Karnataka news paper

ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ನಿಶ್ಚಯ ಎಂದ ವೀರಪ್ಪ ಮೊಯ್ಲಿ : ಕೆ.ಎನ್.ರಾಜಣ್ಣ ತಣ್ಣಗಿನ ಪ್ರತಿಕ್ರಿಯೆ


ಬೆಂಗಳೂರು : ಬಿಜೆಪಿಯಲ್ಲಿದ್ದ ಬಣ ರಾಜಕೀಯದ ಗಾಳಿ, ಕಾಂಗ್ರೆಸ್ ಕಡೆ ತಿರುಗಿದಂತೆ ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಮುಖ್ಯಮಂತ್ರಿ ಕುರ್ಚಿಯ ಪವರ್ ಶೇರಿಂಗ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ, ಹಿರಿಯ ಬಿಜೆಪಿ ನಾಯಕ ವೀರಪ್ಪ ಮೊಯ್ಲಿಯವರ ಹೇಳಿಕೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ, ಬಹಿರಂಗವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮೊಯ್ಲಿಯವರ ಹೇಳಿಕೆ ಅವರ ವೈಯಕ್ತಿಕ ಎಂದು ಹೇಳಿದ್ದಾರೆ.

ಡಿಸಿಎಂ ಶೀಘ್ರ ಸಿಎಂ ಆಗ್ತಾರೆ ಎಂಬ ವೀರಪ್ಪ ಮೊಯ್ಲಿ ಹೇಳಿಕೆಗೆ ಡಿಕೆ ಶಿವಕುಮಾರ್ ಬೆಟ್ಟು ಮಾಡಿದ್ದು ಇವರತ್ತಾ!

ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ವೇಳೆ ಮಾತನಾಡಿದ ರಾಜಣ್ಣ, ” ವೀರಪ್ಪ ಮೊಯ್ಲಿಯವರು ನಮ್ಮ ಕಾಂಗ್ರೆಸ್ಸಿನ ಹಿರಿಯ ನಾಯಕರು. ಮಾಜಿ ಮುಖ್ಯಮಂತ್ರಿಯೂ ಆಗಿರುವ ವೀರಪ್ಪನ್ ಸಂಸದರಾಗಿಯೂ ಕೆಲಸ ನಿರ್ವಹಿಸಿದವರು. ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಅವರು ನೀಡಿರುವ ಹೇಳಿಕೆ, ಅವರ ವೈಯಕ್ತಿಕವಾದದ್ದು” ಎಂದು ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಭಾನುವಾರ (ಮಾ.3) ಕಾಂಗ್ರೆಸ್ ಪಾರ್ಟಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೀರಪ್ಪ ಮೊಯ್ಲಿ, “ಡಿ.ಕೆ.ಶಿವಕುಮಾರ್ ಅವರು ಸದ್ಯದಲ್ಲೇ ಮುಖ್ಯಮಂತ್ರಿ ಆಗಬೇಕು. ಸಂಕಷ್ಟದಲ್ಲಿದ್ದ ಪಕ್ಷವನ್ನು ಅವರು ಮೇಲಕ್ಕೆತ್ತಿದ್ದರು. ಯಾರೇನೇ ಮಾಡಿದರೂ, ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಸಾಧ್ಯವಿಲ್ಲ” ಎಂದು ಮೊಯ್ಲಿ ಹೇಳಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೆ.ಎನ್.ರಾಜಣ್ಣ, ವೀರಪ್ಪ ಮೊಯ್ಲಿಯವರು ಏನೇ ಹೇಳಿಕೆ ನೀಡಿದರೂ, ಅದು ಅವರವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಮಾತಲ್ಲ. ಯಾಕೆಂದರೆ, ನಮ್ಮಲ್ಲಿ ಹೈಕಮಾಂಡ್ ಸಂಸ್ಕೃತಿಯಿದೆ. ಅವರು ತಮ್ಮ ಭಾವನೆ ವ್ಯಕ್ತ ಪಡಿಸಿದ್ದಕ್ಕೆ ನಾನು ಆಕ್ಷೇಪ ಎತ್ತಲು ಹೋಗುವುದಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಐದು ವರ್ಷ ಇರಬೇಕು ಎನ್ನುವುದೂ ಇದೆ. ಅವರೇ 2028ರವರೆಗೆ ಅವರೇ ಸಿಎಂ ಆಗಿರಬೇಕು ಎಂದು ನನ್ನನ್ನೂ ಸೇರಿ ಸುಮಾರು ಕಾಂಗ್ರೆಸ್ ಶಾಸಕರಿಗೆ ಇರಬಹುದು. ಆದರೆ ಅದೆಲ್ಲಾ ನಮ್ಮ ಬಯಕೆ, ಅಲ್ಟಿಮೇಟ್ ಆಗಿ ನಮ್ಮ ಹೈಕಮಾಂಡ್ ಏನು ನಿರ್ಧಾರ ಮಾಡುತ್ತೋ ಅದೇ ಫೈನಲ್ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ, ಅಥವಾ ಮುಂದುವರಿಯುವುದಿಲ್ಲ ಎನ್ನುವುದಕ್ಕೆ ನಾನು ಉತ್ತರ ಕೊಡಲು ಸಾಧ್ಯವಾಗುವುದಿಲ್ಲ. ಹೈಕಮಾಂಡ್ ನಿರ್ಧರಿಸಿದರೆ ಏನು ಬೇಕಾದರೂ ಆಗಬಹುದು ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಇನ್ನು, ವೀರಪ್ಪ ಮೊಯ್ಲಿ ಹೇಳಿಕೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ವೀರಪ್ಪ ಮೊಯ್ಲಿಯವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಮತ್ತು ಅದರ ಸುತ್ತ ಚರ್ಚೆ ಮಾಡುವ ಅವಶ್ಯಕತೆಯಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ವೀರಪ್ಪ ಮೊಯ್ಲಿಯವರ ಕೊಡುಗೆ ಅಪಾರ. ಅವರು ಮತ್ತೆ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತ, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದ್ದರು. ಡಿಕೆಶಿ ಸಿಎಂ ಆಗುವುದು ಪಕ್ಕಾ, ನಾನು ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಕೂಡಾ ಹೇಳಿದ್ದರು.



Read more

[wpas_products keywords=”deal of the day sale today offer all”]