‘ ಸಿಎಂ ಭೇಟಿ ಬಳಿಕ ಮಾತನಾಡಿದ ಅ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜು ನಾಥ್ “ ಸಿಎಂ ಭೇಟಿ ಮಾಡಿ ಬಂದಿದ್ದೇವೆ ಅವರಿಗೆ ನಮ್ಮ ಮೂರು ಪ್ರಮುಖ ಬೇಡಿಗಳನ್ನು ತಿಳಿಸಿದ್ದೇವೆ . ಏಪ್ರಿಲ್ ತಿಂಗಳ ಅಂತ್ಯದ ಒಳಗೆ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದಾರೆ. ಬಾಕಿಯಿರೋ 15 ಸಾವಿರ ಕೋಟಿಯನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಭರವಸೆ ನೀಡಿದ್ದಾರೆ’ ಎಂದರು.
ಒಂದು ವೇಳೆ ಭರವಸೆ ಈಡೇರಿಸದೆ ಇದ್ದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇವೆ. ಅದಕ್ಕೂ ಮೊದಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದೇವೆ. ಕಳೆದ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಕಮಿಷನ್ ಹೆಚ್ಚಾಗಿದೆ. ರಾಜಕಾರಣಿಗಳ ಹಂತದಲ್ಲಿ ಇಲ್ಲದಿದ್ದರೂ ಅಧಿಕಾರಿಗಳ ಹಂತದಲ್ಲಿ ಕಮಿಷನ್ ದಂಧೆ ಇದೆ ಎಂದು ಆರೋಪಿಸಿದರು.
ಕಮಿಷನ್ ದಂಧೆ ವಿರುದ್ಧ ಕ್ರಮದ ಭರವಸೆ
ಇನ್ನು ಸಿಎಂ ಸಿದ್ದರಾಮಯ್ಯ ಅವರ ಭೇಟಿ ಸಂದರ್ಭದಲ್ಲಿ ಕಮಿಷನ್ ದಂಧೆಯ ಬಗ್ಗೆ ಹೇಳಲಾಗಿದೆ. ನೇರವಾಗಿ ಕಾಂಗ್ರೆಸ್ ಸರ್ಕಾರದ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ ಗುತ್ತಿಗೆದಾರರ ಸಂಘಕ್ಕೆ ಕಮಿಷನ್ ದಂಧೆ ವಿಚಾರವಾಗಿ ಕ್ರಮಕೈಗೊಳ್ಳುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಕಮಿಷನ್ ದಂಧೆಯ ವಿರುದ್ಧ ಗುತ್ತಿಗೆದಾರ ಸಂಘ ಧ್ವನಿ ಎತ್ತಿತ್ತು. ದಿ. ಪೊನ್ನಣ್ಣ ಅವರ ನೇತೃತ್ವದಲ್ಲಿ ಗುತ್ತಿಗೆದಾರರ ಹೋರಾಟ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. 40% ಕಮಿಷನ್ ವಿಚಾರ ಮುಂದಿಟ್ಟುಗೊಂಡು ಕಾಂಗ್ರೆಸ್ ಗಮನ ಸೆಳೆಯುವ ಹೋರಾಟವನ್ನೂ ನಡೆಸಿತ್ತು. ಆದರೆ ಇದೀಗ ಗುತ್ತಿಗೆದಾರರ ಕಾಂಗ್ರೆಸ್ ಸರ್ಕಾರದ ವಿರುದ್ಧನೂ ಆರೋಪ ಮಾಡುತ್ತಿದ್ದಾರೆ.
Read more
[wpas_products keywords=”deal of the day sale today offer all”]