ಈ ಕುರಿತು ಮಾಹಿತಿ ನೀಡಿರುವ ಶಿಪ್ರಪಾತ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಜೇಂದ್ರ ಗೋದಾರಾ, “ಐಐಟಿ ಬಾಬಾ, ಉರ್ಫ್ ಅಭಯ್ ಸಿಂಗ್ ಇಲ್ಲಿನ ಕ್ಲಾಸಿಕ್ ಹೋಟೆಲ್‌ನಲ್ಲಿ ತಂಗಿರುವ ಬಗ್ಗೆ ನಮಗೆ ಖಚಿತ ಮಾಹಿತ ಬಂದಿತ್ತು. ಅವರು ಹೋಟೆಲ್‌ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಶಂಕೆ ಕೂಡ ವ್ಯಕ್ತಪಡಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ನಾವು ಕ್ಲಾಸಿಕ್ ಹೋಟೆಲ್ ಮೇಲೆ ದಾಳಿ ನಡೆಸಿ ಅಭಯ್ ಸಿಂಗ್‌ರನ್ನು ಬಂಧಿಸಿದೆವು..” ಎಂದು ಮಾಹಿತಿ ನೀಡಿದ್ದಾರೆ.
ಮುಂದುವರೆದು, “ನಾವು ಅಭಯ್ ಸಿಂಗ್‌ರನ್ನು ಬಂಧಿಸುವ ವೇಳೆ ತಾನು ಗಾಂಜಾ ಸೇವಿಸುತ್ತಿದ್ದು ನನ್ನ ಬಳಿ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಗಾಂಜಾ ಇದೆ ಎಂದು ಹೇಳಿದ್ದರು.ಕೂಡಲೇ ಅವರನ್ನು ಪರಿಶೀಲಿಸಿದಾಗ ಗಾಂಜಾ ಪ್ಯಾಕೆಟ್ ದೊರೆಯಿತು. ನಾವು ಸದ್ಯ ಅಭಯ ಸಿಂಗ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ..” ಎಂದು ಎಸ್‌ಎಚ್‌ಒ ರಾಜೇಂದ್ರ ಗೋದಾರಾ ಮಾಹಿತಿ ನೀಡಿದ್ದಾರೆ.
ಇನ್ನು ಪೊಲೀಸ್ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಐಐಟಿ ಬಾಬಾ, “ಇಂದು ನನ್ನ ಜನ್ಮದಿನವಾಗಿದ್ದು ನಾನು ಸಂತೋಷದಿಂದ ಇರಲು ಬಯಸುತ್ತೇನೆ..” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ದೇವರಾಣೆಗೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರಲಿಲ್ಲ. ಯಾರೋ ಕೆಲವರು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬುದು ನನ್ನ ಅನುಮಾನ. ಇಂದು ನನ್ನ ಜನ್ಮದಿನವಾಗಿದ್ದರಿಂದ ನಾನು ನಗುನಗುತ್ತಾ ಸಂತೋಷದಿಂದ ಇದ್ದೇನೆ..” ಎಂದು ಐಐಟಿ ಬಾಬಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಬಂಧನದ ವೇಳೆ ಗಾಂಜಾ ಸೇದುತ್ತಿದ್ದುದು ನಿಜವೇ ಎಂಬ ಪತ್ರಕರ್ತರ ಪ್ರಶ್ನೆಗೆ ನಕ್ಕು ಸುಮ್ಮನಾದ ಐಐಟಿ ಬಾಬಾ, “ನನ್ನನ್ನು ಹ್ಯಾಪಿಯಾಗಿರಲು ಬಿಡಿ..” ಎಂದು ಹೇಳಿದರು.
ಸದ್ಯ ಐಐಟಿ ಬಾಬಾ ಬಂಧನದ ವೇಳೆ ಗಾಂಜಾ ಪತ್ತೆಯಾಗಿದ್ದರೆ, ಆತನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಫಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಇತ್ತೀಚಿಗೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಐಐಟಿ ಬಾಬಾ, ಸಾಧು ಸಂತರಿಂದ ತಿರಸ್ಕಾರಕ್ಕೊಳಗಾಗಿದ್ದರು. ಅಲ್ಲದೇ ಚರ್ಚೆ ವೇಳೆ ಧಾಂಧಲೆ ನಡೆಸಿ ಸುದ್ದಿಯಾಗಿದ್ದರು.
ಒಟ್ಟಿನಲ್ಲಿ ಆರಂಭದಲ್ಲಿ ಬಹುದೊಡ್ಡ ಆಧ್ಯಾತ್ಮಿಕ ಜ್ಞಾನಿಯಂತೆ ಕಂಡುಬಂದಿದ್ದ ಐಐಟಿ ಬಾಬಾ, ನಂತರದ ದಿನಗಳಲ್ಲಿ ಓರ್ವ ಮಾನಸಿಕ ಅಸ್ವಸ್ಥ ಅಥವಾ ಮಾದಕ ವಸ್ತುಗಳ ದಾಸನ ರೀತಿಯಲ್ಲಿ ಬಿಂಬಿತವಾಗುತ್ತಿರುವುದು ವಿಪರ್ಯಾಸವೇ ಸರಿ.ii
Read more
[wpas_products keywords=”deal of the day sale today offer all”]