ಸಾಲಿನ ಲೋಕಸಭಾ ಚುನಾವಣೆ ಕರ್ತವ್ಯ, ಪ್ರಧಾನ ಮಂತ್ರಿಗಳ ಬಂದೋಬಸ್ತ್ ಕರ್ತವ್ಯ ಹಾಗೂ ಅನೇಕ ಗಣ್ಯ ವ್ಯಕ್ತಿಗಳ ಬಂದೋಬಸ್ತ ಕರ್ತವ್ಯ ಹೀಗೆ ಒಟ್ಟು 80 ಕ್ಕಿಂತ ಹೆಚ್ಚು ಕಾರ್ಯಕ್ರಮಗಳ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿತ್ತು.

ದುರಂತ ಅಂತ್ಯ

ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಕರ್ತವ್ಯಕ್ಕೆ ಪೊಲೀಸ್ ತಂಡದೊಂದಿಗೆ ತೆರಳಿದ್ದ ಶ್ವಾನವು ಮಾರ್ಚ್ 2 ರಂದು ಬೆಳಗ್ಗೆ ವಾಕಿಂಗ್‍ಗೆ ತೆರಳಿದ ಸಂದರ್ಭದಲ್ಲಿ ಕಮಲಾಪುರ ಕಡೆಯಿಂದ ಬರುತ್ತಿದ್ದ ಸಿಂಧನೂರು ಡೀಪೋದ ಬಸ್, ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಶ್ವಾನಕ್ಕೆ ಡಿಕ್ಕಿ ಪಡಿಸಿದ್ದ ಗಂಭೀರವಾಗಿ ಗಾಯಗೊಂಡಿತ್ತು. ಶ್ವಾನವನ್ನು ಚಿಕಿತ್ಸೆಗೆ ಹೊಸಪೇಟೆ ಪಶು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ಕನಕ ಶ್ವಾನವು ಹಾವೇರಿ ಜಿಲ್ಲಾ ಪೊಲೀಸ್ ಘಟಕದಲ್ಲಿ ಪ್ರಮುಖ ಬಂದೋಬಸ್ತ್ ನಿರ್ವಹಣೆಯನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿದ್ದು ಕನಕ ಶ್ವಾನದ ನಿಧನಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ಘಟಕದಿಂದ ಸಂತಾಪ ಸೂಚಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಶ್ವಾನ ಕನಕನ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಗಿದೆ.



Read more

[wpas_products keywords=”deal of the day sale today offer all”]